Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ಸೆಂಚುರಿಯನ್​ನಲ್ಲಿ ಸಮಬಲದ ಆರಂಭ

Sunday, 14.01.2018, 3:03 AM       No Comments

ಸೆಂಚುರಿಯನ್: ಮೊದಲ ಟೆಸ್ಟ್ ಪಂದ್ಯದ ಸೋಲಿನ ಹಿನ್ನಡೆಯೊಂದಿಗೆ 3 ಪ್ರಮುಖ ಬದಲಾವಣೆಯೊಂದಿಗೆ ಸೆಂಚುರಿಯನ್​ನಲ್ಲಿ ಕಣಕ್ಕಿಳಿದ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾದ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ ಹೇರುವ ಮೂಲಕ ಮತ್ತೊಮ್ಮೆ ಬೌಲಿಂಗ್​ನಲ್ಲಿ ಗಮನ ಸೆಳೆದಿದೆ. ಏಡನ್ ಮಾರ್ಕ್​ರಾಮ್ (94 ರನ್, 150 ಎಸೆತ, 15 ಬೌಂಡರಿ) ಶತಕ ವಂಚಿತ ಬ್ಯಾಟಿಂಗ್ ಹಾಗೂ ಹಾಶಿಂ ಆಮ್ಲ(82ರನ್, 153 ಎಸೆತ, 14 ಬೌಂಡರಿ) ಅವರ ಅರ್ಧಶತಕದಾಟದ ನೆರವಿನಿಂದ ಹರಿಣಗಳ ಪಡೆ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದ ಗೌರವ ಹಂಚಿಕೊಂಡಿದೆ.

ಸಹಜವಾಗಿ ವೇಗಿಗಳಿಗೆ ನೆರವೀಯುವ ಆಫ್ರಿಕಾದ ಪಿಚ್​ನಲ್ಲಿ ಸ್ಪಿನ್ನರ್ ಆರ್. ಅಶ್ವಿನ್(90ಕ್ಕೆ 3) ಮಾತ್ರವೇ ಆಫ್ರಿಕಾ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ ಹೇರುವ ಮೂಲಕ ಭಾರತದ ಹೋರಾಟಕ್ಕೆ ಬಲ ತುಂಬಿದರು.

ಸರಣಿಯಲ್ಲಿ ಸತತ 2ನೇ ಬಾರಿ ಟಾಸ್ ಗೆದ್ದ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ ತಮ್ಮ ಯೋಜನೆಗೆ ತಕ್ಕಂತೆ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದರು. ಮೊದಲು ಉತ್ತಮ ಆರಂಭ, ನಂತರ ಅಶ್ವಿನ್ ಕರಾರುವಾಕ್ ಸ್ಪಿನ್ ಹಾಗೂ ಭಾರತದ 2 ಆಕರ್ಷಕ ರನೌಟ್​ಗಳ ನಡುವೆ ದಕ್ಷಿಣ ಆಫ್ರಿಕಾ ದಿನದಂತ್ಯದ ವೇಳೆಗೆ 6 ವಿಕೆಟ್​ಗೆ 269 ರನ್ ಗಳಿಸಿತು. ಪ್ಲೆಸಿಸ್ (24*) ಜತೆಗೆ ಕೇಶವ್ ಮಹಾರಾಜ್ (10*) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಲ್ಲಿ ನಡೆದ ಕೊನೇ ಟೆಸ್ಟ್ ಪಂದ್ಯದ ಮೊದಲ ದಿನದ ಒಟ್ಟಾರೆ ಬೌಲಿಂಗ್ ನಿರ್ವಹಣೆ ಗಮನಿಸಿದರೆ ಭಾರತದ ದಾಳಿ ಉತ್ತಮವಾಗಿ ಮೂಡಿಬಂದಿದೆ. 2016ರಲ್ಲಿ ಮೊದಲ ದಿನದಂತ್ಯಕ್ಕೆ ನ್ಯೂಜಿಲೆಂಡ್ ತಂಡ ಆಫ್ರಿಕಾ ತಂಡದ ವಿರುದ್ಧ 283 ರನ್​ಗೆ 3 ವಿಕೆಟ್ ಮಾತ್ರ ಕಬಳಿಸಿತ್ತು. -ಏಜೆನ್ಸೀಸ್

