Tuesday, 16th January 2018  

Vijayavani

ಮತ್ತೊಂದು ಟ್ವೀಟ್‌ ಮಾಡಿ ಕೆಣಕಿದ ಪಾಲ್ಯೇಕರ್ - ಕಣಕುಂಬಿ ಕಾಮಗಾರಿ ಪರಿಶೀಲನೆಗೆ ನಾಲ್ವರ ತಂಡ ರಚನೆ - ಗೋವಾ ಸಚಿವನ ವಿರುದ್ಧ ಸಿಎಂ ಆಕ್ರೋಶ        ಪರಮೇಶ್ವರ್‌ಗೂ ಕಂಟಕವಾಯ್ತು ಸದಾಶಿವ ಆಯೋಗ - ವರದಿ ವಿರೋಧಿಸಿದ್ದಕ್ಕೆ ಸ್ವಕ್ಷೇತ್ರದಲ್ಲೇ ಆಕ್ರೋಶ - ಮತ ಹಾಕದಿರಲು ಮಾದಿಗ ಮುಖಂಡರ ನಿರ್ಧಾರ        ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಮತ್ತೆ ಕೀಚಕ ಕೃತ್ಯ - ಇಂದಿರಾನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ - ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ        ಕೊನೆಗೂ ಮೌನ ಮುರಿದ ಸುಪ್ರೀಂಕೋರ್ಟ್‌ ಸಿಜೆ - ಬಂಡಾಯ ನ್ಯಾಯಮೂರ್ತಿಗಳ ಜತೆ ದೀಪಕ್‌ ಮಿಶ್ರ ಚರ್ಚೆ - 15 ನಿಮಿಷಗಳ ಕಾಲ ಸಂಧಾನ ಮಾತುಕತೆ        ಚೆಂಡು ನೆಲಕ್ಕೆ ಎಸೆದ ವಿರಾಟ್‌ಗೆ ಐಸಿಸಿ ತರಾಟೆ - ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿಟ್ಟಾದ ಕೊಹ್ಲಿಗೆ ದಂಡ - ಪಂದ್ಯದ 25 ಪರ್ಸೆಂಟ್‌ ಸಂಭಾವನೆ ಕಡಿತ       
Breaking News :

ಸಿಗಂದೂರಿಗೆ ಸೇತುವೆ

Thursday, 21.12.2017, 3:00 AM       No Comments

ಬೆಂಗಳೂರು/ಶಿವಮೊಗ್ಗ: ಸಾಗರ ತಾಲೂಕು ಸಿಗಂದೂರು ಹಿನ್ನೀರಿನಲ್ಲಿ ಸೇತುವೆ ನಿರ್ವಿುಸಬೇಕೆಂಬ ಹಲವು ದಶಕಗಳ ಕೂಗಿಗೆ ಕೊನೆಗೂ ಸ್ಪಂದನೆ ಸಿಕ್ಕಿದೆ. 600 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಹಾಗೂ ರಸ್ತೆ ನಿರ್ವಣಕ್ಕೆ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದಾರೆ. ಈ ಭಾಗದ ರಸ್ತೆ ಎನ್​ಎಚ್​ಎಐಗೆ ಸೇರ್ಪಡೆಗೊಂಡ ಬಳಿಕ ಸೇತುವೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸುವ ಕಾರ್ಯಕ್ಕೂ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಅಧಿಕೃತ ಘೊಷಣೆ ಹೊರಬೀಳುವ ನಿರೀಕ್ಷೆಯಿದೆ. ಈ ಕಾರಣಕ್ಕಾಗಿ ಸೇತುವೆ ನಿರ್ಮಾಣ ತಡವಾಯಿತು ಎಂದು ಸಚಿವರು ಸ್ಪಷ್ಟಪಡಿಸಿದರು. ಸಿಗಂದೂರು ಮತ್ತು ಹಲವು ಗ್ರಾಮಗಳನ್ನು ತಲುಪಲು ಲಾಂಚ್ ವ್ಯವಸ್ಥೆ ಇದ್ದು, ಪ್ರತಿನಿತ್ಯ ಸಾವಿರಾರು ಜನರು, ವಾಹನಸಮೇತ ಲಾಂಚ್​ನಲ್ಲಿ ಪ್ರಯಾಣಿಸುತ್ತಾರೆ. ಹಾಗೆಯೇ ಸಿಗಂದೂರಿನಲ್ಲಿರುವ ಧಾರ್ವಿುಕ ಕ್ಷೇತ್ರಕ್ಕೆ ರಾಜ್ಯ ಹೊರರಾಜ್ಯದಿಂದಲೂ ಜನರು ಆಗಮಿಸುವ ಕಾರಣ ಸ್ಥಳೀಯರು ಲಾಂಚ್ ಸೌಲಭ್ಯ ಪಡೆದುಕೊಳ್ಳಲು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸೇತುವೆ ನಿರ್ವಿುಸಬೇಕೆಂದು ಸ್ಥಳೀಯರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ.

