Friday, 18th August 2017  

Vijayavani

1. ಕಾಂಗ್ರೆಸ್‌ನಲ್ಲಿ ಎಡಪಂಥಿಯರಿಗೆ ಮಾತ್ರ ಮಣೆ- ಚುನಾವಣಾ ತಂತ್ರಗಾರ ಕೈ ಗುಡ್‌ಬೈ- ಅಲ್ಪ ಸಂಖ್ಯಾತರರನ್ನ ಅತಿಯಾಗಿ ಓಲೈಸ್ತಿದ್ಯಾ ಕಾಂಗ್ರೆಸ್‌.? 2. ಜೆಡಿಎಸ್​ ಭಿನ್ನರಿಗೆಲ್ಲಾ ಇಲ್ಲಾ ಟಿಕೆಟ್​ – 3 ಕ್ಷೇತ್ರಗಳ ಟಿಕೆಟ್​​​​​​​​ಗೆ ಖಾತ್ರಿ ನೀಡದ ಖರ್ಗೆ- ತ್ರಿಶಂಕು ಸ್ಥಿತಿಯಲ್ಲಿ ಜೆಡಿಎಸ್​​​​​​ ಭಿನ್ನರ ಸ್ಥಿತಿ 3. ಸಿಲಿಕಾನ್ ಸಿಟಿಗೆ ಖತರ್ನಾಕ್​ ಗ್ಯಾಂಗ್​ ಎಂಟ್ರಿ- ಸೆಕ್ಯೂರಿಟಿ ಡ್ರೆಸ್​​​ನಲ್ಲಿ ಮಾಡ್ತಿದ್ದಾರೆ ಕಳ್ಳತನ- ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕೃತ್ಯ 4. ರಾಜೀನಾಮೆ ಬಳಿಕ ವಿಶಾಲ್‌ ಸಿಕ್ಕಾ ಮೊದಲ ಮಾತು- ನನ್ನ ಜೀವನದ ದುಃಖದ ವಿಚಾರ ಅಂತಾ ಬೇಸರ- ಅತ್ತ ನಾನು ಕಾರಣನಲ್ಲ ಎಂದ ನಾರಾಯಣ ಮೂರ್ತಿ 5. ಯುಪಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಪ್ರಕರಣ- ಹೈಕೋರ್ಟ್‌ನಿಂದ ಯೋಗಿ ಸರ್ಕಾರಕ್ಕೆ ತರಾಟೆಗೆ- ಕೂಡಲೇ ವರದಿ ನೀಡಲು ಸೂಚನೆ
Breaking News :

ಸಿನಿಮಾ ಶೈಲಿಯಲ್ಲಿ ಶುರುವಾಯ್ತು ಉಪ್ಪಿ ಪ್ರಜಾಕಾರಣ

Sunday, 13.08.2017, 3:06 AM       No Comments

ಬೆಂಗಳೂರು: ‘ಪ್ರಜೆ ಸಾಮಾನ್ಯನೂ ಅಲ್ಲ, ಶ್ರೀಸಾಮಾನ್ಯನೂ ಅಲ್ಲ, ಅಸಾಮಾನ್ಯ. ಅವನು ಮನಸು ಮಾಡಿದರೆ ನಾಯಕರಿಲ್ಲದ, ಸೇವಕರೂ ಇಲ್ಲದ ಕಾರ್ವಿುಕರಿಂದಲೇ ನಡೆಯುವ ಸ್ವಚ್ಛ ಆಡಳಿತ ಸಾಧ್ಯ. ಅದಕ್ಕಾಗಿ ನಾನು ವೇದಿಕೆ ನಿರ್ವಿುಸಿದ್ದೇನೆ, ಎಲ್ಲ ಪ್ರಜಾ ಅಸಾಮಾನ್ಯರು ಕೈಜೋಡಿಸಿ…‘

