Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ಸೊಳ್ಳೆಗಳನ್ನು ದೂರವಿಡಿ

Saturday, 01.07.2017, 3:00 AM       No Comments

ತ್ತೀಚಿನ ದಿನಗಳಲ್ಲಿ ಸೊಳ್ಳೆ ಕಡಿತದಿಂದ ಡೆಂಘೆ, ಎಚ್1ಎನ್1, ಚಿಕೂನ್​ಗೂನ್ಯದಂತಹ ಕಾಯಿಲೆಗಳು ಹೆಚ್ಚುತ್ತಿವೆ. ಮಾಮೂಲಿ ಜ್ವರದಂತೆ ಬರುವ ಈ ಕಾಯಿಲೆ ಬಗ್ಗೆ ಎಚ್ಚರ ವಹಿಸಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಪ್ರಾಣಕ್ಕೆ ಎರವಾಗುವ ಸಂಭವವಿದೆ. ಅದರಲ್ಲೂ ಡೆಂಘೆ ಉಳಿದ ಕಾಯಿಲೆಗಳಿಂದ ತುಸು ಹೆಚ್ಚೆ ಅಪಾಯಕಾರಿ. ಹೀಗಾಗಿ ಸಣ್ಣ ಜ್ವರ ಬಂದರೂ ವೈದ್ಯರ ಬಳಿಗೆ ತೆರಳಿ ಪರೀಕ್ಷಿಸುವುದು ಒಳಿತು. ಡೆಂಘೆ ವೈರಸ್ ಹರಡುವ ಸೊಳ್ಳೆ ಉತ್ಪತ್ತಿಯನ್ನು ತಡೆಯುವುದು ಹೇಗೆ? ರೋಗದ ಲಕ್ಷಣಗಳೇನು? ಅದರ ನಿವಾರಣೆಗೆ ಯಾವೆಲ್ಲ ಕ್ರಮ ಕೈಗೊಳ್ಳಬೇಕು? ಎಂಬುದರ ಬಗ್ಗೆ ಕೆ.ಸಿ. ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಚ್. ರವಿಕುಮಾರ್ ವಿಜಯವಾಣಿಯೊಂದಿಗೆ ಮಾತನಾಡಿದ್ದಾರೆ.

ಡೆಂಘೆ ರೋಗಕ್ಕೆ ನಿವಾರಣೆಗೆ ನಿರ್ದಿಷ್ಟ ಚಿಕಿತ್ಸೆಯಿಲ್ಲ. ಬದಲಿಗೆ ಸೊಳ್ಳೆ ಕಡಿತದಿಂದ ದೂರ ಉಳಿಯುವುದು ಮತ್ತು ರಕ್ತ ಕಣ ಹೆಚ್ಚಿಸುವ ಆಹಾರ ಸೇವನೆಯಿಂದಷ್ಟೇ ರೋಗವನ್ನು ನಿವಾರಿಸಿಕೊಳ್ಳಬಹುದು. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಸೊಳ್ಳೆ ಕಡಿತದ ರೋಗಗಳು ಹೆಚ್ಚುತ್ತವೆ. ಅದರಲ್ಲೂ ಡೆಂಘೆ ವೈರಸ್ ಹರಡುವ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗಿ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಡೆಂಘೆ ಹರಡುವ ಸೊಳ್ಳೆಗಳು ಕೊಳಚೆ ನೀರಿಗಿಂತ ಸ್ವಚ್ಛ ನೀರಿನಲ್ಲೇ ಉತ್ಪತ್ತಿಯಾಗುತ್ತವೆ. ಡೆಂಘೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಚ್ಚುತ್ತಿದ್ದು, ಅದರ ಬಗ್ಗೆ ಜನರು ಆತಂಕಕ್ಕೊಳಗಾಗುವಂತಾಗಿದೆ. ಹೀಗಾಗಿ ಸೊಳ್ಳೆಗಳ ಉತ್ಪತ್ತಿ ಮತ್ತು ಕಡಿತದ ಬಗ್ಗೆ ಎಚ್ಚರ ವಹಿಸಬೇಕು.