ನಡೆಯದ ವೇಗಿಗಳ ಆಟ

ಟೀಮ್ ಇಂಡಿಯಾ ವೇಗಿಗಳಾದ ಬುಮ್ರಾ, ಶಮಿ, ಇಶಾಂತ್, ಹಾರ್ದಿಕ್ ಪಾಂಡ್ಯ ಮೊದಲ ಸ್ಪೆಲ್ ಅನ್ನು ಯಶಸ್ವಿಯಾಗಿ ನಡೆಸಿದರೂ ವಿಕೆಟ್ ಕಬಳಿಸುವಲ್ಲಿ ಸಂಪೂರ್ಣ ವಿಫಲರಾದರು. ವೇಗಿಗಳ ನಿಯಂತ್ರಿತ ದಾಳಿ ಎದುರು ದಕ್ಷಿಣ ಆಫ್ರಿಕಾ 100 ರನ್ ಪೂರೈಸಲು 36 ಓವರ್ ತೆಗೆದುಕೊಂಡಿತು. ಈ ನಡುವೆ ಆಮ್ಲ 14 ರನ್ ಗಳಿಸಿದ್ದಾಗ ಶಾರ್ಟ್ ಮಿಡ್​ನಲ್ಲಿ ಪಾಂಡ್ಯ ಕಠಿಣ ಕ್ಯಾಚ್ ಕೈಬಿಟ್ಟರು. ಬಳಿಕ ಆಮ್ಲ 30 ರನ್ ಗಳಿಸಿದ್ದಾಗ ಇಶಾಂತ್ ಓವರ್​ನಲ್ಲಿ ಪಾರ್ಥಿವ್ ಪಟೇಲ್ ಸುಲಭ ಕ್ಯಾಚ್ ಬಿಟ್ಟರು. ಅಂತಿಮವಾಗಿ ಇಶಾಂತ್, ಅಪಾಯಕಾರಿ ಎಬಿಡಿ ವಿಲಿಯರ್ಸ್​ರನ್ನು ಚಹಾ ವಿರಾಮದ ಬಳಿಕ ಬೌಲ್ಡ್ ಮಾಡಿದರು.

ಆಪತ್ಭಾಂದವರಾದ ಅಶ್ವಿನ್

ಪಿಚ್ ಸಹಜವಾಗಿ ವೇಗದ ಬೌಲಿಂಗ್​ಗೆ ನೆರವೀಯಬಹುದೆಂಬ ಟೀಮ್ ಇಂಡಿಯಾದ ಲೆಕ್ಕಾಚಾರ ಈ ಬಾರಿ ಉಲ್ಟಾ ಆಯಿತು. ನಾಲ್ವರು ವೇಗಿಗಳೊಂದಿಗೆ ಭಾರತ ಸತತ ದಾಳಿ ನಡೆಸಿದರೂ ಯಾರೊಬ್ಬರೂ ಆಫ್ರಿಕಾ ಬ್ಯಾಟ್ಸ್​ಮನ್​ಗಳ ಮೇಲೆ ನಿಯಂತ್ರಣ ಹೇರಲು ಯಶಸ್ವಿಯಾಗಲಿಲ್ಲ. ಈ ವೇಳೆ ಸ್ಪಿನ್ನರ್ ಆರ್. ಅಶ್ವಿನ್ ಭಾರತಕ್ಕೆ ಆಪತ್ಭಾಂದವರಾದರು. ದಕ್ಷಿಣ ಆಫ್ರಿಕಾದ ಮೊದಲೆರಡೂ ವಿಕೆಟ್ ಕಬಳಿಸಿದ ಅಶ್ವಿನ್ ನಾಯಕ ಕೊಹ್ಲಿ ಮೇಲಿನ ಒತ್ತಡ ಕಡಿಮೆಗೊಳಿಸಿದರು. ಎಡಗೈ ಬ್ಯಾಟ್ಸ್​ಮನ್ ಡೀನ್ ಎಲ್ಗರ್, ಅಶ್ವಿನ್​ರ ಹೆಚ್ಚು ಬೌನ್ಸ್ ಆದ ಎಸೆತದಲ್ಲಿ ಸಿಲ್ಲಿ ಪಾಯಿಂಟ್​ನಲ್ಲಿ ಮುರಳಿ ವಿಜಯ್ಗೆ ಕ್ಯಾಚ್ ಕೊಟ್ಟು ಔಟಾದರು. ಆದರೆ ಮೊದಲ ವಿಕೆಟ್​ಗೆ ಈ ಜೋಡಿ ದಕ್ಷಿಣ ಆಫ್ರಿಕಾ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟು ಬೇರ್ಪಟ್ಟಿತು. ನಂತರ ಕಣಕ್ಕಿಳಿದ ಹಾಶಿಂ ಆಮ್ಲ ಜತೆ ಅತ್ಯುತ್ತಮ ಇನಿಂಗ್ಸ್ ಮುಂದುವರಿಸಿದ ಏಡನ್ ಮಾರ್ಕ್​ರಾಮ್ನ್ನು ಶತಕ ಪೂರೈಸುವ ಮುನ್ನ ಔಟ್ ಆದರು. ಆಮ್ಲ ಔಟಾದೊಡನೆ ಕಣಕ್ಕಿಳಿದ ಕ್ವಿಂಟಾನ್ ಡಿಕಾಕ್ ಮೊದಲ ಎಸೆತದಲ್ಲಿ ಅಶ್ವಿನ್​ರ ದಾಳಿಯಲ್ಲಿ ಸ್ಲಿಪ್​ನಲ್ಲಿ ಕೊಹ್ಲಿಗೆ ಕ್ಯಾಚ್ ಕೊಟ್ಟರು.

