Wednesday, 22nd November 2017  

Vijayavani

1. ಸಂಸತ್​ ಕದನಕ್ಕೆ ವೇದಿಕೆ ಸಜ್ಜು – ಡಿಸೆಂಬರ್​ 15 ರಿಂದ ಚಳಿಗಾಲದ ಅಧಿವೇಶನ – ಜಿಎಸ್​ಟಿ ಅಸ್ತ್ರ ಬಳಸಲು ಕೈ ಸಜ್ಜು 2. 100 ರೂಪಾಯಿ ಲಂಚಕ್ಕೆ ಗಲಾಟೆ ಶುರು – ಬೈಕ್​ ಸವಾರನ ಜತೆ ಎಎಸ್​​ಐ ಜಗಳ – ತುಮಕೂರಲ್ಲಿಖಾಕಿ, ಬೈಕ್​ ಸವಾರನ ಜಟಾಪಟಿ 3. ಮಾನಸಿಕ ಖಿನ್ನತೆನಾ..? ಸಂಸಾರದ ವಿರಸನಾ – ಬಿಲ್ಡಿಂಗ್​ ಮೇಲಿಂದ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ​ – ಸಾವಿಗೆ ಕಾರಣ ಕುರಿತು ಖಾಕಿ ತನಿಖೆ 4. ಕೆರೆ ಒತ್ತುವರಿ ಮಾಡಿದ್ದವ್ರಿಗೆ ಸಂಕಷ್ಟ – ಸಹಾಯ ಮಾಡಿದ ಅಧಿಕಾರಿಗಳಿಗೂ ಶಿಕ್ಷೆ – ಬಿಲ್ಡರ್​​ ಸ್ಥಿರಸ್ತಿ,ಚರಾಸ್ತಿ ಜಪ್ತಿ ಅಂದ್ರು ಕೋಳಿವಾಡ 5. ಬ್ರಹ್ಮೋಸ್​ ಕ್ಷಿಪಣಿ ಯಶಸ್ವಿ ಉಡಾವಣೆ – ಸರ್ಜಿಕಲ್​ ದಾಳಿಗೆ ಸಿಕ್ತು ಹೊಸ ಅಸ್ತ್ರ – ಭಾರತಕ್ಕೆ ವಿಶ್ವಮಟ್ಟದಲ್ಲಿ ಮತ್ತೊಂದು ಗರಿ
Breaking News :

ಸುಡುತ್ತಿದೆ ಪೆಟ್ರೋಲ್ ಬೆಲೆ

Thursday, 14.09.2017, 3:04 AM       No Comments

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಕೆಯಾಗಿದ್ದರೂ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ದಿನೇದಿನೆ ಹೆಚ್ಚುತ್ತಿರುವುದರಿಂದ ಗ್ರಾಹಕರ ಜೇಬಿಗೆ ಭಾರಿ ಹೊರೆಯಾಗಿ ಪರಿಣಮಿಸುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಮೂರು ವರ್ಷದ ಗರಿಷ್ಠ ಮಟ್ಟದತ್ತ ಸಾಗಿದ್ದು, ಇತರ ಮಹಾನಗರಗಳಲ್ಲೂ ಬೆಲೆ ಗಗನಮುಖಿಯಾಗುತ್ತಿದೆ.

2014 ಆಗಸ್ಟ್​ನಲ್ಲಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 81.75 ರೂ. ತಲುಪಿ ದಾಖಲೆ ಸ್ಥಾಪಿಸಿತ್ತು. ಈಗ ಮುಂಬೈನಲ್ಲಿ ಪೆಟ್ರೋಲ್ ಸರಿಸುಮಾರು 80 ರೂ. ನಂತೆ ಮಾರಾಟವಾಗುತ್ತದೆ ಮತ್ತೆ ದಾಖಲೆ ಮಟ್ಟ ತಲುಪುವ ಸೂಚನೆ ಸಿಕ್ಕಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಸರ್ಕಾರ ನಿಯಂತ್ರಣ ಮುಕ್ತಗೊಳಿಸಿದ (ಡಿಕಂಟ್ರೋಲ್) ಬಳಿಕ ಇವುಗಳ ದರ ಗಗನಮುಖಿಯಾಗಿದೆ. ಪ್ರತಿದಿನದ ದರ ಪರಿಷ್ಕರಣೆಯಿಂದ ಗ್ರಾಹಕರಿಗೆ ಲಾಭವಾಗುವುದಾಗಿ ಸರ್ಕಾರ ಹೇಳಿತ್ತು. ಆದರೆ, ಇದು ಸುಳ್ಳಾಗುತ್ತಿದೆ.

ಕಚ್ಚಾತೈಲದ ಬೆಲೆ ಶೇ. 50 ಇಳಿಕೆ

ಭಾರತಕ್ಕೆ ಪೂರೈಕೆಯಾಗುವ ಸ್ವೀಟ್ ಬ್ರೆಂಟ್ ದರ್ಜೆಯ ಅಂತಾರಾಷ್ಟ್ರೀಯ ದರ 2014ರಲ್ಲಿ ಬ್ಯಾರೆಲ್​ಗೆ ಅಂದಾಜು 93.11 ಡಾಲರ್ (ಅಂದಾಜು 6 ಸಾವಿರ ರೂ.) ಇತ್ತು. ಈಗ ಅದು ಅಂದಾಜು ಶೇ. 50 ಕಡಿಮೆಯಾಗಿ ಬ್ಯಾರೆಲ್​ಗೆ 48.31 ಡಾಲರ್ (ಸೆ.13ರ ದರ) (-ಠಿ;3,093) ಇಳಿದಿದೆ. ಆದರೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ ಶೇ.126 ಮತ್ತು ಶೇ.374 ಅಬಕಾರಿ ಸುಂಕ ಹೇರಿದೆ. ವಿವಿಧ ಮೇಲ್ತೆರಿಗೆಗಳು ಮತ್ತು ರಾಜ್ಯ ಸರ್ಕಾರಗಳ ಸುಂಕಗಳು ಸೇರಿ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದೆ.