 

ರೋಗದ ಲಕ್ಷಣಗಳು

ಡೆಂಘೆ ಸಾಮಾನ್ಯ ಜ್ವರದಂತೆ ಕಂಡುಬರುತ್ತದೆ. ಮೊದಲು ಸಣ್ಣಗೆ ಕಾಣಿಸಿಕೊಳ್ಳುವ ಜ್ವರ ನಂತರ ತೀವ್ರವಾಗುತ್ತದೆ. ಮನುಷ್ಯನ ರಕ್ತದಲ್ಲಿ ಕನಿಷ್ಠ 1.5 ಲಕ್ಷ ರಕ್ತಕಣಗಳಿರಬೇಕು. ಆದರೆ, ಡೆಂಘೆ ಬಂದಾಗ ಅದು ಇಳಿಕೆಯಾಗುತ್ತ ಬರುತ್ತದೆ. ಅದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ರಕ್ತಸ್ರಾವ ಉಂಟಾಗುವುದು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿತ್ರಾಣ ಸ್ಥಿತಿಗೆ ತಲುಪಬೇಕಾಗುತ್ತದೆ. ಇನ್ನು, ಕೆಲವರಿಗೆ ಬಹು ಅಂಗಾಂಗ ವೈಫಲ್ಯ ಉಂಟಾಗುತ್ತದೆ. ಹೀಗಾಗಿ ಡೆಂಘೆ ಬಂದ ಕೂಡಲೆ ಚಿಕಿತ್ಸೆ ಪಡೆಯದಿದ್ದರೆ ರಕ್ತದೊತ್ತಡ ಕಡಿಮೆಯಾಗಿ ರೋಗಿ ಸಾವನ್ನಪ್ಪುವ ಸಂಭವವಿರುತ್ತದೆ.

ಜನಸಂದಣಿ ಹೆಚ್ಚಿರುವೆಡೆ ಕಾಯಿಲೆ

ಪ್ರಮುಖವಾಗಿ ಸೊಳ್ಳೆ ಹೆಚ್ಚಾಗಿ ಉತ್ಪತ್ತಿಯಾಗಲು ಅವಕಾಶವಿರುವೆಡೆ ಡೆಂಘೆ ರೋಗವೂ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಕೊಳೆಗೇರಿಗಳಲ್ಲಿ, ಜನಸಂದಣಿ ಹೆಚ್ಚಾಗಿರುವ ವಸತಿ ಪ್ರದೇಶಗಳಲ್ಲಿ ಡೆಂಘೆ ವೈರಸ್ ಹರಡುವ ಸೊಳ್ಳೆಗಳು ಹೆಚ್ಚಿರುತ್ತವೆ. ನೀರು ಸರಾಗವಾಗಿ ಹರಿಯದೆ ನಿಲ್ಲುವ ಪ್ರದೇಶಗಳಲ್ಲೂ ಸೊಳ್ಳೆ ಉತ್ಪತ್ತಿಯಾಗಿ ಡೆಂಘೆ ಹರಡುತ್ತದೆ.

ಮುನ್ನೆಚ್ಚರಿಕೆಯೇ ಮದ್ದು

ಚಿಕಿತ್ಸೆ ಪಡೆಯುವುದಕ್ಕಿಂತ ಮುಖ್ಯವಾಗಿ ಜ್ವರ ಬಂದಾಗ ನಿರ್ಲಕ್ಷಿಸದೆ ವೈದ್ಯರನ್ನು ಸಂರ್ಪಸುವುದೇ ಡೆಂಘೆ ನಿವಾರಣೆಗೆ ಪ್ರಮುಖ ಕ್ರಮವಾಗುತ್ತದೆ. ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಅಥವಾ ವೈದ್ಯರಲ್ಲಿ ಬಂದರೆ ಅದಕ್ಕೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ.

ಚಿಕಿತ್ಸೆ ಏನು?

