Wednesday, 15th August 2018  

Vijayavani

ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ: ಕೆಆರ್‌ಎಸ್‌ಗೆ ಭಾರಿ ಒಳಹರಿವು, ಡ್ಯಾಂನಿಂದ 1.50 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ        ಹಾಸನದಲ್ಲಿ ಮಳೆ ಅಬ್ಬರ: ಶಿರಾಡಿಘಾಟ್‌ನಲ್ಲಿ ಅನಿಲ ಟ್ಯಾಂಕ್‌ ಪಲ್ಟಿ, ಸೋಮವಾರ ಪೇಟೆ ಹೆದ್ದಾರಿ ಬಿರುಕು        ಉಕ್ಕಿಹರಿಯುತ್ತಿದೆ ತುಂಗಭದ್ರ: ದಾವಣಗೆರೆ ಜಿಲ್ಲೆಯಲ್ಲಿ ಬೆಳೆ ನಾಶ, ಕಂಪ್ಲಿ ಸೇತುವೆ ನೀರಲ್ಲಿ ಮುಳುಗಡೆ        ಕೆಂಪು ಕೋಟೆ ಮೇಲೆ ಮೋದಿ ಧ್ವಜರೋಹಣ: ಸರ್ಕಾರದ ಸಾಧನೆಗಳ ಬಣ್ಣನೆ, ಆಯುಷ್ಮಾನ್‌ ಭಾರತ ಘೋಷಣೆ       
Breaking News

ಸೋತ ಹೀರೋಗಳ ಜಿದ್ದಾಜಿದ್ದಿ

Friday, 27.01.2017, 2:11 AM       No Comments

ಬಾಲಿವುಡ್​ನ ಸ್ಟಾರ್ ನಟರಾದ ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್ ಮೊದಲ ಬಾರಿಗೆ ಬಾಕ್ಸ್ ಆಫೀಸ್​ನಲ್ಲಿ ಮುಖಾಮುಖಿಯಾಗಿದ್ದಾರೆ. ಬಹುನಿರೀಕ್ಷಿತ ‘ರಯೀಸ್’ ಚಿತ್ರದ ಮೂಲಕ ಶಾರುಖ್ ಅಖಾಡಕ್ಕಿಳಿದಿದ್ದರೆ, ಮೊದಲ ಬಾರಿಗೆ ಅಂಧನ ಪಾತ್ರದ ಮೂಲಕ ಹೃತಿಕ್ ‘ಕಾಬಿಲ್’ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಶಾರುಖ್ ಮತ್ತು ಹೃತಿಕ್​ಗೆ ಈ ಚಿತ್ರಗಳು ಬಹುಮುಖ್ಯವಾಗಿವೆ. ಯಾಕೆಂದರೆ, ಈ ಸ್ಟಾರ್ ನಟರು ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. ‘ಹ್ಯಾಪಿ ನ್ಯೂ ಇಯರ್’ ಚಿತ್ರ ಕಾಸು ಮಾಡಿದ್ದು ಬಿಟ್ಟರೆ, ವಿಮರ್ಶಕರಿಂದ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ ಪಡೆಯಿತು. ‘ದಿಲ್​ವಾಲೆ’, ‘ಫ್ಯಾನ್’ ಚಿತ್ರಗಳು ಶಾರುಖ್ ವೃತ್ತಿಜೀವನದ ದೊಡ್ಡ ಸೋಲುಗಳಾದವು. ‘ಡಿಯರ್ ಜಿಂದಗಿ’ ಯಶಸ್ಸು ಕಂಡಿತಾದರೂ ಚಿತ್ರದಲ್ಲಿ ಶಾರುಖ್​ಗಿಂತ ಹೆಚ್ಚು ಮಿಂಚಿದ್ದು ಆಲಿಯಾ ಭಟ್. ಹಾಗಾಗಿ, ಶಾರುಖ್ ಪಾಲಿಗೆ ‘ರಯೀಸ್’ ಮಹತ್ವದ ಚಿತ್ರವಾಗಿದೆ.