ದಕ್ಷಿಣ ಆಫ್ರಿಕಾ ಪ್ರಥಮ ಇನಿಂಗ್ಸ್:

90 ಓವರ್​ಗಳಲ್ಲಿ 6 ವಿಕೆಟ್​ಗೆ 269

ಡೀನ್ ಎಲ್ಗರ್ ಸಿ ವಿಜಯ್ ಬಿ ಅಶ್ವಿನ್ 31

ಮಾರ್ಕ್​ರಾಮ್ ಸಿ ಪಾರ್ಥಿವ್ ಬಿ ಅಶ್ವಿನ್ 94

ಹಾಶಿಂ ಆಮ್ಲ ರನೌಟ್ (ಪಾಂಡ್ಯ) 82

ಎಬಿ ಡಿವಿಲಿಯರ್ಸ್ ಬಿ ಇಶಾಂತ್ ಶರ್ಮ 20

ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್ 24

ಕ್ವಿಂಟನ್ ಡಿಕಾಕ್ ಸಿ ಕೊಹ್ಲಿ ಬಿ ಅಶ್ವಿನ್ 0

ಫಿಲಾಂಡರ್ ರನೌಟ್ (ಪಾರ್ಥಿವ್/ಪಾಂಡ್ಯ) 0

ಕೇಶವ್ ಮಹಾರಾಜ್ ಬ್ಯಾಟಿಂಗ್ 10

ಇತರೆ: 8, ವಿಕೆಟ್ ಪತನ: 1-85, 2-148, 3-199, 4-246, 5-250, 6-251. ಬೌಲಿಂಗ್: ಜಸ್​ಪ್ರೀತ್ ಬುಮ್ರಾ 18-4-57-0, ಮೊಹಮದ್ ಶಮಿ 11-2-46-0, ಇಶಾಂತ್ ಶರ್ಮ 16-3-32-1, ಹಾರ್ದಿಕ್ ಪಾಂಡ್ಯ 14-4-37-0, ಆರ್. ಅಶ್ವಿನ್ 31-8-90-3.

ತಂಡದ ಆಯ್ಕೆಗೆ ದಿಗ್ಗಜರ ಟೀಕೆ

2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ಭಾರತದ ಅಂತಿಮ 11ರ ಬಳಗದ ಆಯ್ಕೆ ಬಗ್ಗೆ ಮಾಜಿ ಬ್ಯಾಟ್ಸ್​ಮನ್​ಗಳಾದ ಸುನೀಲ್ ಗಾವಸ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಅಲನ್ ಡೊನಾಲ್ಡ್ ಟೀಕಿಸಿದ್ದಾರೆ. ಮುಖ್ಯವಾಗಿ ಭುವನೇಶ್ವರ್​ರನ್ನು ಕೈ ಬಿಟ್ಟಿದ್ದಕ್ಕೆ ಕಿಡಿಕಾರಿದ್ದಾರೆ. ಧವನ್​ರನ್ನು ಬಲಿಪಶು ಮಾಡಲಾಗಿದೆ ಎಂದು ಗಾವಸ್ಕರ್ ದೂರಿದ್ದಾರೆ.

ಮಾರ್ಕ್​ರಾಮ್​ಆಮ್ಲ ಆಸರೆ

ದಕ್ಷಿಣ ಆಫ್ರಿಕಾದ ನಿಧಾನಗತಿಯ ಇನಿಂಗ್ಸ್​ನಲ್ಲೂ ಅಮೂಲ್ಯ ಆಟವಾಡಿ ಗಮನ ಸೆಳೆದಿದ್ದು ಹಾಶಿಂ ಆಮ್ಲ ಹಾಗೂ 3ನೇ ಟೆಸ್ಟ್ ಪಂದ್ಯವಾಡುತ್ತಿರುವ ಮಾರ್ಕ್​ರಾಮ್ ಮೊದಲ