ಶುಕ್ರವಾರವಷ್ಟೇ ರಾಜಕೀಯಕ್ಕೆ ಬರುವ ಸುಳಿವು ನೀಡಿದ್ದ ‘ರಿಯಲ್ ಸ್ಟಾರ್‘ ಉಪೇಂದ್ರ, ಶನಿವಾರ ‘ರುಪೀಸ್ ರೆಸಾರ್ಟ್‘ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಿನಿಮೀಯ ಶೈಲಿಯಲ್ಲೇ ಮಾತನಾಡುವ ಮೂಲಕ ರಾಜಕೇಂದ್ರಿತ ರಾಜಕಾರಣದ ಬದಲು ಪ್ರಜಾಕೇಂದ್ರಿತ ಪ್ರಜಾಕಾರಣ ಎಂಬ ವಿಭಿನ್ನ ಯೋಚನೆಯೊಂದಿಗೆ ಆಡಳಿತ ವ್ಯವಸ್ಥೆ ಸುಧಾರಿಸಲು ಮುಂದಾಗಿರುವುದಾಗಿ ಅಧಿಕೃತವಾಗಿ ಘೊಷಿಸಿದರು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ಸ್ಪಷ್ಟಪಡಿಸಿದರು.

ಖಾಕಿ ಶರ್ಟ್ ಧರಿಸಿ ಸುದ್ದಿಗೋಷ್ಠಿಗೆ ಹಾಜರಾದ ಅವರು, ‘ಹಣ ಬಲ, ತೋಳ್ಬಲ, ಜಾತಿ ಬಲ ಹಾಗೂ ಖ್ಯಾತಿಯ ಬಲ ಇದ್ದರೆ ಸಾಕು ನಾಯಕರಾಗಬಹುದು ಎಂಬ ಭಾವನೆ ಬಹಳ ವರ್ಷಗಳಿಂದಲೂ ಬೇರೂರಿದೆ. ಆದರೆ ನಮಗೆ ಬೇಕಾಗಿರುವುದು ನಾಯಕರಲ್ಲ. ನಾಯಕ ಒಂದಷ್ಟು ಹಣ ಚೆಲ್ಲಿ ಆಳುತ್ತಾನೆ. ಇನ್ನು ಸೇವಕರು ಬೇಕು ಎನ್ನಲು ನಾವ್ಯಾರೂ ಅಶಕ್ತರಲ್ಲ. ನಮಗೆ ಬೇಕಿರುವುದೀಗ ಜನರಿಗಾಗಿ ಕೆಲಸ ಮಾಡುವ ಕಾರ್ವಿುಕರು‘ ಎಂದು ಒತ್ತಿ ಹೇಳಿದರು.

‘ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಪ್ರಜೆಯೇ ಪ್ರಭುವಾಗಿರಬೇಕು. ಹಾಗಿದ್ದರೂ ರಾಜಕೀಯ, ರಾಜಕಾರಣ ಎಂಬುದೇ ಪ್ರಧಾನ ಎಂಬಂತೆ ಬಿಂಬಿಸಲಾಗುತ್ತಿದ್ದು, ಜನರನ್ನು ಜನಸಾಮಾನ್ಯ ಎಂದು ನಂಬಿಸಲಾಗಿದೆ. ಆದರೆ ಜನ ಸಾಮಾನ್ಯನೂ ಅಲ್ಲ, ಶ್ರೀಸಾಮಾನ್ಯನೂ ಅಲ್ಲ, ಅಸಾಮಾನ್ಯ. ರಾಜ್ಯದ ಬಜೆಟ್ ಗಾತ್ರ 2 ಲಕ್ಷ ಕೋಟಿ ರೂ. ಇದೆ. ಅವೆಲ್ಲ ಬರೀ ಆದಾಯ ತೆರಿಗೆಯಿಂದ ಸಂಗ್ರಹವಾದಂಥವಲ್ಲ, ಅದು ಜನ ಅಸಾಮಾನ್ಯರ ತೆರಿಗೆಯ ಹಣ. ಅದರಿಂದಲೇ ರಾಜ್ಯದ ಪೌರಕಾರ್ವಿುಕನಿಂದ ಹಿಡಿದು ಸಿಎಂ ವರೆಗೆ ಇಡೀ ಆಡಳಿತ ವ್ಯವಸ್ಥೆಯ ಪ್ರತಿಯೊಬ್ಬರ ವೇತನ ಪಾವತಿಯಾಗುತ್ತಿದೆ. ಲೆಕ್ಕಪ್ರಕಾರ, ಆ ಹಣದಲ್ಲಿ ಸಂಬಳಕ್ಕಾಗಿ ಬಳಕೆಯಾಗಿ ಉಳಿದದ್ದು ಪುನಃ ಜನೋಪಯೋಗಿ ಕಾರ್ಯಗಳಿಗೆ ವಿನಿಯೋಗವಾಗಬೇಕು. ಅದಕ್ಕಾಗಿ ನಾನು ಪ್ರಜಾಕಾರಣಕ್ಕೆ ಇಳಿದಿದ್ದೇನೆ‘ ಎಂದರು.