ಹೃತಿಕ್ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ. ‘ಬ್ಯಾಂಗ್ ಬ್ಯಾಂಗ್’ ಸೂಪರ್ ಹಿಟ್ ಎನಿಸಿಕೊಂಡಿದ್ದು ಹೃತಿಕ್ ಮೇಲಿನ ಅಭಿಮಾನದಿಂದಲೇ ಹೊರತು, ಕಥೆಯಿಂದಲ್ಲ. ಬಹುನಿರೀಕ್ಷಿತ ‘ಮೊಹೆಂಜೋ ದಾರೋ’ ಬಾಕ್ಸ್ ಆಫೀಸ್​ನಲ್ಲಿ ಹೀನಾಯವಾಗಿ ನೆಲಕಚ್ಚಿತ್ತು. ‘ಕಾಬಿಲ್’ ಹೃತಿಕ್ ಅವರ ಹೋಮ್ ಬ್ಯಾನರ್​ನಲ್ಲಿ ನಿರ್ವಣವಾಗಿರುವ ಚಿತ್ರವಾಗಿರುವುದರಿಂದ ಗೆಲುವು ಅನಿವಾರ್ಯವಾಗಿದೆ. ಇದೀಗ ಫಸ್ಟ್ ಡೇ ಕಲೆಕ್ಷನ್ ಗಮನಿಸಿದರೆ, ಹೃತಿಕ್​ಗಿಂತ ಶಾರುಖ್ ಮುಂದಿರುವುದು ಸ್ಪಷ್ಟವಾಗಿದೆ. ಯಾಕೆಂದರೆ, ‘ಕಾಬಿಲ್’ ಮೊದಲ ದಿನ ಗಳಿಸಿರುವುದು 10.43 ಕೋಟಿ ರೂ. ಮಾತ್ರ. ಆದರೆ ‘ರಯೀಸ್’ ಗಳಿಕೆ 20.42 ಕೋಟಿ ರೂ. ತಲುಪಿದೆ! ಹಾಗೆ ನೋಡಿದರೆ ಇವರಿಬ್ಬರು ಸ್ಟಾರ್ ಹೀರೋಗಳೇ. ಹೀಗಿದ್ದರೂ ಕಲೆಕ್ಷನ್ ಪ್ರಮಾಣ ಮಾತ್ರ ಕಡಿಮೆಯಾಗಿದೆ. ಎರಡು ಚಿತ್ರಗಳು ಒಂದೇ ದಿನ ತೆರೆಕಂಡಿರುವುದು ಕೂಡ ಇದಕ್ಕೆ ಕಾರಣ ಎನ್ನಲಾಗಿದೆ. ವಿಶೇಷವೆಂದರೆ, ಈ ಚಿತ್ರಗಳೆರಡು ಅವರವರ ಹೋಮ್ ಬ್ಯಾನರ್​ನಲ್ಲೇ ನಿರ್ವಣವಾಗಿವೆ.

ಹೃತಿಕ್ ರೋಷನ್ ಅವರ ಈ ಹಿಂದಿನ ‘ಮೊಹೆಂಜೋ ದಾರೋ’ ಚಿತ್ರದ ಕಲೆಕ್ಷನ್​ಗೆ (8.87 ಕೋ) ಹೊಲಿಸಿದರೆ ‘ಕಾಬಿಲ್’ನ ಗಳಿಕೆ ಸಮಾಧಾನಕರ. ಆದರೆ ‘ಕ್ರಿಷ್ 3’ (19 ಕೋ), ‘ಅಗ್ನಿಪಥ್’(23 ಕೋ), ‘ಬ್ಯಾಂಗ್ ಬ್ಯಾಂಗ್’ (27.54 ಕೋ) ಚಿತ್ರಗಳನ್ನು ಗಣನೆಗೆ ತೆಗೆದುಕೊಂಡರೆ, ‘ಕಾಬಿಲ್’ನ ಈ ಗಳಿಕೆ ತೀರಾ ಕಮ್ಮಿ. ಶಾರುಖ್​ಗೆ ‘ರಯೀಸ್’ನ ಕಲೆಕ್ಷನ್ ಕೊಂಚ ಸಮಾಧಾನ ತಂದಿರಬಹುದು. ಈ ಹಿಂದಿನ ‘ದಿಲ್​ವಾಲೆ’, ‘ಫ್ಯಾನ್’ ಚಿತ್ರಗಳು ಮೊದಲ ದಿನ ಇಷ್ಟೇ ಪ್ರಮಾಣದ ಕಮಾಯಿ ಮಾಡಿದ್ದವು.

ಈ ಚಿತ್ರ ಬುಧವಾರ ತೆರೆಕಂಡಿರುವುದರಿಂದ ವಾರಾಂತ್ಯದೊತ್ತಿಗೆ ಶತಕೋಟಿ ರೂ. ಕ್ಲಬ್ ಸೇರುವ ಲಕ್ಷಣಗಳಿವೆ.

Leave a Reply

Your email address will not be published. Required fields are marked *

Back To Top