Friday, 19th January 2018  

Vijayavani

ರಾಜ್ಯದಲ್ಲಿ ಶುರುವಾಗಿದೆ ಪಕ್ಷಾಂತರ ಪರ್ವ - ಮೂರು ಪಕ್ಷದೊಳಗೆ ಆಪರೇಶನ್​​ ಪಾಲಿಟಿಕ್ಸ್​​ - ಗೆಲುವಿಗಾಗಿ ಹೊಂದಾಣಿಕೆಗೂ ಸೈ ಎಂದ ನಾಯಕರು        ಮತ್ತೆ ಅನಂತಕುಮಾರ್​ ಹೆಗಡೆ ಉದ್ಧಟತನ - ಮಹಾಭಾರತದ ಜತೆ ವಿರೋಧಿಗಳ ಹೋಲಿಕೆ - ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ        ಪ್ಲಾಸ್ಟಿಕ್​​ ಕವರ್​​ನಲ್ಲಿ ರಾಶಿ ರಾಶಿ ತಲೆ ಬುರುಡೆ - ಮೈಸೂರಿನ ರಸ್ತೆ ಬದಿ ತಲೆಬುರುಡೆಗಳು ಪತ್ತೆ - ಬುರುಡೆಗಳ ರಾಶಿ ಕಂಡು ಜನರಲ್ಲಿ ಆತಂಕ        ಗಡಿಯಲ್ಲಿ ಪಾಕ್​​ ಮತ್ತೆ ಪುಂಡಾಟ - ಅಪ್ರಚೋದಿತ ದಾಳಿಗೆ ಇಬ್ಬರು ಸಾವು - ಭಾರತದ ಯೋಧರಿಂದಲೂ ಪ್ರತಿ ದಾಳಿ         ಪದ್ಮಾವತ್​ ಚಿತ್ರಕ್ಕೆ ತಪ್ಪದ ಸಂಕಷ್ಟ - ಒವೈಸಿಯಿಂದಲೂ ಚಿತ್ರ ಬಿಡುಗಡೆಗೆ ವಿರೋಧ - ಚಿತ್ರತಂಡದ ಅರ್ಜಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್​​​​       
Breaking News :

ಸಿಎಂ ಜನಾಶೀರ್ವಾದಕ್ಕೆ ಕೈನಲ್ಲೇ ಪರಮವಿರೋಧ

Saturday, 11.11.2017, 3:04 AM       No Comments

ಬೆಂಗಳೂರು: ಯಾತ್ರೆಗಳ ಹುರುಪಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜ್ಯಾದ್ಯಂತ ಮಿಂಚುತ್ತಿದ್ದರೆ, ಇತ್ತ ಆಡಳಿತಾರೂಢ ಕಾಂಗ್ರೆಸ್​ನಲ್ಲಿ ಸಿಎಂ ‘ಜನಾಶೀರ್ವಾದ’ ಯಾತ್ರೆ ಪಕ್ಷದ ಸರ್ವಾನುಮತ ಪಡೆದುಕೊಳ್ಳಲಾಗದೆ ಗೊಂದಲಕ್ಕೆ ಸಿಲುಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ, ಜೆಡಿಎಸ್ ಯಾತ್ರೆಗೆ ಪರ್ಯಾಯವಾಗಿ ಜನರ ಬಳಿಗೆ ತೆರಳುವ ಜತೆಗೆ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಸರ್ಕಾರದಿಂದ ಜನಾ ಶೀರ್ವಾದ ಯಾತ್ರೆ ಆರಂಭಿಸಲು ಸಜ್ಜಾಗುತ್ತಿದ್ದರೆ, ಪಕ್ಷದ ಅಧ್ಯಕ್ಷನಾಗಿ ತಾನು ಆ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪರಮೇಶ್ವರ್ ನೇರವಾಗಿ ಘೋಷಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಅಂತಃಕಲಹ ಮತ್ತೊಮ್ಮೆ ಜಾಹೀರಾದಂತಾಗಿದೆ.

ಸಿಎಂ ಜನಾಶೀರ್ವಾದ ಯಾತ್ರೆ ಸ್ವರೂಪದ ಬಗ್ಗೆ ಮೊದಲಿನಿಂದಲೂ ಪಕ್ಷದಲ್ಲಿ ಅಸಮಾಧಾನವಿದೆ. ಪಕ್ಷವನ್ನು ದೂರವಿಟ್ಟು ನಡೆಸಲು ಹೊರಟಿರುವ ಈ ರಾಜಕೀಯ ಯಾತ್ರೆಗೆ ಹಿರಿಯ ಮುಖಂಡರೇ ವಿರೋಧ ಸೂಚಿಸಿದ್ದರು. ಈ ನಿಲುವಿಗೀಗ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೂ ಪರೋಕ್ಷವಾಗಿ ಧ್ವನಿ ಸೇರಿಸಿರುವುದು ಹೊಸ ಬೆಳವಣಿಗೆ.