ಟೆಸ್ಟ್​ನ ಎರಡೂ ಇನಿಂಗ್ಸ್​ನಲ್ಲಿ ವೈಫಲ್ಯ ಕಂಡಿದ್ದ ಮಾರ್ಕ್ ರಾಮ್ ಇಲ್ಲಿ ಅವಕಾಶ ವ್ಯರ್ಥಗೊಳಿಸಲಿಲ್ಲ. ಮೊದಲ ವಿಕೆಟ್​ಗೆ ಎಲ್ಗರ್ ಜತೆ 85 ರನ್ ಜತೆಯಾಟವಾಡಿದ ಮಾರ್ಕ್​ರಾಮ್ 2ನೇ ವಿಕೆಟ್​ಗೆ ಆಮ್ಲರೊಂದಿಗೆ 63 ರನ್ ಜತೆಯಾಟವಾಡಿ ಉತ್ತಮ ಆರಂಭ ಒದಗಿಸಿದರು. ಆದರೆ ತಮ್ಮ3ನೇ ಶತಕದ ಸನಿಹವಿದ್ದ ಮಾರ್ಕ್​ರಾಮ್ ಸ್ಪಿನ್ನರ್ ಅಶ್ವಿನ್​ಗೆ ಬಲಿಯಾಗಿ ನಿರಾಸೆ ಕಂಡರು. ಬಳಿಕ ಎರಡು ಜೀವದಾನದೊಂದಿಗೆ ಮಿಂಚಿದ ಹಾಶಿಂ ಆಮ್ಲ ಅನುಭವಿ ವಿಲಿಯರ್ಸ್​ರೊಂದಿಗೆ 3ನೇ ವಿಕೆಟ್​ಗೆ 51 ರನ್ ಜತೆಯಾಟವಾಡಿದರಲ್ಲದೆ 36ನೇ ಅರ್ಧಶತಕ ಪೂರೈಸಿದರು. ಬಳಿಕ ಆಫ್ರಿಕಾ ದಿಢೀರ್ ಕುಸಿತ ಕಂಡಿತು. ಒಂದು ಹಂತದಲ್ಲಿ 3 ವಿಕೆಟ್​ಗೆ 246 ರನ್ ಗಳಿಸಿದ್ದ ಆಫ್ರಿಕಾ 251 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು.

ಕೇವಲ ಒಂದು ಟೆಸ್ಟ್ ಪಂದ್ಯದ ವೈಫಲ್ಯಕ್ಕಾಗಿ ಶಿಖರ್ ಧವನ್ ಅವರನ್ನು ಹೊರಗಿಡಲಾಗಿದೆ. ಭುವನೇಶ್ವರ್​ರನ್ನು ಯಾವುದೇ ಕಾರಣವಿಲ್ಲದೆ ಕೈಬಿಡಲಾಗಿದೆ. ಇದನ್ನೆಲ್ಲಾ ನೋಡಿದಾಗ, ಸೆಂಚುರಿಯನ್ ಟೆಸ್ಟ್​ನಲ್ಲಿ ವಿಫಲರಾದರೆ ವಿರಾಟ್ ಕೊಹ್ಲಿ ಕೂಡ 3ನೇ ಟೆಸ್ಟ್​ಗೆ ತಂಡದಿಂದ ಹೊರಗುಳಿಯಬೇಕು.

| ವೀರೇಂದ್ರ ಸೆಹ್ವಾಗ್ ಮಾಜಿ ಬ್ಯಾಟ್ಸ್​ಮನ್

ತಂಡದಲ್ಲಿ 3 ಬದಲಾವಣೆ

ನಿರೀಕ್ಷೆಯಂತೆ ಟೀಮ್ ಇಂಡಿಯಾ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ವೇಗಿ ಭುವನೇಶ್ವರ್ ಕುಮಾರ್, ಆರಂಭಿಕ ಶಿಖರ್ ಧವನ್ ಬದಲು ಕ್ರಮವಾಗಿ ವೇಗಿ ಇಶಾಂತ್ ಶರ್ಮ ಮತ್ತು ಕನ್ನಡಿಗ ಕೆಎಲ್ ರಾಹುಲ್​ರನ್ನು ಸೇರಿಸಲಾಯಿತು. ಇನ್ನು ಸ್ನಾಯು ಸೆಳೆತದಿಂದಾಗಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಗೆ ವಿಶ್ರಾಂತಿ ನೀಡಿದ್ದು, ಅವರ ಬದಲು ಪಾರ್ಥಿವ್ ಪಟೇಲ್ ಕಣಕ್ಕಿಳಿದರು. ದಕ್ಷಿಣ ಆಫ್ರಿಕಾ ಪರ ಸ್ಟೈನ್ ಸ್ಥಾನದಲ್ಲಿ 21 ವರ್ಷದ ವೇಗಿ ಲುಂಜಿ ಎನ್​ಗಿಡಿ ಟೆಸ್ಟ್ ಪದಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *

Back To Top