Tuesday, 16th January 2018  

Vijayavani

ಮತ್ತೊಂದು ಟ್ವೀಟ್‌ ಮಾಡಿ ಕೆಣಕಿದ ಪಾಲ್ಯೇಕರ್ - ಕಣಕುಂಬಿ ಕಾಮಗಾರಿ ಪರಿಶೀಲನೆಗೆ ನಾಲ್ವರ ತಂಡ ರಚನೆ - ಗೋವಾ ಸಚಿವನ ವಿರುದ್ಧ ಸಿಎಂ ಆಕ್ರೋಶ        ಪರಮೇಶ್ವರ್‌ಗೂ ಕಂಟಕವಾಯ್ತು ಸದಾಶಿವ ಆಯೋಗ - ವರದಿ ವಿರೋಧಿಸಿದ್ದಕ್ಕೆ ಸ್ವಕ್ಷೇತ್ರದಲ್ಲೇ ಆಕ್ರೋಶ - ಮತ ಹಾಕದಿರಲು ಮಾದಿಗ ಮುಖಂಡರ ನಿರ್ಧಾರ        ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಮತ್ತೆ ಕೀಚಕ ಕೃತ್ಯ - ಇಂದಿರಾನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ - ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ        ಕೊನೆಗೂ ಮೌನ ಮುರಿದ ಸುಪ್ರೀಂಕೋರ್ಟ್‌ ಸಿಜೆ - ಬಂಡಾಯ ನ್ಯಾಯಮೂರ್ತಿಗಳ ಜತೆ ದೀಪಕ್‌ ಮಿಶ್ರ ಚರ್ಚೆ - 15 ನಿಮಿಷಗಳ ಕಾಲ ಸಂಧಾನ ಮಾತುಕತೆ        ಚೆಂಡು ನೆಲಕ್ಕೆ ಎಸೆದ ವಿರಾಟ್‌ಗೆ ಐಸಿಸಿ ತರಾಟೆ - ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿಟ್ಟಾದ ಕೊಹ್ಲಿಗೆ ದಂಡ - ಪಂದ್ಯದ 25 ಪರ್ಸೆಂಟ್‌ ಸಂಭಾವನೆ ಕಡಿತ       
Breaking News :