ಹಣ, ಜಾತಿ, ಖ್ಯಾತಿ ಯಾವ ಬಲವೂ ಇಲ್ಲದೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಅರ್ಹತೆ ಇರುವ ಅದೆಷ್ಟೋ ಮಂದಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಆದರೆ ಹಣವಿಲ್ಲದೆಯೂ ಚುನಾವಣೆಗೆ ಸ್ಪರ್ಧಿಸಬಹುದು, ವ್ಯವಸ್ಥೆ ಸರಿಪಡಿಸಬಹುದು ಎಂಬುದನ್ನು ಮನವರಿಕೆ ಮಾಡುವ ಸಲುವಾಗಿಯೇ ಈ ಪ್ರಜಾಕಾರಣ ಎಂದರು.

***

ಖಾಕಿ ಬಟ್ಟೆ ಡ್ರೆಸ್ ಕೋಡ್

ತಮ್ಮೊಂದಿಗೆ ಬರುವವರು ಖಾಕಿ ತೊಟ್ಟು ಕಾರ್ಯ ನಿರ್ವಹಿಸಬೇಕು ಎಂದೂ ಹೇಳಿದ ಉಪೇಂದ್ರ, ಸಾರ್ವಜನಿಕರಿಂದ ಅತ್ಯುತ್ತಮ ಸಲಹೆ ಸಂಗ್ರಹಿಸಲೆಂದೇ ಮೂರು ಇ-ಮೇಲ್ ಐಡಿ ಸೃಷ್ಟಿಸಿದ್ದು, ಜನ ಅಸಾಮಾನ್ಯರು ಅದಕ್ಕೆ ಐಡಿಯಾಗಳನ್ನು ಮೇಲ್ ಮಾಡುವಂತೆ ಕೋರಿದರು. ಜತೆಗೆ ‘ರುಪೀಸ್ ರೆಸಾರ್ಟ್’ ವಿಳಾಸಕ್ಕೆ ಲಿಖಿತವಾಗಿ ಬರೆದು ಕಳುಹಿಸಬಹುದು ಎಂದರು.

ಸೋಲು-ಗೆಲುವು ಮುಖ್ಯವಲ್ಲ

ಜನರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದ ಉಪೇಂದ್ರ, ಯಾವುದೇ ಪಕ್ಷ ಸೇರುವ ಯೋಚನೆ ಇಲ್ಲ ಎಂದು ಹೇಳಿದರು. ‘ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಒಂದು ಲೆಕ್ಕದಲ್ಲಿ ನಾನು ಈಗಾಗಲೇ ಗೆದ್ದಿದ್ದೇನೆ. ಏಕೆಂದರೆ ಪ್ರಯತ್ನಿಸುತ್ತಿದ್ದೇನೆ. ನನ್ನೊಂದಿಗೆ ಜನ ಅಸಾಮಾನ್ಯರೂ ಕೈಜೋಡಿಸಿದರೆ ವ್ಯವಸ್ಥೆಯ ಬದಲಾವಣೆ ಸಾಧ್ಯ‘ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸದ್ಯ ಒಪ್ಪಿರುವ ಸಿನಿಮಾಗಳನ್ನು ಮುಗಿಸಿ ಬಳಿಕ ಪ್ರಜಾಕಾರಣಕ್ಕೇ ಹೆಚ್ಚಿನ ಗಮನಹರಿಸುವ ಮೂಲಕ ಇದನ್ನೊಂದು ರ್ತಾಕ ಅಂತ್ಯಕ್ಕೆ ಕೊಂಡ್ಯೊಯುವುದಾಗಿ ಹೇಳಿದರು.

Leave a Reply

Your email address will not be published. Required fields are marked *

Back To Top