ಸರ್ಕಾರದಿಂದ ಪ್ರತ್ಯೇಕ ಯಾತ್ರೆ ನಡೆಸಿದಲ್ಲಿ ತುಮಕೂರಿಗೆ ಯಾತ್ರೆ ಬಂದಾಗ ಎಂಎಲ್​ಸಿಯಾಗಿ ಭಾಗವಹಿಸುತ್ತೇನೆ. ಉಳಿದ ಕಡೆ ಯಾತ್ರೆಗೂ ನನಗೂ ಸಂಬಂಧವಿಲ್ಲ ಎಂಬ ರೀತಿಯಲ್ಲಿ ಪರಂ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಕ್ಷ ಬಿಟ್ಟು ನಡೆಸುವ ಯಾತ್ರೆಗೆ ತಮ್ಮ ವಿರೋಧವಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಪಕ್ಷದಿಂದ ದೂರವಿರುವ ಚಿಂತನೆ?: ತಮ್ಮ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುವುದಕ್ಕೆ ಈಗಾಗಲೇ ಸಿದ್ದರಾಮಯ್ಯ ಹೈಕಮಾಂಡ್​ನಿಂದ ಒಪ್ಪಿಗೆ ಪಡೆದುಕೊಂಡಿದ್ದಾರೆ. ಆದರೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಪಕ್ಷದ ಯಾವುದೇ ಹಿರಿಯ ಮುಖಂಡರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಚುನಾವಣೆಗೂ ಮುಂಚೆ ಪಕ್ಷದೊಳಗೆ ಹಾಗೂ ಹೊರಗೆ ವರ್ಚಸ್ಸು ಹೆಚ್ಚಿಸಿಕೊಳ್ಳಲು ಸರ್ಕಾರದಿಂದಲೇ ಜನಾಶೀರ್ವಾದ ಯಾತ್ರೆ ನಡೆಸಲು ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ.

ಆದರೆ ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಎಲ್ಲಿಯೂ ರ್ಚಚಿಸಿಲ್ಲ. ಈ ಬೆಳವಣಿಗೆಯು ಕಾಂಗ್ರೆಸ್​ನ ಕೆಲ ನಾಯಕರ ನಿದ್ದೆಗೆಡಿಸಿದೆ. ಹೈಕಮಾಂಡ್​ವರೆಗೂ ಈ ವಿಚಾರ ತಲುಪಿಸುವ ಪ್ರಯತ್ನ ಆರಂಭವಾಗಿದೆ. ಪಕ್ಷ ಹಾಗೂ ಸರ್ಕಾರ ಒಟ್ಟಾಗಿ ಯಾತ್ರೆ ನಡೆಸಬೇಕು. ಚುನಾವಣೆ ಸಂದರ್ಭದಲ್ಲಿ ಪಕ್ಷ ನಡೆಸುವ ಯಾತ್ರೆಯೇ ಮುಖ್ಯವಾಗುತ್ತದೆ ಎಂಬ ವಾದವನ್ನು ಕೂಡ ಹೈಕಮಾಂಡ್ ಮುಂದಿಟ್ಟಿದ್ದಾರೆ.

ಪ್ರತ್ಯೇಕ ರಣತಂತ್ರವಿದೆ

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಪರಮೇಶ್ವರ್, ಬಿಜೆಪಿ ಅಥವಾ ಜೆಡಿಎಸ್​ನವರು ಯಾತ್ರೆ ಮಾಡುತ್ತಿದ್ದಾರೆ ಎಂದು ನಾವು ಮಾಡಬೇಕಿಲ್ಲ. ಚುನಾವಣೆ ಗೆಲ್ಲಲು ಕಾಂಗ್ರೆಸ್​ನದು ಪ್ರತ್ಯೇಕ ರಣತಂತ್ರವೇ ಇದೆ. ನಮಗೆ ಯಾತ್ರೆಯ ರಾಜಕೀಯ ಬೇಕಿಲ್ಲ. ಯಾತ್ರೆಯ ಬಗ್ಗೆಯಾಗಲೀ ಅಥವಾ ಪ್ರತ್ಯೇಕವಾಗಿ ಪಕ್ಷದಿಂದಲೂ ಯಾತ್ರೆ ನಡೆಸಬೇಕೇ ಎಂಬ ಕುರಿತೂ ನಾವು ರ್ಚಚಿಸಿಲ್ಲ. ಭವಿಷ್ಯದಲ್ಲಷ್ಟೇ ಈ ಬಗ್ಗೆ ಆಲೋಚಿಸಲಾಗುವುದು ಎಂದರು.

ಸಿಎಂ ಜತೆ ಅಸಮಾಧಾನವಿಲ್ಲ

ಸಂಪುಟ ವಿಸ್ತರಣೆ ಬಳಿಕ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ನಡುವಿನ ಅಸಮಾಧಾನ ಹೆಚ್ಚಾಗಿದೆ ಎಂಬ ಮಾತುಗಳಿಗೆ ತಕ್ಕಂತೆ ಉಭಯ ನಾಯಕರು ವರ್ತಿಸುತ್ತಿದ್ದಾರೆ. ಆದರೆ ಪರಮೇಶ್ವರ್, ‘ಆಕಾಶವೇ ಕಳಚಿ ಬಿದ್ದರೂ ನಮ್ಮಿಬ್ಬರ ಮಧ್ಯೆ ಒಡಕು ಮೂಡಿಸಲು ಸಾಧ್ಯವಿಲ್ಲ. ಇಬ್ಬರೂ ಒಟ್ಟಾಗಿದ್ದೇವೆ. ಎಲ್ಲ ನಾಯಕರು ಸೇರಿ ಚುನಾವಣೆ ರಣತಂತ್ರ ರೂಪಿಸುತ್ತೇವೆ. ಪ್ರಚಾರ ಸಮಿತಿಯ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್​ಗೆ ನೀಡಲಾಗಿದೆ. ಈ ಬಗ್ಗೆ ಅವರು ತಂತ್ರ ರೂಪಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top