Tuesday, 16th January 2018  

Vijayavani

ಮಹದಾಯಿ ಉಳಿಸಿಕೊಳ್ಳಲು ಏನು ಬೇಕಾದ್ರೂ ಮಾಡ್ತೀವಿ - ಮತ್ತೆ ಕ್ಯಾತೆ ತೆಗೆದ ಪಾಲ್ಯೇಕರ್​ - ಇತ್ತ ಗೋವಾ ಸಚಿವನ ವಿರುದ್ಧ ಪಾಟೀಲ್ ಕಿಡಿ        ನನ್ನ ವಿರುದ್ಧ ಸುಳ್ಳು ಕೇಸ್​ ದಾಖಲಿಸಲು ಯತ್ನ - ಕೇಂದ್ರ ಸರ್ಕಾರದ ವಿರುದ್ಧ ತೊಗಾಡಿಯಾ ಕಿಡಿ - ಕಣ್ಣೀರಿಟ್ಟು ಅಚ್ಚರಿ ಮೂಡಿಸಿದ ಫೈರ್ ಬ್ರ್ಯಾಂಡ್​        ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಾವಿಗೆ ಬಿದ್ದ ಮರಿ ಆನೆ - ಮರಿ ಮೇಲೆತ್ತಲು ಅರಣ್ಯ ಇಲಾಖೆ ಹರ ಸಾಹಸ - ತಮಿಳುನಾಡಿನ ರಾಯಕೋಟೆ ಬಳಿ ಘಟನೆ        ಭಾರತ ಪ್ರವಾಸದಲ್ಲಿ ಇಸ್ರೇಲ್​ ಪ್ರಧಾನಿ - ಮುಂಬೈಗೆ ಬಂದಿಳಿದ ಮುಂಬೈ ದಾಳಿ ಸಂತ್ರಸ್ತ ಮೋಶೆ - ಭಾರತಕ್ಕೆ ಬಂದಿದ್ದು ಖುಷಿ ತಂದಿದೆ ಎಂದ ಬಾಲಕ        ತಮಿಳುನಾಡಿನಲ್ಲಿ ಮುಂದುವರಿದ ಪೊಂಗಲ್ ಸಡಗರ - ಅಳಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಕಿಕ್​ - ಸಿಎಂ, ಡಿಸಿಎಂ ರಿಂದ ಕ್ರೀಡೆ ಉದ್ಘಾಟನೆ       
Breaking News :

ಸಿಎಂಗೆ ಉ.ಪ್ರ.ಬಿಜೆಪಿ ತಿರುಗೇಟು

Sunday, 14.01.2018, 3:02 AM       No Comments

ಲಖನೌ: ಉತ್ತರ ಪ್ರದೇಶವನ್ನು ‘ಜಂಗಲ್ ರಾಜ್’ ಎಂದು ಟ್ವೀಟ್ ಮೂಲಕ ಜರೆದಿದ್ದ ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತ್ಯುತ್ತರವಾಗಿ ಅಲ್ಲಿನ ಬಿಜೆಪಿ ರಾಜ್ಯ ಘಟಕ 1.12 ನಿಮಿಷದ ವಿಡಿಯೋವನ್ನು ಟ್ವಿಟರ್ ಖಾತೆ (@BJPUP)ಯಲ್ಲಿ ಅಪ್ಲೋಡ್ ಮಾಡಿ ತಿರುಗೇಟು ನೀಡಿದೆ.

ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ನೀಡಿದ್ದ ‘ನಾನು ಕೂಡ ಹಿಂದು’ ಎಂಬ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಸಿದ್ಧಪಡಿಸಿರುವ ವಿಡಿಯೋದಲ್ಲಿ, ‘ಅವರು ಹಿಂದುಗಳನ್ನು ಕೊಲ್ಲುತ್ತಾರೆ. ಹತ್ಯೆ ಮಾಡಿಸುತ್ತಾರೆ ಎಂಬ ಹಿನ್ನೆಲೆ ಧ್ವನಿಯೊಂದಿಗೆ ಇದುವರೆಗೆ ಕರ್ನಾಟಕದಲ್ಲಿ ಹತ್ಯೆಗೀಡಾದ 12 ಹಿಂದುಗಳ ಫೋಟೊಗಳನ್ನು ಪ್ರದರ್ಶಿಸಲಾಗಿದೆ. ಹಾಗೆಯೇ, ರೈತರನ್ನೂ ಬಿಟ್ಟಿಲ್ಲ ಎಂಬ ಹಿನ್ನೆಲೆಯ ಧ್ವನಿಯೊಂದಿಗೆ, ಈ ಹಣಕಾಸು ವರ್ಷದಲ್ಲಿ ಕರ್ನಾಟಕದಲ್ಲಿ 1,002 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಆಂಗ್ಲ ಭಾಷೆಯ ಬರಹವೂ ಕಾಣಿಸುತ್ತದೆ. ಜನರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುತ್ತಾರೆ. ಸಾಧ್ಯವಾದಷ್ಟು ಹಣ ಲೂಟಿ ಮಾಡುತ್ತಾರೆ ಎಂಬ ಧ್ವನಿಯೊಂದಿಗೆ ಪೊಲೀಸ್ ವರ್ಗಾವಣೆಯಲ್ಲಿ ಸಿಎಂ ಹಾಗೂ 27 ಸಚಿವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲು ಎಂಬ ಸುದ್ದಿ ಶೀರ್ಷಿಕೆ ಪ್ರಸಾರವಾಗುತ್ತದೆ.

ಇಷ್ಟೆಲ್ಲ ಇದ್ದೂ, ಯೋಗಿ ಅಲ್ಲಿ ಕಾಲಿಟ್ಟ ಕೂಡಲೇ ಸ್ವತಃ ಹಿಂದುವಾಗಿ ಬಿಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಆರತಿ ಸ್ವೀಕರಿಸುತ್ತಿರುವ ದೃಶ್ಯ ಕಾಣುತ್ತದೆ. ಹಾಗೆಯೇ, ಮಂದಿರದ ಗಂಟೆ ಬಾರಿಸುತ್ತಾರೆ, ಕೇಸರಿ ಶಾಲನ್ನೂ ಹಾಕಿಕೊಳ್ಳುತ್ತಾರೆ ಎಂಬ ಧ್ವನಿಯೊಂದಿಗೆ ಗುಜರಾತ್ ಚುನಾವಣೆ ವೇಳೆ ದೇವರ ದರ್ಶನ ಮಾಡಿದ ರಾಹುಲ್ ಮುಖವೂ ಕಾಣಿಸುತ್ತದೆ. ಇದರ ಜತೆಗೆ, ‘ಕಳೆದ ಐದು ವರ್ಷದ ಅವಧಿಯಲ್ಲಿ ಹೇಳಿಕೊಳ್ಳುವಂತಹ ಕೆಲಸವನ್ನು ನೀವೇನಾದರೂ ಮಾಡಿದ್ದೀರಾ? ಹಾಗಿದ್ದಲ್ಲಿ ಕಾಂಗ್ರೆಸ್​ನ ‘ರಾಜಕುಮಾರ’ನಿಗೆ ರೆಸಿಪಿ ಸಿದ್ಧಗೊಳಿಸುವ ಅವಶ್ಯಕತೆ ಇಲ್ಲ’ ಎಂಬ ಟೀಕೆ ಕಂಡುಬಂದಿದೆ.

Leave a Reply

Your email address will not be published. Required fields are marked *

Back To Top