Saturday, 18th November 2017  

Vijayavani

1. ಮುಷ್ಕರ ಬಿಕ್ಕಟ್ಟು ಇತ್ಯರ್ಥಕ್ಕೆ ಸಿಎಂ ಸಭೆ- ವೈದ್ಯಕೀಯ ಸಂಘದ ಜತೆ ಮೀಟಿಂಗ್- ಬಗೆಹರಿಯುತ್ತಾ ಖಾಸಗಿ ವಿಧೇಯಕ ಗೊಂದಲ 2. ಖಾಸಗಿ ವೈದ್ಯರ ಮುಷ್ಕರ ವಿಚಾರ- ಹೈಕೋರ್ಟ್‌ನಲ್ಲಿ ಪಿಐಎಲ್‌ ವಿಚಾರಣೆ- ಖಡಕ್‌ ಸೂಚನೆ ನೀಡುತ್ತಾ ಹೈಕೋರ್ಟ್..? 3. ಐದನೇ ದಿನ, ಬಲಿಯಾದವರು ಹನ್ನೊಂದು ಜನ- ವೈದ್ಯರ ಮುಷ್ಕರಕ್ಕೆ ಅಮಾಯಕರ ಸಾವು- ಪ್ರತಿಷ್ಠೆ ಬಿಡಿ, ಕರ್ತವ್ಯಕ್ಕೆ ಬನ್ನಿ 4. ಕಾವೇರಿ ಬಳಿಕ ತಮಿಳುನಾಡು ಮತ್ತೊಂದು ಕ್ಯಾತೆ- ಮೈಸೂರು ಪಾಕ ತಮ್ಮದೆಂದು ವಾದ- ಸೋಷಿಯಲ್ ಮೀಡಿಯಾದಲ್ಲಿ ಶುರು ಸಿಹಿ ಸಮರ 5. ಪತ್ರಕರ್ತೆ ಮೇಲೆ ಎರಗಿದ ಕಿಡಿಗೇಡಿ- ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ ಲೈಂಗಿಕ ಕಿರುಕುಳ- ಸಿಸಿಟಿವಿ ಆಧರಿಸಿ ಆರೋಪಿ ಸೆರೆ
Breaking News :

ಸೇನೆ ಆಧುನೀಕರಣಕ್ಕೆ- 26.84 ಲಕ್ಷ ಕೋಟಿ ರೂ?

Monday, 17.07.2017, 3:01 AM       No Comments

ನವದೆಹಲಿ: ಮುಂದಿನ ಐದು ವರ್ಷಗಳ ಅವಧಿಗೆ ಸೇನೆಯ ಆಧುನೀಕರಣ ಮತ್ತು ನಿರ್ವಹಣಾ ಅಗತ್ಯಗಳನ್ನು ಪೂರೈಸುವ ಸಲುವಾಗಿ ರಕ್ಷಣಾ ಯೋಜನೆಗಳಿಗೆ 26.84 ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿ ಪಡಿಸುವಂತೆ ಸಶಸ್ತ್ರ ಪಡೆಗಳು ಕೇಂದ್ರ ಸರ್ಕಾರವನ್ನು ಕೋರಿವೆ.

ಪಾಕಿಸ್ತಾನ ಮತ್ತು ಚೀನಾ ಗಡಿತಂಟೆಗಳ ಹಿನ್ನೆಲೆಯಲ್ಲಿ ರಕ್ಷಣಾ ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಭಾರತದ ಭೌಗೋಳಿಕ ಕಾರ್ಯತಂತ್ರ ಹಿತಾಸಕ್ತಿಗಳ ರಕ್ಷಣೆಗಾಗಿ ರಕ್ಷಣಾ ವೆಚ್ಚವನ್ನು ಅಧಿಕಗೊಳಿಸುವ ಅಗತ್ಯ ಇದೆ ಎಂದು ಸಶಸ್ತ್ರ ಪಡೆಗಳು ಹೇಳಿವೆ.

ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಸಹಿತ ಭದ್ರತಾ ಉಪಕರಣ ತಯಾರಿಸುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೊಂದಿಗೆ ಸಮಾಲೋಚನೆ ಕೈಗೊಂಡು ಈ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. 2017-2022ರ ನಡುವಿನ ಐದು ವರ್ಷಗಳ ಅವಧಿಗೆ ರಕ್ಷಣಾ ನಿಧಿಯನ್ನು 26,83,924 ಕೋಟಿ ರೂಪಾಯಿಗೆ ನಿಗದಿ ಪಡಿಸಲಾಗಿದೆ. ಜುಲೈ 10-11ರಂದು ನಡೆದ ಕಮಾಂಡರ್​ಗಳ ಸಮ್ಮೇಳನದಲ್ಲಿ ಪ್ರಸ್ತಾವನೆ ಮಂಡಿಸಲಾಗಿತ್ತು.

