Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಸಿಎಂ ತುಘಲಕ್ ದರ್ಬಾರ್

Sunday, 12.11.2017, 3:01 AM       No Comments

ಮಂಗಳೂರು: ಜನಹಿತ ಸಂಪೂರ್ಣ ಮರೆತು ಸರ್ಕಾರಿ ಖಜಾನೆಯ ಹಗಲು ದರೋಡೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಕ್​ಪ್ರಹಾರ ನಡೆಸಿದರು.

ಶನಿವಾರ ಬಂಟ್ವಾಳ, ಮೂಡುಬಿದಿರೆ ಹಾಗೂ ಮಂಗಳೂರಿಗೆ ಪರಿವರ್ತನಾ ಯಾತ್ರೆಯಲ್ಲಿ ಆಗಮಿಸಿ, ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ರಾಷ್ಟ್ರದಲ್ಲೇ ಮಾದರಿ ರಾಜ್ಯವಾಗುವ ಅರ್ಹತೆಯಿದೆ. ಇಲ್ಲಿ ಕೊರತೆ ಇರುವುದು ದಕ್ಷ ಆಡಳಿತ ಕೊಡಬೇಕು ಎನ್ನುವ ಪ್ರಾಮಾಣಿಕ ಕೈಗಳಿಗೆ ಮಾತ್ರ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರಲು, ಪ್ರಾಮಾಣಿಕ ಸೇವೆಗೆ ಅವಕಾಶ ನೀಡಿ ಆಶೀರ್ವದಿಸಿ ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಂಸಾಹಾರ ಸೇವಿಸಿ ಸಿಎಂ ಭೇಟಿ ನೀಡಿರುವುದನ್ನು ಉಲ್ಲೇಖಿಸಿದ ಬಿಎಸ್​ವೈ, ಭಕ್ತರ ಭಾವನೆಗಳಿಗೆ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ಆ ಬಳಿಕವೂ ಬೇಡರ ಕಣ್ಣಪ್ಪನಿಗೆ ತನ್ನನ್ನು ಹೋಲಿಸಿಕೊಂಡು ಮೂರ್ಖತನದ ಪರಮಾವಧಿ ಪ್ರದರ್ಶಿಸಿದ್ದಾರೆ ಎಂದರು.

ಮಂಗಳೂರಿನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ್ ಬಿಜೆಪಿಗೆ ಸೇರ್ಪಡೆಗೊಂಡರು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಕುಮಾರ್ ಬಂಗಾರಪ್ಪ, ಮಾಳವಿಕಾ, ಆಯನೂರು ಮಂಜುನಾಥ್, ನಳಿನ್ ಕುಮಾರ್ ಕಟೀಲು, ತೇಜಸ್ವಿನಿ ಗೌಡ ಮತ್ತಿತರರಿದ್ದರು.

ಭಾರೀ ಜನಸ್ತೋಮ: ಶುಕ್ರವಾರ ಹಾಗೂ ಶನಿವಾರ ದ.ಕ. ಜಿಲ್ಲೆಯ ಆರು ಕಡೆ ಪರಿವರ್ತನಾ ಯಾತ್ರೆ ಸಾರ್ವಜನಿಕ ಸಭೆ ನಡೆದಿದ್ದು, ಎಲ್ಲ ಕಡೆಯೂ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಸೇರಿರುವುದು ವಿಶೇಷವಾಗಿತ್ತು. ಸಂಘಟಕರ ನಿರೀಕ್ಷೆಯನ್ನೂ ಮೀರಿ ಜನಸಾಗರ ಸಮಾವೇಶಕ್ಕೆ ಹರಿದು ಬಂದಿರುವುದನ್ನು ನೋಡಿ ನಾಯಕರು ಸಂತಸಪಟ್ಟರು.

ವೇಣುಗೋಪಾಲ್ ಬಂಧಿಸಿ: ಕೇರಳ ಅಸೆಂಬ್ಲಿಯಲ್ಲಿ ಅತ್ಯಾಚಾರಿ ಎಂದು ಸಾಬೀತಾಗಿರುವ ವೇಣುಗೋಪಾಲ್ ಕರ್ನಾಟಕದ ಉಸ್ತುವಾರಿಯಾಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ? ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸುವುದಾಗಿ ಯಡಿಯೂರಪ್ಪ ತಿಳಿಸಿದರು.

ಡಾ.ಕಲ್ಲಡ್ಕ ಮುಟ್ಟಿ ನೋಡಿ!

ಕಲ್ಲಡ್ಕ ಶಾಲೆ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಆಗಿರುವ ಅನ್ಯಾಯದ ಬಗ್ಗೆ ಶೋಭಾ ಕರಂದ್ಲಾಜೆ ಪ್ರಸ್ತಾಪಿಸಿ, ವಾಗ್ದಾಳಿ ನಡೆಸಿದರು. ಡಾ.ಭಟ್ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಸರ್ಕಾರ ಪ್ರಶ್ನಿಸುತ್ತದೆ. ಅವರನ್ನು ಬಂಧಿಸುವುದು ಬಿಡಿ, ಮುಟ್ಟಲೂ ಸಾಧ್ಯವಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಗುಡುಗಿದರು. ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಆಲಿಸಿದರು.

ಬಿಜೆಪಿ ಸೇರ್ಪಡೆಗೆ ತಾಂತ್ರಿಕ ಅಡ್ಡಿ

ಕುಂದಾಪುರ: ತಕ್ಷಣಕ್ಕೆ ಬಿಜೆಪಿ ಸೇರಲು ತಾಂತ್ರಿಕ ಅಡ್ಡಿ ಇದ್ದು, ಮುಂದಿನ ದಿನಗಳಲ್ಲಿ ಪಕ್ಷ ಸೇರ್ಪಡೆ ಖಚಿತ. ಕುಂದಾಪುರದಲ್ಲಿ ನಡೆಯುವ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ವೇದಿಕೆ ಏರದೇ ಜನಸಾಮಾನ್ಯನಾಗಿ ಪಾಲ್ಗೊಳ್ಳುವೆ. ಹೀಗೆಂದವರು ಕುಂದಾಪುರ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ. ಶನಿವಾರ ಕುಂದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಷರತ್ತು ಹಾಕದೆ ಬಿಜೆಪಿ ಸೇರ್ಪಡೆಗೊಳ್ಳು ತ್ತೇನೆ. ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಎಲ್ಲಿಯೂ ಯಾವುದನ್ನೂ ಅರ್ಜಿ ಹಾಕಿ ಪಡೆದಿಲ್ಲ. ಪಕ್ಷ ಸೇರಲು ನಾಯಕರಿಂದ ಆಹ್ವಾನ ವಿದ್ದು, ಈ ಹಿಂದೆ ಬಿಜೆಪಿ ಪರ ಕೆಲಸ ಮಾಡಿದ್ದೇನೆ. ತಾಂತ್ರಿಕ ಸಮಸ್ಯೆ ಪರಿಹಾರ ನಂತರ ಬಿಜೆಪಿ ಸೇರುವುದು ನಿಶ್ಚಿತ ಎಂದರು.

Leave a Reply

Your email address will not be published. Required fields are marked *

Back To Top