ಡೆಂಘೆಗೆ ನಿಖರ ಚಿಕಿತ್ಸೆ ಎಂಬುದಿಲ್ಲ. ರಕ್ತ ಕಣಗಳನ್ನು ಹೆಚ್ಚಿಸುವುದು ಮತ್ತು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಮಾಡಲು ಕೆಲವೊಂದು ಔಷಧ ನೀಡಲಾಗುತ್ತದೆ. ಆದರೆ, ಜ್ವರ ಬಂದಾಗ ಮನೆ ಮದ್ದನ್ನು ನೆಚ್ಚಿಕೊಂಡು ಇರುವುದು ಒಳ್ಳೆಯದಲ್ಲ. ಅದರ ಬದಲು ವೈದ್ಯರ ಬಳಿ ಹೋಗಿ ಸಲಹೆ ಪಡೆಯಬೇಕು ಮತ್ತು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾದರೆ ಒಳಿತು. ಇನ್ನು, ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಅದರಲ್ಲೂ ಪಪ್ಪಾಯ ಸೇವಿಸಿದರೆ ಒಳಿತು. ಅದರಿಂದ ರಕ್ತ ಕಣ ಹೆಚ್ಚು ಉತ್ಪತ್ತಿಯಾಗುತ್ತದೆ. ಅದೇ ರೀತಿ ರಕ್ತದೊತ್ತಡವನ್ನು ಪ್ರತಿದಿನ ಪರೀಕ್ಷಿಸಿಕೊಳ್ಳಬೇಕು.

ಜೀವನಶೈಲಿಗೆ ಸಂಬಂಧವಿಲ್ಲ ಡೆಂಘೆ ಜ್ವರಕ್ಕೂ ಜೀವನ ಶೈಲಿಗೂ ಯಾವುದೇ ಸಂಬಂಧವಿಲ್ಲ. ಕೇವಲ ಸೊಳ್ಳೆ ಕಡಿತದಿಂದಷ್ಟೇ ಡೆಂಘೆ ಹರಡುತ್ತದೆ. ಇನ್ನು, ಡೆಂಘೆ ಬಂದು ನಿವಾರಣೆಯಾದ ನಂತರವೂ ದೇಹದ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರಾಗುವುದಿಲ್ಲ. ಹೀಗಾಗಿ ಡೆಂಘೆ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬೇಕು. ಅದಕ್ಕಾಗಿ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ತುಂಬು ತೋಳಿನ ಬಟ್ಟೆಯನ್ನು ಧರಿಸಿ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬೇಕು.

ಸಮಾಜದಲ್ಲಿ ವೈದ್ಯ ವೃತ್ತಿ ಅತ್ಯಂತ ಹೆಚ್ಚು ಗೌರವ ತಂದುಕೊಡುತ್ತದೆ. ಈ ವೃತ್ತಿಯಲ್ಲಿರುವವರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಆಸ್ಪತ್ರೆ ಮತ್ತು ಆರೋಗ್ಯ ಸೇವೆ ವಾಣಿಜ್ಯ ಸರಕು ಆಗಬಾರದು. ಬಡವರಿಗೂ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಲಭ್ಯವಾಗಬೇಕು. ವೈದ್ಯರ ಮೇಲೆ ರೋಗಿಗಳು ಸಂಪೂರ್ಣವಾಗಿ ನಂಬಿಕೆ ಇಡಬೇಕು.

| ಡಾ.ಅಜಿತ್ ಆನಂದ ಡಯಾಗ್ನಾಸ್ಟಿಕ್ ವೈದ್ಯಕೀಯ ನಿರ್ದೇಶಕ

 

