Saturday, 18th November 2017  

Vijayavani

1. ಮುಷ್ಕರ ಬಿಕ್ಕಟ್ಟು ಇತ್ಯರ್ಥಕ್ಕೆ ಸಿಎಂ ಸಭೆ- ವೈದ್ಯಕೀಯ ಸಂಘದ ಜತೆ ಮೀಟಿಂಗ್- ಬಗೆಹರಿಯುತ್ತಾ ಖಾಸಗಿ ವಿಧೇಯಕ ಗೊಂದಲ 2. ಖಾಸಗಿ ವೈದ್ಯರ ಮುಷ್ಕರ ವಿಚಾರ- ಹೈಕೋರ್ಟ್‌ನಲ್ಲಿ ಪಿಐಎಲ್‌ ವಿಚಾರಣೆ- ಖಡಕ್‌ ಸೂಚನೆ ನೀಡುತ್ತಾ ಹೈಕೋರ್ಟ್..? 3. ಐದನೇ ದಿನ, ಬಲಿಯಾದವರು ಹನ್ನೊಂದು ಜನ- ವೈದ್ಯರ ಮುಷ್ಕರಕ್ಕೆ ಅಮಾಯಕರ ಸಾವು- ಪ್ರತಿಷ್ಠೆ ಬಿಡಿ, ಕರ್ತವ್ಯಕ್ಕೆ ಬನ್ನಿ 4. ಕಾವೇರಿ ಬಳಿಕ ತಮಿಳುನಾಡು ಮತ್ತೊಂದು ಕ್ಯಾತೆ- ಮೈಸೂರು ಪಾಕ ತಮ್ಮದೆಂದು ವಾದ- ಸೋಷಿಯಲ್ ಮೀಡಿಯಾದಲ್ಲಿ ಶುರು ಸಿಹಿ ಸಮರ 5. ಪತ್ರಕರ್ತೆ ಮೇಲೆ ಎರಗಿದ ಕಿಡಿಗೇಡಿ- ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ ಲೈಂಗಿಕ ಕಿರುಕುಳ- ಸಿಸಿಟಿವಿ ಆಧರಿಸಿ ಆರೋಪಿ ಸೆರೆ
Breaking News :

ಸೆರೆ ಸಿಕ್ಕ ಕಾಡಾನೆ ಬನ್ನೇರುಘಟ್ಟಕ್ಕೆ

Thursday, 22.12.2016, 6:45 AM       No Comments

ದಾಬಸ್​ಪೇಟೆ: ಗ್ರಾಮಗಳಿಗೆ ನುಗ್ಗಿ ಗ್ರಾಮಸ್ಥರ ಭೀತಿಗೆ ಕಾರಣವಾಗಿದ್ದ 8 ವರ್ಷದ ಗಂಡಾನೆಯನ್ನು ದಸರಾ ಆನೆಗಳ ಸಹಾಯದಿಂದ ಅರಿವಳಿಕೆ ಮದ್ದು ನೀಡಿ ಅರಣ್ಯ ಇಲಾಖೆ ಸೆರೆ ಹಿಡಿದಿದೆ.

ನೂರಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ, ವೈದ್ಯಾಧಿಕಾರಿಗಳು ಬುಧವಾರ ಬೆಳಗ್ಗೆ 7.20ಕ್ಕೆ ವೀರಸಾಗರ ಅರಣ್ಯವಲಯದಲ್ಲಿ ಅಭಿಮನ್ಯು, ಗಜೇಂದ್ರ, ಭೀಮ, ಹರ್ಷ ಮತ್ತು ಕೃಷ್ಣ ಆನೆಗಳ ಸಹಾಯದಿಂದ ಸೆರೆಹಿಡಿದರು. ನಂತರ ಲಾರಿಯಲ್ಲಿ ಬನ್ನೇರುಘಟ್ಟ ಕಾಡಿಗೆ ಕಳುಹಿಸಿದ್ದಾರೆ.

ಮಂಗಳವಾರ ಅದರಂಗಿ ಕಾಡಿನಲ್ಲಿ ಕಾರ್ಯಾಚರಣೆ ತಂಡ ಪಟಾಕಿ ಸಿಡಿಸಿ ಶಿವಗಂಗೆ ತಪ್ಪಲಿನ ಗೌರಾಪುರ ಗ್ರಾಮದತ್ತ ಆನೆಯನ್ನು ಓಡಿಸಿದ್ದರು. ನಂತರ ವೀರಸಾಗರ ಕಾಡಿಗೆ ಬಂದ ಕಾಡಾನೆ ಸೆರೆಸಿಕ್ಕಿತು.

ಹಲವು ವರ್ಷಗಳಿಂದ ಸೋಂಪುರ ಹಾಗೂ ಮಾಗಡಿ ಹೋಬಳಿಯ ಹಲವಾರು ಗ್ರಾಮಗಳಲ್ಲಿ ಕಾಡಾನೆಗಳು ರೈತರ ಬೆಳೆಯನ್ನು ಹಾಳು ಮಾಡುತ್ತಿದ್ದವು. ಸದ್ಯ ಒಂದು ಆನೆಯನ್ನು ಬನ್ನೇರುಘಟ್ಟ ಕಾಡಿಗೆ ಕಳುಹಿಸಿರುವುದರಿಂದ ರೈತರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *

Back To Top