Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ಸೆಟಲೈಟ್ ರೈಟ್ಸ್​ಗೆ ರೂ. 110 ಕೋಟಿ!

Wednesday, 15.03.2017, 5:00 AM       No Comments

ಸಾಮಾನ್ಯವಾಗಿ ಬಾಲಿವುಡ್ ಚಿತ್ರಗಳು ಬಿಡುಗಡೆಯಾದ ಎರಡು ಅಥವಾ ಮೂರು ವಾರದಲ್ಲಿ ಬಾಕ್ಸ್​ಆಫೀಸ್​ನಲ್ಲಿ ಸಖತ್ತಾಗಿ ಕಮಾಯಿ ಮಾಡುತ್ತವೆ. ಇದಕ್ಕೆ ಹೊರತಾದ ಕೆಲವು ಚಿತ್ರಗಳು ಮೊದಲ ವಾರವೇ 100 ಕೋಟಿ ಕ್ಲಬ್ ಸೇರಿದ್ದೂ ಇದೆ. ಈ ಸಾಲಿನಲ್ಲಿ ದಬಂಗ್ 2, ಸಿಂಗಂ ರಿಟರ್ನ್ಸ್, ಬಾಡಿಗಾರ್ಡ್, ಹ್ಯಾಪಿ ನ್ಯೂ ಇಯರ್, ಸುಲ್ತಾನ್, ದಂಗಲ್ ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ, ಸೂಪರ್​ಸ್ಟಾರ್ ರಜನಿಕಾಂತ್ ಅಭಿನಯದ ‘2.0’ಚಿತ್ರ ಬಿಡುಗಡೆಗೆ ಮುನ್ನವೇ 110 ಕೋಟಿ ರೂ. ಗಳಿಸಿದೆ. ಅದು ಸೆಟಲೈಟ್ ರೈಟ್ಸ್ ಮೂಲಕ ಎನ್ನುವುದು ವಿಶೇಷ. ಈ ಮೂಲಕ ತಲೈವಾ ತಾವೊಬ್ಬ ಬಾಕ್ಸ್ ಆಫೀಸ್ ಕಿಂಗ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಅಕ್ಷಯ್ಕುಮಾರ್ ಹಾಗೂ ಆಮಿ ಜಾಕ್ಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘2.0’ ಅದಾಗಲೇ ಪೋಸ್ಟರ್ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲೂ ಅಕ್ಷಯ್ ಅವರ ಹೊಸ ಅವತಾರ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಒಟ್ಟು ನಾನೂರು ಕೋಟಿ ರೂ. ವೆಚ್ಚದಲ್ಲಿ ಮೂಡಿಬಂದಿರುವ ಈ ಚಿತ್ರ ಅಕ್ಟೋಬರ್ 18ಕ್ಕೆ ತೆರೆಗೆಬರಲಿದೆ. ದೇಶದಲ್ಲಿಯೇ ಅತಿ ಹೆಚ್ಚು ವೆಚ್ಚದ ಹಾಗೂ ಏಷ್ಯಾದಲ್ಲಿಯೇ ಎರಡನೇ ದುಬಾರಿ ಸಿನಿಮಾ ಎಂಬ ಗೌರವಕ್ಕೆ ಪಾತ್ರವಾದ ‘2.0’ ಚಿತ್ರದ ಸೆಟಲೈಟ್ ರೈಟ್ಸ್​ಗೆ ಝೀ ಟಿವಿ ನೆಟ್ವರ್ಕ್ ಭಾರಿ ಬಂಡವಾಳ ಸುರಿದಿದೆ.

ಎಸ್. ಶಂಕರ್ ನಿರ್ದೇಶನದ ‘2.0’ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ. ಈ ಚಿತ್ರ ವೀಕ್ಷಿಸಲು 3ಡಿ ತಂತ್ರಜ್ಞಾನ ಅಳವಡಿಕೆ ಮಾಡಲು ಈಗಾಗಲೇ ಚಿತ್ರತಂಡ ಯೋಚಿಸಿದೆ. ಒಟ್ಟಾರೆ ಈ ವರ್ಷದ ದೀಪಾವಳಿ ಸಿನಿಪ್ರಿಯರ ಪಾಲಿಗಂತೂ ಸಂಭ್ರಮ ಇಮ್ಮಡಿಸಲಿದೆ. ಏಜೆನ್ಸೀಸ್

Leave a Reply

Your email address will not be published. Required fields are marked *

Back To Top