Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಸೂಟ್​ಕೇಸ್ ಇಲ್ದೆ ವಿಶ್ವವಿದ್ಯಾಲಯದ ಕೆಲಸಗಳಾಗಲ್ಲ

Friday, 15.09.2017, 3:00 AM       No Comments

ಹೊಸಪೇಟೆ (ಬಳ್ಳಾರಿ): ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿ ದುಡ್ಡು ನೀಡದಿದ್ದರೆ ಯಾವ ಕೆಲಸಗಳೂ ಸರ್ಕಾರದ ಮಟ್ಟದಲ್ಲಿ ಆಗುವುದಿಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ಕುಲಪತಿ ಪ್ರೊ.ಮಲ್ಲಿಕಾ ಘಂಟಿ ನೀಡಿದ್ದು ಚರ್ಚೆಗೆ ಕಾರಣವಾಗಿದೆ.

ಕನ್ನಡ ವಿವಿ ಬೆಳ್ಳಿಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಆಯೋಜಿಸಿದ್ದ ‘ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ’ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ್ದರು.

ಮಲ್ಲಿಕಾಘಂಟಿ ಹೇಳಿದ್ದೇನು: ಸಚಿವ ಬಸವರಾಜ ರಾಯರಡ್ಡಿ ಅವರು ಆಕ್ಸ್​ಫರ್ಡ್ ವಿವಿ ಮಾದರಿಯಲ್ಲಿ ಮಾತನಾಡುತ್ತಾರೆ. ಕಲ್ಲುಗುಂಡುಗಳ ಮಧ್ಯೆ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಕನ್ನಡ ವಿವಿಯನ್ನು ಅಭಿವೃದ್ಧಿಪಡಿಸುವುದು ಹೇಗೆ? ಈ ಹಿಂದೆ ಚಂದ್ರಶೇಖರ ಕಂಬಾರ ಅಂಥವರು ಹೋದಾಗ ದೇವೇಗೌಡರಂಥ ರಾಜಕಾರಣಿಗಳು ಸ್ಥಳದಲ್ಲೇ ಅಧಿಕಾರಿಗಳನ್ನು ಕರೆಯಿಸಿ ‘ಇವರ ಎಲ್ಲ ಫೈಲ್​ಗಳನ್ನು ಕ್ಲಿಯರ್ ಮಾಡಿ, ಸೂಟ್​ಕೇಸ್ ತುಂಬ ರೊಕ್ಕ ಕೊಟ್ಟು ಕಳಿಸಬೇಕು’ ಎಂದು ಹೇಳುತ್ತಿದ್ದರು. ಆದರೆ, ಈಗ ನಾನೇ ಸೂಟ್​ಕೇಸ್ ತುಂಬ ದುಡ್ಡು ತಗೊಂಡು ಹೋಗಿ, ಎಲ್ಲರಿಗೂ ಕೊಟ್ಟು, ಕೆಲಸ ಮಾಡಿಕೊಡಿ ಎಂದು ಕೇಳಬೇಕಿದೆ ಎಂದಿದ್ದರು.

 

25 ವರ್ಷಗಳ ಹಿಂದಿನ ಹಾಗೂ ಇಂದಿನ ಸಾಂಸ್ಕೃತಿಕ ರಾಜಕೀಯ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದಿದ್ದೆ. ಆದರೆ, ಮಾಧ್ಯಮಗಳು ಈ ಮಾತನ್ನು ತಿರುಚಿ ಸೂಟ್​ಕೇಸ್​ನಲ್ಲಿ ಹಣ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಪ್ರಚಾರ ಮಾಡಿವೆ. ವಿಧಾನಸೌಧ ಪದವನ್ನೇ ಬಳಸಿಲ್ಲ. ಈಗಿರುವ ಸರ್ಕಾರ ಹಿಂದಿನ ಅವಧಿಗಿಂತಲೂ ಹೆಚ್ಚು ಅನುದಾನ ನೀಡಿರುವುದನ್ನು ನೆನೆಯುತ್ತೇನೆ.

| ಪೊ›.ಡಾ. ಮಲ್ಲಿಕಾ ಎಸ್.ಘಂಟಿ ಕುಲಪತಿ

 

ಡಾ. ಮಲ್ಲಿಕಾಘಂಟಿ ಆರೋಪವನ್ನು ಅಲ್ಲಗಳೆಯುವಂತಿಲ್ಲ. ಕಡೆಗಣಿಸಲೂ ಆಗಲ್ಲ. ವಿಧಾನಸೌಧ ಗಂಗೋತ್ರಿ ಅಲ್ಲ. ಅಲ್ಲೂ ಭ್ರಷ್ಟಾಚಾರವಿದೆ. ಘಂಟಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಆರೋಪದ ಬಗ್ಗೆ ದಾಖಲೆಗಳಿದ್ದರೆ ಒದಗಿಸಲಿ.

| ರಮೇಶ್ ಕುಮಾರ್ ಆರೋಗ್ಯ ಸಚಿವ


ಮಲ್ಲಿಕಾ ಘಂಟಿಗೆ ನೋಟಿಸ್ ನೀಡುತ್ತೇವೆಂದ ರಾಯರಡ್ಡಿ

ಬೆಂಗಳೂರು: ವಿಧಾನಸೌಧದಲ್ಲಿ ಸೂಟ್​ಕೇಸ್ ನೀಡದೆ ಯಾವುದೇ ಕೆಲಸ ಆಗುವುದಿಲ್ಲ ಎಂಬ ಹೇಳಿಕೆ ನೀಡಿರುವ ಹಂಪಿ ಕನ್ನಡ ವಿವಿ ಕುಲಪತಿ ಡಾ. ಮಲ್ಲಿಕಾ ಘಂಟಿ ಅವರಿಗೆ ನೋಟಿಸ್ ನೀಡಲಾಗುವುದು. ಉತ್ತರಿಸಿದ ಬಳಿಕ ಶಿಸ್ತು ಕ್ರಮದ ಬಗ್ಗೆ ಪರಿಶೀಲಿಸಲಾಗುವುದು. ಹಂಪಿ ಕನ್ನಡ ವಿವಿ ಸಂಶೋಧನೆಗೆ ಸೀಮಿತವಾದದ್ದು. ಉನ್ನತ ಶಿಕ್ಷಣ ಇಲಾಖೆಯಲ್ಲಿ ಯಾವ ಕೆಲಸವೂ ಇರುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ವಿಧಾನಸೌಧದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top