Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಸಿಡಿಲು ಬಡಿದು 2 ಸಾವು

Thursday, 14.09.2017, 3:00 AM       No Comments

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆರ್ಭಟಿಸಿದ್ದು ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆ ಇನಾಮಹೊಂಗಲದ ಬೆಣ್ಣಿಹಳ್ಳದ ಪ್ರವಾಹದಲ್ಲಿ ಸಿಲುಕಿ ಕೊಂಡು ಲೈಟ್ ಕಂಬವೇರಿ ಕುಳಿತಿದ್ದ ಸಹೋದರರನ್ನು ರಕ್ಷಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಮನೆ, ಜಮೀನುಗಳಿಗೆ ನೀರು ನುಗ್ಗಿದ್ದು ನಷ್ಟವಾಗಿದೆ.

ಕರಾವಳಿ ಪ್ರದೇಶವಾದ ಕಾರವಾರ, ಧಾರಾವಾಡ, ಹಾವೇರಿ, ಬೆಳಗಾವಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು ಅಪಾರ ಹಾನಿಯಾಗಿದೆ. ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಬುಧವಾರ ಸಂಜೆ ಧಾರವಾಡ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಸುರಿಯಿತು. ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆಯ ಟೋಲ್ ನಾಕಾ ಬಳಿ ತಗ್ಗು ಪ್ರದೇಶ ಇರುವುದರಿಂದ ಭಾರೀ ನೀರು ನಿಂತಿತ್ತು. ವಿಜಯಪುರ ಸೇರಿ ಸುತ್ತಮುತ್ತ ಪ್ರದೇಶ, ಮುದ್ದೇಬಿಹಾಳ, ತಾಳಿಕೋಟೆಯ ವಿವಿಧ ಭಾಗ ಗಳಲ್ಲಿ ಭಾರಿ ಮಳೆಯಾಗಿದೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಇನಾಮಹೊಂಗಲ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ತಡ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದ ಇನಾಮಹೊಂಗಲದ ಬೆಣ್ಣಿಹಳ್ಳ ಸಂಪೂರ್ಣ ತುಂಬಿ ಹತ್ತಿರದ ಧಾರವಾಡ ಜಿಲ್ಲೆಯ ಆಯಟ್ಟಿ- ಶಿರೂರ ರಸ್ತೆ ಮೇಲೆ ಆಟೋ ಸಂಚರಿಸುತ್ತಿದ್ದಾಗ ಒಮ್ಮೆಲೇ ನೀರು ಬಂದಿದ್ದರಿಂದ ಎರಡು ಅಟೋಗಳು ನೀರಿನಲ್ಲಿ ತೇಲಿ ಹೋಗಿವೆ. ಸವದತ್ತಿ ತಾಲೂಕಿನ ಇನಾಮಹೊಂಗಲ ಗ್ರಾಮದ ಸಹೋದರರಾದ ಸಂತೋಷ ಚಚಡಿ (30), ಆನಂದ ಚಚಡಿ (25) ಪ್ರವಾಹದಲ್ಲಿ ಸಿಲುಕಿದವರು. ಶಿರೂರ ಗ್ರಾಮದ ಹನುಮಂತ ಲಕ್ಕಣ್ಣವರ ಹಾಗೂ ಇನಾಮಹೊಂಗಲದ ಮಕ್ತುಮ್ಾಬ್ ರಸುಲ್ ಈಜಿ ಪಾರಾಗಿ ಬಂದಿದ್ದಾರೆ.

ಪ್ರವಾಹಕ್ಕೆ ಸಿಲುಕಿಕೊಂಡು ವಿದ್ಯುತ್ ಕಂಬ ಏರಿ ಕುಳಿತಿದ್ದ ಚಚಡಿ ಸಹೋದರರನ್ನು ರಕ್ಷಿಸಲು ನವಲಗುಂದ ತಾಲೂಕಿನ ಅಣ್ಣಿಗೇರಿ ಹಾಗೂ ಧಾರವಾಡದಿಂದ ಆಗಮಿಸಿದ ಅಗ್ನಿ ಶಾಮಕ ದಳದ 20 ಜನರ ತಂಡ ಹಾಗೂ ಸವದತ್ತಿ ತಾಲೂಕಿನ ಪೊಲೀಸರು, ಸೋದರರಿಬ್ಬರನ್ನು ಬೋಟ್​ಗೆ ಹತ್ತಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ತಂದರು.

ಹಾವೇರಿ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ 22 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಹಿರೇಕೆರೂರ ತಾಲೂಕಿನಲ್ಲಿ 150 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಮಳೆಯ ರಭಸಕ್ಕೆ ಗೋವಿನಜೋಳ, ಹತ್ತಿ ಬೆಳೆ ಸಂಪೂರ್ಣ ನೆಲಕಚ್ಚಿವೆ. ಕೆಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಕಾರವಾರ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಗುಡುಗು ಸಹಿತ ಮಳೆಯಾಗಿದೆ. ಅಂಕೋಲಾ ತಾಲೂಕಿನ ಹಳವಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬೀಸಿದ ಸುಂಟರ ಗಾಳಿಗೆ ಐದಾರು ರೈತರಿಗೆ ಸೇರಿದ 300ಕ್ಕೂ ಹೆಚ್ಚು ಅಡಕೆ ಮರಗಳು ಧರಾಶಾಹಿಯಾಗಿವೆ. ಇನ್ನು ಅರಣ್ಯದಲ್ಲಿದ್ದ ಸಂಪದ್ಭರಿತ ಮರಗಳೂ ಉರುಳಿ ಬಿದ್ದಿವೆ.

ಹೊಲದಲ್ಲಿದ್ದಾಗ ದುರಂತ

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕಾಚವಾರ ಗ್ರಾಮದಲ್ಲಿ ಬುಧವಾರ ಸಂಜೆ ಸಿಡಿಲು ಬಡಿದು ರೈತ ರಾಮಪ್ಪ ಹಣಮಂತು (50) ಮೃತಪಟ್ಟಿದ್ದಾರೆ. ಹೊಲದಿಂದ ಸಂಜೆ ಮನೆಗೆ ಬರುವಾಗ ಜೋರಾಗಿ ಮಳೆ ಸುರಿಯಲಾರಂಭಿಸಿತು. ಹತ್ತಿರದ ಹುಣಸೆ ಮರದ ಕೆಳಗೆ ಆಶ್ರಯಕ್ಕಾಗಿ ನಿಂತಾಗ ಆವಘಡ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಕೆರೂರಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಪ್ಪಸಕಟ್ಟೆಯ ಮಲ್ಲಪ್ಪ ಸಿದ್ದಪ್ಪ ಮಾದಪ್ಪನವರ(20) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

Back To Top