Wednesday, 18th October 2017  

Vijayavani

1. ರಾತ್ರಿ ಹಾಕಿದ ಟಾರು ಬೆಳಗ್ಗೆ ಕಿತ್ತುಬಂತು- ಸರ್ಕಾರದಿಂದ ಕಾಟಾಚಾರದ ಗುಂಡಿ ಮುಚ್ಚೋಕಾರ್ಯ- ಕೋಟ್ಯಾಂತರ ರೂಪಾಯಿ ನೀರಲ್ಲಿ ಹೋಮ 2. ಬರಿಗೈಯಲ್ಲಿ ಕಾರ್ಮಿಕನಿಂದ ಮಾನ್​ಹೋಲ್​ ಸ್ವಚ್ಛತೆ- ಸುರಕ್ಷಾ ಸಾಧನ ನೀಡಿದ ಮಹಾನಗರ ಪಾಲಿಕೆ- ಮಂಗಳೂರಿನಲ್ಲಿ ಅಮಾನವೀಯ ಘಟನೆ 3. ಪರಿಸರ ಉಳಿಸಿ, ಪಟಾಕಿ ತ್ಯಜಿಸಿ ಅಭಿಯಾನಕ್ಕೆ ಆಕ್ಷೇಪ- ವರ್ತಕರೊಂದಿಗೆ ಪರಿಸರ ಪ್ರೇಮಿಗಳ ವಾಗ್ವಾದ- ಮೈಸೂರಿನಲ್ಲಿ ಪಟಾಕಿ ಜಟಾಪಟಿ 4. ಅನೈತಿಕ ಸಂಬಂಧ ತಿಳಿದು ಗಂಡ ಬಿಟ್ಟ- ಪ್ರಿಯಕರನಿಗಾಗಿ ಮಗಳಿಗೆ ಕೊಟ್ಲು ಕಾಟ- ಗಂಗಾವತಿಯ ಹಿರೇಜಂತಕಲ್​ನಲ್ಲಿ ಕ್ರೂರಿ ತಾಯಿ 5. ನೋಟ್​ಬ್ಯಾನ್​ ವಿಚಾರದಲ್ಲಿ ಕಮಲ್​ ಉಲ್ಟಾ- ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕ್ಷಮೆಯಾಚನೆ- ಇದು ಕಮಲ್​ ಹೊಸ ರಾಜಕೀಯ ಆಟ
Breaking News :

ಸೌರಾಷ್ಟ್ರಕ್ಕೆ ಉತ್ತಪ್ಪ ಸೇರ್ಪಡೆ

Friday, 11.08.2017, 3:00 AM       No Comments

ನವದೆಹಲಿ: ಕರ್ನಾಟಕ ರಣಜಿ ತಂಡವನ್ನು ತ್ಯಜಿಸಿದ ಬಳಿಕ ರಾಬಿನ್ ಉತ್ತಪ್ಪ ಇನ್ನು ಯಾವ ತಂಡ ಸೇರುವರೆಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. 15 ವರ್ಷಗಳಿಂದ ಕರ್ನಾಟಕ ತಂಡದ ಪರ ಆಡಿದ್ದ 31 ವರ್ಷದ ಬ್ಯಾಟ್ಸ್ ಮನ್ ಉತ್ತಪ್ಪ 2017-18ರ ದೇಶೀಯ ಕ್ರಿಕೆಟ್ ಋತುವಿನಲ್ಲಿ ಸೌರಾಷ್ಟ್ರ ತಂಡದ ಪರ ಆಡಲಿದ್ದಾರೆ. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಸ್​ಸಿಎ) ಗುರುವಾರ ಇದನ್ನು ಅಧಿಕೃತಗೊಳಿಸಿದೆ.

‘ಉತ್ತಪ್ಪ ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ (ಕೆಎಸ್​ಸಿಎ) ಅಗತ್ಯವಿದ್ದ ಎಲ್ಲ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ. ಉತ್ತಪ್ಪ ಅವರಿಗೆ ನಮ್ಮ ತಂಡಕ್ಕೆ ಸ್ವಾಗತ. ಅವರು ಅನುಭವ ಹಾಗೂ ಅತ್ಯುತ್ತಮ ನಿರ್ವಹಣೆಯೊಂದಿಗೆ ಸೌರಾಷ್ಟ್ರ ರಣಜಿ ಟೀಮ್ೆ ಬಲ ತುಂಬುವ ವಿಶ್ವಾಸವಿದೆ’ ಎಂದು ಎಸ್​ಸಿಎ ಮೀಡಿಯಾ ಮ್ಯಾನೇಜರ್ ಹಿಮಾಂಶು ಷಾ ತಿಳಿಸಿದ್ದಾರೆ. ಇದರೊಂದಿಗೆ ಉತ್ತಪ್ಪ ಮುಂದಿನ ರಣಜಿಯಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾರೊಂದಿಗೆ ಕಣಕ್ಕಿಳಿಯಲಿದ್ದಾರೆ. 2016-17ರ ಅವಧಿಯಲ್ಲಿ ಉತ್ತಪ್ಪ ಕರ್ನಾಟಕ ತಂಡದ ಪರ ನೀರಸ ನಿರ್ವಹಣೆ ತೋರಿದ್ದರಿಂದ ನಿರ್ಣಾಯಕ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಬೇರೆ ರಾಜ್ಯ ತಂಡದ ಪರ ಆಡುವ ನಿರ್ಧಾರ ಮಾಡಿಕೊಂಡ ಉತ್ತಪ್ಪ ಕೆಎಸ್​ಸಿಎಯಿಂದ ಎನ್​ಒಸಿ ಪಡೆದಿದ್ದರು. ಬೆನ್ನಲ್ಲೇ ಅವರು ಕೇರಳ ಅಥವಾ ಹೈದರಾಬಾದ್ ತಂಡದ ಪರ ಆಡುವುದಾಗಿ ಸುದ್ದಿಯಾಗಿತ್ತು.