50 ಕೋಟಿ ರೂ. ವೆಚ್ಚದ ಹಸಿರುಮಕ್ಕಿ ಸೇತುವೆ ಕಾಮಗಾರಿ ಸಂಬಂಧ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ಸಿಗಂದೂರು, ಕೊಲ್ಲೂರು ದೇವಸ್ಥಾನ ಇರುವುದರಿಂದ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ವಣದ ಕನಸು ಈಡೇರುತ್ತಿದೆ.

| ಕಾಗೋಡು ತಿಮ್ಮಪ್ಪ ಕಂದಾಯ ಸಚಿವ

‘ಕಾಲಾಪಾನಿ’ ಸರಣಿ

ಶರಾವತಿ ಹಿನ್ನೀರು ಸಂತ್ರಸ್ತರ ಸಮಸ್ಯೆ ಬಗ್ಗೆ ‘ವಿಜಯವಾಣಿ’ 2012ರ ನವೆಂಬರ್ ಹಾಗೂ ಡಿಸೆಂಬರ್​ನಲ್ಲಿ ಸತತ 29 ದಿನ ‘ಕಾಲಾಪಾನಿ’ ಸರಣಿ ವರದಿ ಪ್ರಕಟಿಸಿತ್ತು. ಇದಕ್ಕೆ ಅನೇಕ ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು, ಜನಪ್ರತಿನಿಧಿಗಳು ಪ್ರತಿಕ್ರಿಯಿಸಿ ಲೇಖನಗಳನ್ನು ಬರೆದಿದ್ದರು. ತುಮರಿ ಭಾಗದ ಜನರ ಅನುಕೂಲಕ್ಕೆ ಸೇತುವೆ ನಿರ್ವಣದ ಅಗತ್ಯದ ಬಗ್ಗೆ ‘ವಿಜಯವಾಣಿ’ ಬೆಳಕು ಚೆಲ್ಲಿತ್ತು. ಸೇತುವೆಗೆ ಸಂಬಂಧಿಸಿ ಸರ್ಕಾರದ ಮಟ್ಟದಲ್ಲಿ ನಡೆದ ಎಲ್ಲ ಬೆಳವಣಿಗೆಗಳನ್ನು ಜನರಿಗೆ ತಲುಪಿಸುವ ಹಾಗೂ ಪ್ರಕ್ರಿಯೆಗೆ ವೇಗ ನೀಡುವ ಕೆಲಸವನ್ನು ಮಾಡುತ್ತ ಪತ್ರಿಕೆ ಜನರಿಗೆ ಧ್ವನಿಯಾಗುತ್ತ ಬಂದಿದೆ.

2.1 ಕಿ.ಮೀ. ಉದ್ದ

ಶರಾವತಿ ಹಿನ್ನೀರಿನ ಕಳಸವಳ್ಳಿ- ಅಂಬಾರಗೋಡ್ಲು ಪ್ರದೇಶದಲ್ಲಿ ಸೇತುವೆ ಕಾಮಗಾರಿಗೆ ಮಣ್ಣು ಪರೀಕ್ಷಾ ಕಾರ್ಯ ಭರದಿಂದ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿಯಲ್ಲಿ ಸೇತುವೆ ಕಾಮಗಾರಿ ಆರಂಭವಾಗಲಿದೆ. ಸೇತುವೆ ಒಟ್ಟು ಉದ್ದ 2.1 ಕಿಮೀ, ಅಗಲ 10 ಮೀಟರ್. 50 ಪಿಲ್ಲರ್​ಗಳ ಪೈಕಿ ನೀರಿನ ಒಳಗಿನಿಂದ ಎದ್ದುಬರುವ ಕಂಬಗಳು 40. ಉಳಿದ 10 ಕಂಬಗಳು ನೀರಿನಂಚಿನ ನೆಲಕ್ಕೆ ಬರುತ್ತವೆ. ಹಿನ್ನೀರಿನ 30 ಅಡಿ ಆಳದಲ್ಲಿ ಪೈಪ್​ಗಳನ್ನು ಇಳಿಸಿ ಆಧುನಿಕ ತಂತ್ರಜ್ಞಾನದ ಮೂಲಕ ಮಣ್ಣು ಪರೀಕ್ಷೆ ನಡೆಸಲಾಗಿದೆ.

Leave a Reply

Your email address will not be published. Required fields are marked *

Back To Top