ಯಾವುದೇ ಜಾತಿ, ಧರ್ಮ ಎಂಬ ಭೇದ ಇಲ್ಲದೆ, ಮಳೆ, ಗಾಳಿ ಲೆಕ್ಕಿಸದೇ, ಸಂಸಾರದ ಜಂಜಾಟಗಳನ್ನು ದೂರ ಇಟ್ಟು ರೋಗಿಯ ಜೀವ ಉಳಿಸಲು ಹೋರಾಟ ಮಾಡುವುದೇ ವೈದ್ಯರ ಧರ್ಮ. ಹೀಗಾಗಿಯೇ ವೈದ್ಯ ನಾರಾಯಣೋ ಹರಿ (ವೈದ್ಯ ಭೂಲೋಕದಲ್ಲಿರುವ ದೇವರು) ಎಂದು ಹೇಳುವುದುಂಟು. ಇಂಥ ಗೌರವಯುತ ಮತ್ತು ಜವಾಬ್ದಾರಿಯುತ ವೃತ್ತಿಯಲ್ಲಿ ತೊಡಗಿರುವ ಎಲ್ಲರಿಗೂ ರಾಷ್ಟ್ರೀಯ ವೈದ್ಯರ ದಿನಾಚರಣೆ ಶುಭಾಶಯಗಳು.

| ಡಾ.ಚೇತನಕುಮಾರ್ ನೇಚರ್​ಕೇರ್ ಆಸ್ಪತ್ರೆ

 

ಸಮಾಜದ ಆರೋಗ್ಯ ಚೆನ್ನಾಗಿರಬೇಕು ಎಂಬುದೇ ವೈದ್ಯರ ಉದ್ದೇಶ. ಆದ್ದರಿಂದಲೇ ಈ ವೃತ್ತಿ ಸಮಾಜ ಸೇವೆ ಎನಿಸಿದೆ. ವೈದ್ಯ ವೃತ್ತಿಯ ಬಗ್ಗೆ ಜನರಲ್ಲಿಯೂ ಹೆಚ್ಚು ಗೌರವವಿದೆ. ಆದರೆ ಯಾವುದೋ ಒಬ್ಬ ವೈದ್ಯ ಮಾಡುವ ತಪ್ಪಿಗೆ ಶೇ.99 ವೈದ್ಯರನ್ನು ದೂಷಿಸುವುದು ಸರಿಯಲ್ಲ.

| ಡಾ.ಎ.ಸಿ. ಸಾಂಬಶಿವ ಶ್ರೀ ಲಕ್ಷಿ್ಮೕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಧ್ಯಕ್ಷ

 

ರೋಗ ಬಂದಾಗ ಅದನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ವೈದ್ಯರ ವೃತ್ತಿ. ಆದರೆ, ರೋಗ ಬಾರದಂತೆ ತಡೆಯುವ ಕ್ರಮಗಳ ಬಗ್ಗೆ ತಮ್ಮ ಬಳಿ ಬರುವ ರೋಗಿಗಳಿಗೆ ಮಾಹಿತಿ ನೀಡುವುದು ವೈದ್ಯರ ನಿಜವಾದ ಕರ್ತವ್ಯ. ಈ ಕೆಲಸ ನಿರ್ವಹಿಸುವಾಗ ವೈದ್ಯರ ಮೇಲೆ ವಿನಾಕಾರಣ ಹಲ್ಲೆಗಳು ನಡೆಯಬಾರದು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

| ಡಾ.ಎಸ್.ಎಸ್.ಹಿರೇಮಠ ಶ್ರೀ ಧನ್ವಂತ್ರಿ ಆಯುರ್ವೆದ ಆಸ್ಪತ್ರೆ

ವೈದ್ಯರು ಪ್ರೀತಿಯಿಂದ ಮಾತನಾಡಿಸಿದರೆ ರೋಗಿಯಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಮಾನಸಿಕ ಒತ್ತಡ ದಿಂದ ರೋಗಿ ಚಿಕಿತ್ಸೆ ಪಡೆಯಲು ಬಂದಾಗ ಆತನಿಗೆ ಪ್ರೀತಿಯ ಮಾತುಗಳು ಮಾನಸಿಕ ಸ್ಥೈರ್ಯ ತುಂಬುತ್ತವೆ.

| ಡಾ.ಶ್ರೀಪ್ರಿಯಾ ರಿಷಿ ಸಂಜೀವಿನಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ

Leave a Reply

Your email address will not be published. Required fields are marked *

Back To Top