 

ಸೌರಾಷ್ಟ್ರ ವಿರುದ್ಧವೇ ಕೊನೆ, ಪುನಾರಂಭ!

ಉತ್ತಪ್ಪ ಕರ್ನಾಟಕದ ತಂಡದ ಪರ ಕೊನೇ ಬಾರಿ ಆಡಿದ್ದು ಸೌರಾಷ್ಟ್ರ ತಂಡದ ವಿರುದ್ಧ! ಇದೀಗ ಅದೇ ತಂಡದ ಪರ ದೇಶೀಯ ಕ್ರಿಕೆಟ್​ನ 2ನೇ ಇನಿಂಗ್ಸ್ ಆರಂಭಿಸಲಿರುವುದು ಕಾಕತಾಳೀಯ ಎನ್ನಬಹುದು. ಅಂದರೆ ಕಳೆದ ರಣಜಿಯಲ್ಲಿ ಉತ್ತಪ್ಪ ಸೌರಾಷ್ಟ್ರದ ವಿರುದ್ಧ 2 ಇನಿಂಗ್ಸ್​ಗಳಲ್ಲಿ ಕ್ರಮವಾಗಿ 14 ಹಾಗೂ 8ರನ್ ಗಳಿಸಿ ವಿಫಲರಾಗಿದ್ದರು. ಆ ಪಂದ್ಯವನ್ನು ಕರ್ನಾಟಕ 4 ವಿಕೆಟ್​ಗಳಿಂದ ಸೋತಿತ್ತು.

 

ಹದಿನೈದು ವರ್ಷಗಳ ಕರ್ನಾಟಕ ಸೇವೆಗೆ ಬ್ರೇಕ್

ರಾಬಿನ್ ಉತ್ತಪ್ಪ ಕಳೆದ 15 ವರ್ಷಗಳ ಕರ್ನಾಟಕ ಕ್ರಿಕೆಟ್ ಸೇವೆಗೆ ವಿದಾಯ ಹೇಳಿದಂತಾಗಿದೆ. 2002-03ರಲ್ಲಿ ರಾಜ್ಯ ತಂಡದ ಪರ ಪದಾರ್ಪಣೆ ಮಾಡಿದ್ದ ಉತ್ತಪ್ಪ 101 ಪ್ರಥಮ ದರ್ಜೆ ಪಂದ್ಯಗಳಲ್ಲಿ 18 ಶತಕಗಳೊಂದಿಗೆ 6865 ರನ್ ದಾಖಲಿಸಿದ್ದಾರೆ. ವಿಕೆಟ್ ಕೀಪರ್ ಹಾಗೂ ಫೀಲ್ಡರ್ ಆಗಿ ಉತ್ತಪ್ಪ 102 ಕ್ಯಾಚ್ ಮತ್ತು 2 ಸ್ಟಂಪಿಂಗ್ ಮಾಡಿದ್ದಾರೆ. ಆದರೆ ಕಳೆದ ರಣಜಿ ಆವೃತ್ತಿಯಲ್ಲಿ ಅಸ್ಥಿರ ನಿರ್ವಹಣೆ ತೋರಿದ್ದರಿಂದ ಉತ್ತಪ್ಪರನ್ನು ಕೊನೇ ಲೀಗ್ ಹಾಗೂ ಕ್ವಾರ್ಟರ್​ಫೈನಲ್ ಪಂದ್ಯದಿಂದ ಕೈಬಿಡಲಾಗಿತ್ತು. ಈ ಅನಿರೀಕ್ಷಿತ ಬೆಳವಣಿಗೆ ಉತ್ತಪ್ಪ ಅವರನ್ನು ಬೇರೆ ರಾಜ್ಯಕ್ಕೆ ವಲಸೆ ಹೋಗುವ ಯೋಚನೆಗೆ ತಳ್ಳಿತ್ತು.

Leave a Reply

Your email address will not be published. Required fields are marked *

Back To Top