ಸೋನಾಕ್ಷಿಗೆ ಸಲ್ಲುನೇ ಬೆಸ್ಟ್ ಫ್ರೆಂಡ್

Friday, 12.01.2018, 3:02 AM       No Comments

2010ರಲ್ಲಿ ತೆರೆಕಂಡ ‘ದಬಂಗ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದ ಸೋನಾಕ್ಷಿ ಸಿನ್ಹಾ ಇಂದು ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಕಲೆ ಗುರುತಿಸಿ, ಸಿನಿಮಾ ಇಂಡಸ್ಟ್ರಿಗೆ ಕರೆತಂದ ಖ್ಯಾತಿ ಸಲ್ಮಾನ್ ಖಾನ್​ಗೆ ಸಲ್ಲುತ್ತದೆ. ಹೀಗಾಗಿ ಸೋನಾಕ್ಷಿಗೆ ಸಲ್ಲು ಕಂಡರೆ ಹೆಚ್ಚಿನ ಅಭಿಮಾನ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸೋನಾಕ್ಷಿ ಈ ಕುರಿತು ಮಾತನಾಡಿದ್ದಾರೆ. ಇಷ್ಟೇ ಅಲ್ಲ ‘ಬಾಲಿವುಡ್​ನಲ್ಲಿ ಯಾರಾದರೂ ಒರ್ವ ಬೆಸ್ಟ್ ಫ್ರೆಂಡ್ ಎಂದಿದ್ದರೆ ಅದು ಸಲ್ಮಾನ್’ ಎಂದು ಮನಸಾರೆ ನುಡಿದಿದ್ದಾರೆ ಸೋನು. ‘ಸಲ್ಮಾನ್ ಒಳ್ಳೆಯ ನಟ. ಅವರ ಜತೆ ಕೆಲಸ ಮಾಡುವುದೆಂದರೆ ಸಂತಸದ ವಿಚಾರ. ಅನೇಕ ವರ್ಷಗಳಿಂದ ಅವರು ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅವರ ಖಾತೆಯಲ್ಲಿ ಅನೇಕ ದಾಖಲೆಗಳಿವೆ. ಬಾಲಿವುಡ್​ನಲ್ಲಿ ನನಗೆ ಅವರು ಒಳ್ಳೆಯ ಗೆಳೆಯ. ಅವರ ಮೇಲೆ ಹೆಚ್ಚಿನ ಅಭಿಮಾನವಿದೆ’ ಎಂದಿದ್ದಾರೆ ಸೋನಾಕ್ಷಿ. ಅವರಿಬ್ಬರ ನಡುವಿನ ಸ್ನೇಹ ತೆರೆಮೇಲೂ ಮುಂದುವರಿದಿದೆ. ಬಹುನಿರೀಕ್ಷಿತ ‘ದಬಂಗ್ 3’ ಚಿತ್ರಕ್ಕೆ ನಾಯಕಿಯಾಗಿ ಸೋನಾಕ್ಷಿ ಆಯ್ಕೆ ಆಗಿದ್ದಾರೆ. ಇದು ಅಭಿಮಾನಿಗಳಲ್ಲಿ ಇನ್ನಷ್ಟು ನಿರೀಕ್ಷೆ ಮೂಡಿಸಿದೆ. ಕಳೆದ ಮೂರು ವರ್ಷಗಳಿಂದ ಸೋನಾಕ್ಷಿ ಖಾತೆಯಲ್ಲಿ ಯಾವುದೇ ಗೆಲುವು ದಾಖಲಾಗಿಲ್ಲ. ಘಟಾನುಘಟಿ ನಿರ್ದೇಶಕರ ಜತೆ ಕೆಲಸ ಮಾಡಿದರೂ ಸೋಲು ತಪ್ಪಿಲ್ಲ. ಹಾಗಾಗಿ, ‘ದಬಂಗ್ 3’ ಮೂಲಕವಾದರೂ ಗೆಲ್ಲಲೇ ಬೇಕಾದ ಅನಿವಾರ್ಯತೆ ಅವರಿಗೆ ಇದೆ.

‘ದಬಂಗ್’ ಸರಣಿಯ ಮೊದಲೆರಡು ಚಿತ್ರಗಳಲ್ಲೂ ಸೋನು ಮತ್ತು ಸಲ್ಲು ಜೋಡಿಯಾಗಿ ಕಾಣಿಸಿಕೊಂಡಿದ್ದರು. ಗಲ್ಲಾಪೆಟ್ಟಿಗೆಯಲ್ಲೂ ಚಿತ್ರಗಳಿಗೆ ಭಾರಿ ಲಾಭ ಆಗಿತ್ತು. ಈಗ ಸಿನಿರಸಿಕರ ಕಣ್ಣು ‘ದಬಂಗ್ 3’ ಮೇಲೆ ಬಿದ್ದಿದೆ. ‘ದಬಂಗ್’ ಚಿತ್ರವನ್ನು ಅಭಿನವ್ ಕಶ್ಯಪ್ ನಿರ್ದೇಶಿಸಿದ್ದರೆ, ಅರ್ಬಾಜ್ ಖಾನ್ ‘ದಬಂಗ್ 2’ಗೆ ಆಕ್ಷನ್-ಕಟ್ ಹೇಳಿದ್ದರು. ಹಾಗಾದರೆ ‘ದಬಂಗ್ 3’ ಯಾವ ನಿರ್ದೇಶಕನ ತೆಕ್ಕೆಗೆ ಬೀಳಲಿದೆ ಎಂಬ ಸಿನಿಪ್ರಿಯರ ಪ್ರಶ್ನೆಗೆ ಉತ್ತರವಾಗಿ ಪ್ರಭುದೇವ ಹೆಸರು ಕೇಳಿಬಂದಿದೆ. ಚಿತ್ರದಲ್ಲಿ ಸಲ್ಮಾನ್ ಮತ್ತು ಸೋನಾಕ್ಷಿ ಮಾತ್ರವಲ್ಲದೆ ಮೌನಿ ರಾಯ್ ಕೂಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಶೂಟಿಂಗ್ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

 

Leave a Reply

Your email address will not be published. Required fields are marked *

Back To Top