Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಸೇನೆಗೆ ಹೊಸ ಬ್ರಹ್ಮಾಸ್ತ್ರ

Wednesday, 15.11.2017, 3:00 AM       No Comments

ನವದೆಹಲಿ: ಸ್ವದೇಶಿ ನಿರ್ವಿುತ ಸೂಪರ್​ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಸುಖೋಯ್-30ಎಂಕೆ1 ಯುದ್ಧವಿಮಾನದಿಂದ ಪರೀಕ್ಷಾರ್ಥವಾಗಿ ಪ್ರಯೋಗಿಸಲು ಸೇನೆ ಸಜ್ಜಾಗುತ್ತಿದ್ದು, ಇದು ಯಶಸ್ವಿಯಾದಲ್ಲಿ ಭಾರತೀಯ ವಾಯುಪಡೆಯ ಶಕ್ತಿ ಇಮ್ಮಡಿಗೊಳ್ಳಲಿದೆ.

ಬಂಗಾಳ ಕೊಲ್ಲಿಯಲ್ಲಿ ಈ ವಾರ ಪರೀಕ್ಷೆ ನಡೆಯಲಿದೆ. ಪ್ರಸ್ತುತ ಯುದ್ಧ ಹಡಗು, ಜಲಾಂತರ್ಗಾಮಿ ಹಾಗೂ ಭೂಮಿಯಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾವಣೆ ಮಾಡಬಹುದಾಗಿದೆ. ಸುಖೋಯ್ ಯುದ್ಧವಿಮಾನದಿಂದಲೂ ಈ ಕ್ಷಿಪಣಿ ಉಡಾಯಿಸುವಂತಾದರೆ, ಆಕಾಶದಿಂದಲೇ ಶತ್ರು ಪಡೆಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡುವ ಸಾಮರ್ಥ್ಯ ಸೇನೆಗೆ ದೊರೆಯಲಿದೆ. ಭಾರತ ಮತ್ತು ರಷ್ಯಾ ಸಹಯೋಗದಲ್ಲಿ ಬ್ರಹ್ಮೋಸ್ ಕ್ಷಿಪಣಿ ಸಿದ್ಧಗೊಂಡಿದೆ. 290 ಕಿ.ಮೀ. ಪರಿಧಿಯಲ್ಲಿ ಶಬ್ದದ ವೇಗಕ್ಕಿಂತಲೂ 3 ಪಟ್ಟು ವೇಗವಾಗಿ ಅಂದರೆ, ಮ್ಯಾಕ್ 2.8 ವೇಗದಲ್ಲಿ ಚಲಿಸುವ ಕ್ಷಿಪಣಿ ನೆಲದಾಳದಲ್ಲಿರುವ ಶತ್ರುಗಳ ಬಂಕರ್, ಅಣ್ವಸ್ತ್ರ ಶಸ್ತ್ರಾಗಾರವನ್ನು ಧ್ವಂಸ ಮಾಡಬಲ್ಲದು.

2.4 ಟನ್ ತೂಕ

ಕ್ಷಿಪಣಿಯು 2.9 ಟನ್ ಭಾರವಾಗಿದೆ. ಸುಖೋಯ್-30ಎಂಕೆ1 ಯುದ್ಧವಿಮಾನಕ್ಕೆ ಜೋಡಿಸಿದಾಗ, ವಿಮಾನದ ಸುಗಮ ಹಾರಾಟಕ್ಕೆ ತೊಡಕಾಗುತ್ತಿ ರುವುದು ಕಂಡು ಬಂದಿತು. ಹೀಗಾಗಿ ಕ್ಷಿಪಣಿ ತೂಕವನ್ನು 2.4 ಟನ್​ಗೆ ಇಳಿಸಲಾಗಿದೆ. ಕ್ಷಿಪಣಿ ಜೋಡಣೆ ಮಾಡಲು ಅನುಕೂಲವಾಗುವಂತೆ ಯುದ್ಧವಿಮಾನದ ಹೊರ ಕವಚದ ವಿನ್ಯಾಸವನ್ನೂ ಬದಲಿಸಲಾಗಿದೆ. ಬೆಂಗಳೂರಿನ ಎಚ್​ಎಎಲ್ ಸಂಸ್ಥೆ ಈ ಕಾರ್ಯ ನಿರ್ವಹಿಸಿದೆ.

