Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಸಿಎಂ ಪ್ರಚಾರ ಯಾತ್ರೆ ಡಿಸೆಂಬರ್​ನಲ್ಲಿ ಶುರು

Friday, 06.10.2017, 3:02 AM       No Comments

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ನವ ಕರ್ನಾಟಕ ಪರಿವರ್ತನಾ ಯಾತ್ರೆಯಂತೆಯೇ ಸಿಎಂ ಸಿದ್ದರಾಮಯ್ಯ ಸಹ ಎಲ್ಲ ತಾಲೂಕುಗಳಲ್ಲಿ ಯಾತ್ರೆ ಹೊರಟಿದ್ದಾರೆ.

ಡಿಸೆಂಬರ್​ನಲ್ಲಿ ಸಿದ್ದರಾಮಯ್ಯ ಯಾತ್ರೆ ಹೊರಡುವುದು ಖಚಿತವಾಗಿದ್ದು, ಸಂಕ್ರಾಂತಿಯೊಳಗೆ ಯಾತ್ರೆ ಕೊನೆಗೊ ಳಿಸಬೇಕೆಂದು ಉದ್ದೇಶಿಸಿದ್ದಾರೆ. ಮೂಲಗಳ ಪ್ರಕಾರ ಈ ಯಾತ್ರೆಗೆ ‘ನವ ಕರ್ನಾಟಕ’ ಎಂದು ಹೆಸರಿಡುವ ಸಾಧ್ಯತೆಯಿದೆ. ಇತ್ತೀಚೆಗಷ್ಟೆ ‘ನವ ಕರ್ನಾಟಕ-2025‘ ಎಂಬ ಘೋಷಣೆ ಮಾಡಿ, ಡಿಸೆಂಬರ್ ಒಳಗೆ ಹೊಸ ಕರ್ನಾಟಕದ ಪರಿಕಲ್ಪನೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.

ಭವಿಷ್ಯದ ಕನಸು: ರಾಜ್ಯ ಸರ್ಕಾರದ ನಾಲ್ಕುವರೆ ವರ್ಷದ ಸಾಧನೆ ಹಾಗೂ ಭವಿಷ್ಯದ ಕನಸು ಬಿತ್ತುವ ಯಾತ್ರೆ ಇದಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಕಡಿಮೆ ಕಾಲಾವಧಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವನ್ನು ಹೇಗೆ ತಲುಪಬಹುದು? ತಮ್ಮೊಂದಿಗೆ ಯಾವೆಲ್ಲ ನಾಯಕರನ್ನು ಜೋಡಿಸಿಕೊಳ್ಳಬೇಕೆಂಬ ಎಂಬ ಲೆಕ್ಕಾಚಾರ ನಡೆಯುತ್ತಿದೆ. ‘ಯಾತ್ರೆ ನಡೆಸಲು ಸಿಎಂ ಚಿಂತನೆ ನಡೆಸಿದ್ದಾರೆ. ಆದರೆ ಯಾತ್ರೆಯ ಸ್ವರೂಪ, ದಿನಾಂಕ, ಹೆಸರು ಹಾಗೂ ಇತರ ವಿಚಾರಗಳ ಬಗ್ಗೆ ಯಾವುದೇ ಅಂತಿಮ ನಿರ್ಣಯವಾಗಿಲ್ಲ. ಶೀಘ್ರದಲ್ಲೇ ಇದಕ್ಕೆ ನಿರ್ದಿಷ್ಟ ಸ್ವರೂಪ ಸಿಗಲಿದೆ‘ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ‘ವಿಜಯವಾಣಿ‘ಗೆ ತಿಳಿಸಿದ್ದಾರೆ. ಕ್ಷೇತ್ರಕ್ಕನುಗುಣವಾಗಿ ಸಮಯ ಮತ್ತು ನಾಯಕರೊ ಂದಿಗೆ ಪ್ರವಾಸ ನಡೆಸುವ ಇಚ್ಛೆ ಅವರದ್ದು ಎಂಬುದು ಕಾಂಗ್ರೆಸ್ ಮೂಲಗಳ ಮಾಹಿತಿ. ಸದ್ಯ ಕೆಪಿಸಿಸಿ ವೇದಿಕೆಯಲ್ಲಿ ಈ ಸಂಗತಿಯನ್ನು ಹಂಚಿಕೊಂಡಿಲ್ಲ.

ಯಾತ್ರೆಗೆ ವಿಶೇಷ ಬಸ್

ರಾಜ್ಯ ಸರ್ಕಾರದ ಸಾಧನೆ ಪ್ರಚಾರ ಮಾಡುವ, ಸಾರ್ವಜನಿಕ ಭಾಷಣ ಹಾಗೂ ಯಾತ್ರೆಗೆ ಅನುಕೂಲವಾಗುವ ವಿಶೇಷ ಬಸ್ ಕೂಡ ತಯಾರಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಈ ಮೂಲಕ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಭರ್ಜರಿ ಟಾಂಗ್ ನೀಡಲು ನಿರ್ಧರಿಸಿದ್ದಾರೆ.

ಬಳ್ಳಾರಿಯಲ್ಲಿ ಎಸ್ಟಿ ಸಮಾವೇಶ

ಬಳ್ಳಾರಿ ಪಾದಯಾತ್ರೆ ಮೂಲಕವೇ ನಾಯಕತ್ವ ಗಿಟ್ಟಿಸಿಕೊಂಡ ಅವರು ಡಿಸೆಂಬರ್​ನಲ್ಲಿ ಎಸ್ಟಿ ಸಮಾವೇಶ ಬಳ್ಳಾರಿಯಲ್ಲಿ ನಡೆಸುತ್ತಿದ್ದಾರೆ. ಅಲ್ಲಿಂದಲೇ ಯಾತ್ರೆ ಹೊರಡುವ ಚಿಂತನೆಯೂ ಇದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯು ನವೆಂಬರ್ 2ರಿಂದ 75 ದಿನ ನವ ಕರ್ನಾಟಕ ಪತಿವರ್ತನಾ ಯಾತ್ರೆ ನಡೆಸಲಿದ್ದು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಮಾವೇಶ ಮತ್ತು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸಲಿದೆ.

Leave a Reply

Your email address will not be published. Required fields are marked *

Back To Top