Saturday, 22nd September 2018  

Vijayavani

‘ದಂಗೆ’ ಬಿಸಿ ತಟ್ಟುತ್ತಿದ್ದಂತೆ ದೇವರ ಸ್ತುತಿ - ಶಾರದಂಬೆ ಸನ್ನಿಧಿಯಲ್ಲಿ ಎಚ್​​ಡಿಕೆ - ಸಿಎಂಗೆ ಅಣ್ಣ ರೇವಣ್ಣ ಸಾಥ್​        ರಾಜ್ಯ ರಾಜಕೀಯ ಹಾಸನಕ್ಕೆ ಶಿಫ್ಟ್​ - ಇಂದು ಹಾಸನದಲ್ಲಿ ಜೆಡಿಎಲ್​​ಪಿ ಮೀಟಿಂಗ್​ - ದಳನಾಯಕರಿಂದ ರಣತಂತ್ರದ ಚರ್ಚೆ        ಸಿಎಂ ದಂಗೆ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ - ಇಂದು ಕೂಡ ಹಲವೆಡೆ ಹೋರಾಟ ಸಂಭವ        ಇಂದು ಚಿಕ್ಕಮಗಳೂರಲ್ಲಿ ಸಿಎಂ ಮೀಟಿಂಗ್​ - ಅತಿವೃಷ್ಟಿ, ಅನಾವೃಷ್ಟಿ ಕುರಿತು ಚರ್ಚೆ - ಸಿಎಂಗೆ ವರದಿ ನೀಡಲಿರುವ ಡಿಸಿ        ರಾಫೆಲ್​​ ವಿಮಾನ​​​​ ಖರೀದಿ ಹಗರಣ - ಭಾರತವೇ ಅನಿಲ್​ ಅಂಬಾನಿ ಹೆಸರು ಸೂಚಿಸಿತ್ತು - ವಿವಾದಕ್ಕೆ ತುಪ್ಪ ಸುರಿದ ಹೊಲೆಂಡೆ ಹೇಳಿಕೆ        ಭುಗಿಲೆದ್ದಿರುವ ರಫೇಲ್​​ ಡೀಲ್​ ಹಗರಣ - ಪ್ರಕಟಣೆ ಹೊರಡಿಸಿದ ಫ್ರಾನ್ಸ್​​ ಸರ್ಕಾರ - ಕಂಪನಿಗಳ ಮೇಲೆ ಹಸ್ತಕ್ಷೇಪ ಇಲ್ಲವೆಂದು ಸ್ಪಷ್ಟನೆ       
Breaking News

ಸೋಲು ಹೊಸದಲ್ಲ, ಪರಾಮರ್ಶೆಗೂ ಹೋಗಲ್ಲ

Wednesday, 13.06.2018, 3:02 AM       No Comments

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿರುವ ಕುರಿತು ನಾನು ಯಾವುದೇ ವಿಮರ್ಶೆ ಮಾಡಲು ಹೋಗುವುದಿಲ್ಲ. ಜನರು ತೀರ್ಪು ನೀಡಿದ್ದಾರೆ. ಅದನ್ನು ಒಪ್ಪಿಕೊಳ್ಳಬೇಕಾಗಿದ್ದು, ಸೋಲು ನನಗೆ ಮೊದಲಲ್ಲವಾಗಿರುವುದರಿಂದ ಇದು ಶಾಕ್ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹತಾಶೆ ಭಾವದಿಂದಲೇ ಹೇಳಿದರು. ಬಾದಾಮಿ ಜನ ನನ್ನ ಕೈ ಹಿಡಿದಿರುವುದರಿಂದ ಅಲ್ಲಿಗೆ ತೆರಳಿ ಐದು ದಿನ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಬಂದಿದ್ದೇನೆ. ಈಗ ಡಾ.ಯತೀಂದ್ರ ಅವರನ್ನು ವರುಣ ಕ್ಷೇತ್ರದ ಜನರು ಭಾರಿ ಅಂತರದಿಂದ ಗೆಲ್ಲಿಸಿದ್ದಾರೆ. ಹಾಗಾಗಿ ಇಲ್ಲಿನ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ ಎಂದರು. ಬಿಜೆಪಿಯವರು ಇತ್ತೀಚೆಗೆ ನಿಮ್ಮ ಬಗ್ಗೆ ಒಲವು ತೋರಿಸುವ ಮಾತುಗಳನ್ನು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಕರ್ನಾಟಕದ ಎಲ್ಲ ಜನರು ನನ್ನನ್ನು ಪ್ರೀತಿಸುತ್ತಾರೆ. ಬಿಜೆಪಿಯವರೂ ಪ್ರೀತಿ ತೋರುತ್ತಿದ್ದಾರೆ. ಅವರಿಗೂ ಥ್ಯಾಂಕ್ಸ್ ಎಂದರು. ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆಯೇ ಹೊರತು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ನಾನು ಹಿಂದಿನ ಹೇಳಿಕೆಯನ್ನು ಯಾವಾಗಲಾದರೂ ಬದಲಿಸಿದ್ದನ್ನು ನೋಡಿದ್ದೀರಾ ಎಂದು ಮರು ಪ್ರಶ್ನಿಸಿದರು.