42 ಯುದ್ಧವಿಮಾನಕ್ಕೆ ಜೋಡಣೆ

7,852 ಕೋಟಿ ರೂ. ವೆಚ್ಚದಲ್ಲಿ ರಷ್ಯಾದಿಂದ ಎರಡು ಸೀಟರ್​ನ 272 ಸುಖೋಯ್ ಯುದ್ಧವಿಮಾನಗಳನ್ನು ಖರೀದಿಸಲಾಗುತ್ತಿದೆ. ಬಹುತೇಕ ವಿಮಾನಗಳನ್ನು ಎಚ್​ಎಎಲ್​ನಲ್ಲಿ ಜೋಡಣೆ ಮಾಡಲಾಗುತ್ತಿದೆ. ಇವುಗಳ ಪೈಕಿ 240 ವಿಮಾನಗಳನ್ನು ಈಗಾಗಲೆ ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲಾಗಿದೆ. 42 ಯುದ್ಧವಿಮಾನಗಳಿಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಜೋಡಿಸಲು ನಿರ್ಧರಿಸಲಾಗಿದೆ.

2016ರ ಜೂನ್​ನಿಂದ ತಯಾರಿ

ಬ್ರಹ್ಮೋಸ್ ಕ್ಷಿಪಣಿಗಳ ಪರೀಕ್ಷೆಗೆ 2016ರ ಜೂನ್​ನಿಂದಲೇ ತಯಾರಿ ನಡೆಸಲಾಗುತ್ತಿದೆ. ಇದಕ್ಕಾಗಿ ಎರಡು ಸುಖೋಯ್ ಯುದ್ಧವಿಮಾನಗಳನ್ನು ಅಣಿಗೊಳಿಸಲಾಗುತ್ತಿದೆ. ಕ್ಷಿಪಣಿಯ ನೇವಿಗೇಷನ್ ಮತ್ತಿತರ ನಿಯಂತ್ರಣಗಳನ್ನು ಯುದ್ಧವಿಮಾನದ ನಿಯಂತ್ರಣಗಳೊಂದಿಗೆ ಸಮರ್ಪಕವಾಗಿ ಹೊಂದಿಸ ಲಾಗಿದೆ. ಈಗ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಕ್ಷಿಪಣಿಗಳ ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದೆ.

ಭಾರಿ ಬೇಡಿಕೆ

ಬ್ರಹ್ಮೋಸ್ ಕ್ಷಿಪಣಿಗಳಿಗೆ ಭಾರತದ ಸೇನೆ ಜತೆಗೆ ವಿಯೆಟ್ನಾಂ, ಲ್ಯಾಟಿನ್ ಅಮೆರಿಕ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಭಾರಿ ಬೇಡಿಕೆ ಇದೆ. ಬುಧವಾರದ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷೆಯ ಫಲಿತಾಂಶದ ಮೇಲೆ ಎಲ್ಲರ ಕಣ್ಣುನೆಟ್ಟಿದೆ.

ಘಾತುಕ ಶಕ್ತಿ

ಬ್ರಹ್ಮೋಸ್ ಕ್ಷಿಪಣಿಗಳನ್ನು ಜೋಡಿಸಿರುವ ಯುದ್ಧನೌಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ, ಲಂಬಾಕಾರವಾಗಿ ಅಥವಾ ಅಗತ್ಯಕ್ಕೆ ತಕ್ಕಷ್ಟು ಬಾಗಿಸಿ ಉಡಾವಣೆ ಮಾಡಬಹುದಾಗಿದೆ. ಈ ಕ್ಷಿಪಣಿಗಳು ವಿಶ್ವದ ಅತಿ ವೇಗವಾಗಿ ಸಾಗಬಲ್ಲ ಯುದ್ಧನೌಕೆ ನಿರೋಧಕ ಕ್ಷಿಪಣಿ ಎಂಬ ಹೆಗ್ಗಳಿಕೆ ಹೊಂದಿದೆ. ಸದ್ಯ ಇವು 2.8 ಮ್ಯಾಕ್ ವೇಗದಲ್ಲಿ 10 ಮೀಟರ್​ನಿಂದ 15 ಕಿ.ಮೀ. ಎತ್ತರದವರೆಗೆ ಸಾಗಬಲ್ಲವಾಗಿವೆ. 40-50 ಮೀಟರ್ ಆಳದಲ್ಲಿ ಚಲಿಸುತ್ತಿರುವ ಜಲಾಂತರ್ಗಾಮಿಗಳಿಂದಲೂ ಇವುಗಳನ್ನು ಉಡಾವಣೆ ಮಾಡಬಹುದಾಗಿದೆ. ಶತ್ರುವಿನ ತಾಣದಲ್ಲಿರುವ ನೆಲದಾಳದ ಬಂಕರ್​ಗಳು, ಅಣ್ವಸ್ತ್ರ ಶಸ್ತ್ರಾಗಾರಗಳು, ಕಡಿದಾದ ಪ್ರದೇಶದಲ್ಲಿರುವ ಭಯೋತ್ಪಾದಕರ ಶಿಬಿರಗಳನ್ನು ಕ್ಷಣಾರ್ಧದಲ್ಲಿ ಪುಡಿಗಟ್ಟುವ ಸಾಮರ್ಥ್ಯ ಹೊಂದಿವೆ.

Leave a Reply

Your email address will not be published. Required fields are marked *

Back To Top