ಇದು ಇರ್ವ ಎಫೆೆಕ್ಟ್ ಎಂದ ಸರ್ಕಾರ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇತ್ತೀಚೆಗೆ ಶೇ.18-20 ಏರಿಕೆಯಾಗಿತ್ತು. ಆದರೆ, ಅಮೆರಿಕಕ್ಕೆ ಇರ್ವ ಮತ್ತಿತರ ಚಂಡಮಾರುತಗಳು ಅಪ್ಪಳಿಸಿದ್ದರಿಂದ ಕಚ್ಚಾ ತೈಲ ಹೊರತೆಗೆಯುವ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಸದ್ಯ ಬೆಲೆಗಳು ಶೇ.15 ಹೆಚ್ಚಾಗಿದೆ. ಭವಿಷ್ಯದಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗುವ ಅಂದಾಜಿದೆ ಎಂದು ಸಚಿವ ಧಮೇಂದ್ರ ಪ್ರಧಾನ ಹೇಳಿದ್ದಾರೆ.

1 ಲೀಟರ್ ಪೆಟ್ರೋಲ್ ಉತ್ಪಾದನೆಗೆ 31 ರೂ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಲೀಟರ್​ಗೆ -ಠಿ;19.45 ಆಗುತ್ತದೆ. ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್​ಪಿ) ಮತ್ತು ಭಾರತ್ ಪೆಟ್ರೋಲಿಯಂನ (ಬಿಪಿ) ತೈಲ ಸಂಸ್ಕರಣಾ ಘಟಕ ತಲುಪುವಾಗ ಇದರ ದರ ಲೀಟರ್​ಗೆ -ಠಿ;21.50ಕ್ಕೆ ಹೆಚ್ಚಾಗುತ್ತದೆ. ಅದನ್ನು ಸಂಸ್ಕರಿಸುವ ಕಂಪನಿಗಳು ಪ್ರವೇಶ ತೆರಿಗೆ, ಇಳಿಸುವ ವೆಚ್ಚ (ಲ್ಯಾಂಡಿಂಗ್ ಕಾಸ್ಟ್), ಸಂಸ್ಕರಣಾ ವೆಚ್ಚ ಮತ್ತಿತರ ಕಾರ್ಯಕಾರಿ ವೆಚ್ಚ (ಆಪರೇಷನಲ್ ಕಾಸ್ಟ್) ಸೇರಿ ಒಟ್ಟು -ಠಿ;9.34 ಸೇರಿಸುತ್ತವೆ. ಹೀಗಾಗಿ ಪೆಟ್ರೋಲ್ ತಯಾರಾಗುವಾಗ ಅದರ ಬೆಲೆ ಲೀಟರ್​ಗೆ ಅಂದಾಜು -ಠಿ;31 (-ಠಿ;30.84) ಆಗುತ್ತದೆ.

ನಾವು 72 ರೂ. ಏಕೆ ಪಾವತಿಸಬೇಕು?

ಪೆಟ್ರೋಲ್ ಲೀಟರ್​ಗೆ -ಠಿ;31ರಂತೆ ತಯಾರಾಗುತ್ತದೆ ನಿಜ. ಆದರೆ, ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ ಶೇ.126 ಮತ್ತು ಡೀಸೆಲ್ ಮೇಲೆ ಶೇ.374 ಅಬಕಾರಿ ಸುಂಕ ವಿಧಿಸುತ್ತದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ತೈಲ ದರಗಳು ಕುಸಿದಾಗ, ಹೆಚ್ಚುವರಿ ಆದಾಯ ಗಳಿಕೆಗೆ ಮೇಲ್ತೆರಿಗೆಯನ್ನೂ ವಿಧಿಸಿತ್ತು. ಜತೆಗೆ ರಾಜ್ಯ ಸರ್ಕಾರಗಳು ಕೂಡ ಹಲವು ತೆರಿಗೆಗಳನ್ನು ವಿಧಿಸುತ್ತವೆ. ಇವು ವಿವಿಧ ಸ್ತರದಲ್ಲಿ ನಿಗದಿಯಾಗಿರುತ್ತವೆ. ತೈಲ ಬೆಲೆಗಳು ಏರುತ್ತಿದ್ದಂತೆ, ಅದಕ್ಕನುಸಾರವಾಗಿ ತೆರಿಗೆ ಪ್ರಮಾಣವೂ ಹೆಚ್ಚಾಗುತ್ತದೆ. ಬುಧವಾರದ ದರದಂತೆ, ಗ್ರಾಹಕರು ಲೀಟರ್ ಪೆಟ್ರೋಲ್​ಗೆ -ಠಿ;48ಕ್ಕೂ ಹೆಚ್ಚಿನ ತೆರಿಗೆ ಪಾವತಿಸಬೇಕು.

 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಾಯಿತೆಂದು ತೈಲ ದರಗಳನ್ನು ಹಠಾತ್ತನೆ ಇಳಿಸಲು ಸಾಧ್ಯವಿಲ್ಲ. ಇದೆಲ್ಲದಕ್ಕೂ ಜಿಎಸ್​ಟಿಯೇ ಪರಿಹಾರ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೂ ಈ ಬಗ್ಗೆ ಒಲವಿದೆ.

| ಧಮೇಂದ್ರ ಪ್ರಧಾನ, ಪೆಟ್ರೋಲಿಯಂ ಸಚಿವ

Leave a Reply

Your email address will not be published. Required fields are marked *

Back To Top