ಭದ್ರತಾ ಉಪಕರಣಗಳು, ಶಸ್ತ್ರಾಸ್ತ್ರಗಳ ಖರೀದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗೆ ತ್ವರಿತವಾಗಿ ಮಂಜೂರಾತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಸೇನೆ ಕೋರಿದೆ. ಸಿಕ್ಕಿಂನ ಗಡಿ ಭಾಗದಲ್ಲಿ ಭಾರತ ಮತ್ತು ಚೀನೀ ಪಡೆಗಳ ಮಧ್ಯೆ ಪ್ರಕ್ಷುಬ್ಧ ಸ್ಥಿತಿ ಉಂಟಾಗಿರುವುದರ ಜತೆಗೆ, ಪಾಕಿಸ್ತಾನ ಕೂಡ ಗಡಿನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸೇನೆ ಆಧುನೀಕರಣಕ್ಕಾಗಿ ರಕ್ಷಣಾ ವೆಚ್ಚ ಹೆಚ್ಚಿಸಲು ಕೋರಲಾಗಿದೆ. -ಏಜೆನ್ಸೀಸ್

ಸರ್ಕಾರದ ಆದ್ಯತೆ

ಸಶಸ್ತ್ರ ಪಡೆಗಳಿಗೆ ಆಧುನೀಕರಣ ಯೋಜನೆ ಗಳಿಗಾಗಿ ಹಣ ಒದಗಿಸುವುದು ಸರ್ಕಾರದ ಆದ್ಯತೆ ಗಳಲ್ಲಿ ಸೇರಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 2017-18ರ ರಕ್ಷಣಾ ಮುಂಗಡ ಪತ್ರದಲ್ಲಿ ಶಸ್ತ್ರಾಸ್ತ್ರ ಮತ್ತು ಸೇನೆ ಆಧುನೀಕರಣಕ್ಕೆ 86,488 ಕೋಟಿ ರೂ. ಒದಗಿಸಲಾಗಿದೆ ಎಂದಿದ್ದಾರೆ.

ಪೋಖ್ರಾನಲ್ಲಿ ವಿವಿಧ ಹೊವಿಟ್ಜರ್ ಪ್ರಾಯೋಗಿಕ ಪರೀಕ್ಷೆ

ಅಮೆರಿಕದಿಂದ ಭಾರತವು ಖರೀದಿಸಿರುವ 2 ಹೊವಿಟ್ಜರ್ ಗನ್​ಗಳನ್ನು ರಾಜಸ್ಥಾನದ ಪೋಖ್ರಾನ್​ನಲ್ಲಿ ಭಾನುವಾರ ಪರೀಕ್ಷಿಸಲಾಗಿದ್ದು, ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದೀರ್ಘ ವ್ಯಾಪ್ತಿ ಸಾಗುವ ಹಗುರದ ಗನ್​ಗಳನ್ನು ಅಮೆರಿಕ ಇತ್ತೀಚೆಗೆ ಭಾರತಕ್ಕೆ ಹಸ್ತಾಂತರಿಸಿತ್ತು. ಬೋಫೋರ್ಸ್ ಹಗರಣ ಬಯಲಾದ 30 ವರ್ಷಗಳ ಬಳಿಕ ಅಮೆರಿಕದಿಂದ ಖರೀದಿಸಿದ ಹೊವಿಟ್ಜರ್ ಗನ್ ಇದಾಗಿದೆ. ವೇಗ, ನಿಖರತೆ, ಗುರಿಯನ್ನು ಪರೀಕ್ಷಿಸಲು ಎಂ-777 ಎ-2 ಅತಿ ಹಗುರದ ಹೊವಿಟ್ಜರ್ ಗನ್​ಗಳ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಒಂದು ಬಾರಿ ಪರೀಕ್ಷೆ ಪೂರ್ಣಗೊಂಡು ಸಿದ್ಧವಾದ ಬಳಿಕ ಅವುಗಳನ್ನು ಚೀನಾದ ಗಡಿ ಭಾಗದಲ್ಲಿ ನಿಯೋಜಿಸಲಾಗುತ್ತದೆ. ಸೆಪ್ಟೆಂಬರ್​ವರೆಗೆ ಪ್ರಾಯೋಗಿಕ ಪರೀಕ್ಷೆ ನಡೆಯಲಿದ್ದು, ಗನ್​ಗಳಲ್ಲಿ ಭಾರತದಲ್ಲೇ ತಯಾರಾದ ಮದ್ದುಗುಂಡು ಬಳಸಲಾಗುತ್ತಿದೆ. 2018ರ ಸೆಪ್ಟೆಂಬರ್ ವೇಳೆಗೆ ಇನ್ನೂ ಮೂರು ಗನ್​ಗಳನ್ನು ಒದಗಿಸಲಾಗುತ್ತದೆ. ಪ್ರತಿ ತಿಂಗಳಿಗೆ ಐದರಂತೆ 2021ರ ವೇಳೆಗೆ ಒಟ್ಟು 145 ಗನ್​ಗಳನ್ನು ಅಮೆರಿಕ ಪೂರೈಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top