ಸಿರಿ ಬಂದರೆ ಕಾಣಲ್ಲ ಬಿಡು..

ತಮ್ಮನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ಸಚಿವ ಪುಟ್ಟರಂಗಶೆಟ್ಟಿ ಕುಶಲೋಪರಿ ವಿಚಾರಿಸಿದ ಸಿದ್ದರಾಮಯ್ಯ, ಅಧಿಕಾರ ಸ್ವೀಕಾರ ಮಾಡಿದ್ರಾ? ಅಧಿಕಾರಿಗಳ ಸಭೆ ನಡೆಸಿದ್ರಾ? ಎಂದರು. ಅಧಿಕಾರ ಸ್ವೀಕಾರ ಮಾಡಿದ್ದೇನೆ. ಅಧಿಕಾರಿಗಳ ಸಭೆ ನಡೆಸಿಲ್ಲ ಎಂದ ಪುಟ್ಟರಂಗಶೆಟ್ಟಿ, ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ನೀವು ಕಾಣಲಿಲ್ಲ ಎಂದರು. ಅದಕ್ಕೆ ‘ಅಧಿಕಾರ ಬಂದ ಮೇಲೆ ನಾವೆಲ್ಲ ಕಾಣಲ್ಲ’ ಎಂದು ಕಾಲೆಳೆದರಲ್ಲದೆ, ಕೈಲಾದಷ್ಟು ಉತ್ತಮ ಕೆಲಸ ಮಾಡಿ ಜನಸೇವೆ ಮಾಡಬೇಕು ಎಂದು ಬುದ್ಧಿವಾದ ಹೇಳಿದರು.

ಜನರೇ ಟೋಪಿ ಹಾಕಿದ್ದಾರೆ, ಬಿಡಪ್ಪಾ!

ಮೈಸೂರು: ‘ಜನರೇ ಟೋಪಿ ಹಾಕಿದ್ದಾರೆ. ನೀನು ಯಾಕೆ ಹಾಕುತ್ತೀಯಾ ಬಿಡಪ್ಪಾ..’ ಎಂದು ಅಭಿಮಾನಿಯೊಬ್ಬರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲೆಳೆದರು. ಚಾಮುಂಡೇಶ್ವರಿ ಸೋಲಿನ ಬಳಿಕ ಮಂಗಳವಾರ ನಗರಕ್ಕೆ ಮೊದಲ ಬಾರಿಗೆ ಆಗಮಿಸಿದ ಸಿದ್ದರಾಮಯ್ಯರನ್ನು ಭೇಟಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ಮನೆ ಬಳಿ ನೆರೆದಿದ್ದರು. ಈ ವೇಳೆ ಬಂದ ಚಂದನ್, ಶಾಲು-ಪೇಟ ತೋರಿಸಿ ಸನ್ಮಾನಿಸಬೇಕು ಎಂದಾಗ ಕೈ ಸನ್ನೆಯಲ್ಲಿ ಬರುವಂತೆ ಸಿದ್ದರಾಮಯ್ಯ ಹತ್ತಿರ ಕರೆದರು. ಶಾಲು ಹಾಕಿ ಪೇಟ ತೊಡಿಸುತ್ತಿದ್ದಾಗ, ‘ಹೇ ಇದೆಲ್ಲ ಯಾಕಪ್ಪ. ಜನರೇ ಟೋಪಿ ಹಾಕಿದ್ರು ಇನ್ನೇನು..’ ಎಂದು ಹತಾಶೆ ತುಂಬಿದ ನಗುವಿನಲ್ಲಿ ಹಾಸ್ಯ ಚಟಾಕಿ ಹಾರಿಸಿದರು.

ಜೂನ್ 14ರಂದು ಸಮನ್ವಯ ಸಮಿತಿ ಸಭೆ ನಡೆಯಲಿದೆ. ಆಬಳಿಕ 10 ದಿನ ಧರ್ಮಸ್ಥಳದ ನೈಸರ್ಗಿಕ ಚಿಕಿತ್ಸಾಲಯಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತೇನೆ. ಆರೋಗ್ಯ ಚೆನ್ನಾಗಿಯೇ ಇದೆ. ಜನರಲ್ ಚಿಕಿತ್ಸೆ ಅಷ್ಟೇ.

| ಸಿದ್ದರಾಮಯ್ಯ ಮಾಜಿ ಸಿಎಂ

Leave a Reply

Your email address will not be published. Required fields are marked *

Back To Top