Monday, 22nd January 2018  

Vijayavani

ಸರಹದ್ದು ಮೀರಿ ವರ್ತಿಸ್ತಿದೆ ಪಾಪಿ ಪಾಕ್​- ಐದು ದಿನಗಳಿಂದ ಗುಂಡಿನ ದಾಳಿಗೆ ಪರಿಸ್ಥಿತಿ ಉಲ್ಭಣ- ಗಡಿಯಲ್ಲಿ ಯುದ್ಧ ಸ್ಥಿತಿ ನಿರ್ಮಾಣ        ದಾವೋಸ್​ನಲ್ಲಿ 48ನೇ ವಿಶ್ವ ಆರ್ಥಿಕ ವೇದಿಕೆ ಸಮಾವೇಶ- ಸ್ವಿಸ್​ಗೆ ಹಾರಿದ ಪ್ರಧಾನಿ ಮೋದಿ- ವಿದೇಶಿ ಬಂಡವಾಳ ಸೆಳೆಯುವತ್ತ ಹಲವುಸೂತ್ರ        ಗ್ಯಾಸ್​ ರೀಫಿಲ್ಲಿಂಗ್ ವೇಳೆ ಲೀಕ್​ಆಗಿ ಹೊತ್ತಿಕೊಂಡ ಬೆಂಕಿ- ಆರು ಜನರಿಗೆ ಗಂಭೀರ ಗಾಯ- ಬೆಂಗಳೂರಿನಲ್ಲಿ ತಪ್ಪಿದ ಭಾರಿ ದುರಂತ        ಬೀದರ್​ನಲ್ಲಿ ವೀರಭದ್ರನ ಪಲ್ಲಕ್ಕಿ ಉತ್ಸವ- ಶಸ್ತ್ರಧಾರಣೆ ಮೂಲಕ ಭಕ್ತಿಯ ಪರಾಕಷ್ಠೆ- ಅತ್ತ ಮಂಗಳೂರಿನಲ್ಲಿ ಕಲವರದ ಪುತ್ತೂರು ಕಂಬಳ        ರಿಲೀಸ್​ ಡೇಟ್ ಫಿಕ್ಸ್​ ಆದ್ರೂ ಪದ್ಮಾವತ್​​ಗೆ ಸಂಕಷ್ಟ- 25ಕ್ಕೆ ಬಿಡುಗಡೆಯಾದ್ರೆ ದೇಶಾದ್ಯಂತ ಬಂದ್​- ಕರ್ಣಿಸೇನಾ ರಕ್ತಪಾತದ ಡೈಲಾಗ್​ಗೆ ಬೆವರಿದ ಬನ್ಸಾಲಿ       
Breaking News :

ಸಿಂಗಲ್ ಟೇಕ್ ಸಿಂಧೂ

Sunday, 13.08.2017, 3:01 AM       No Comments

ಟಿ ಸಿಂಧೂ ಲೋಕನಾಥ್ ಸದ್ಯ ಪ್ರಯೋಗದ ಮೂಡ್​ನಲ್ಲಿದ್ದಾರೆ. ಆನ್​ಲೈನ್ ವೇದಿಕೆಯಲ್ಲಿ ‘ಲೂಸ್ ಕನೆಕ್ಷನ್’ ಶೀರ್ಷಿಕೆಯ ವೆಬ್ ಸರಣಿ ಮೂಲಕ ಹೊಸ ಪ್ರಯೋಗ ಮಾಡಿ ಗಮನ ಸೆಳೆಯುತ್ತಿರುವಾಗಲೇ, ಹಿರಿತೆರೆಯಲ್ಲಿ ಸಿಂಗಲ್​ಟೇಕ್ ಪ್ರಯೋಗಕ್ಕೆ ಅಣಿಯಾಗಿದ್ದಾರೆ. ಅರ್ಥಾತ್, ಅವರ ನಟನೆಯ ಹೊಸ ಚಿತ್ರದ ಪ್ರತಿ ದೃಶ್ಯವನ್ನೂ ಒಂದೇ ಟೇಕ್​ನಲ್ಲಿ ಸೆರೆಹಿಡಿಯಲಾಗಿದೆ. ಅವುಗಳಿಗೆ ವಿಎಫ್​ಎಕ್ಸ್ ತಂತ್ರಜ್ಞಾನದ ಸ್ಪರ್ಶ ನೀಡಿರುವುದರಿಂದ ಇಡೀ ಚಿತ್ರವೇ ಸಿಂಗಲ್​ಟೇಕ್​ನಲ್ಲಿ ಚಿತ್ರಿತವಾಗಿದೆಯೇನೋ ಎಂಬ ಫೀಲ್ ಪ್ರೇಕ್ಷಕರಿಗೆ ಬರಲಿದೆಯಂತೆ.

ವಿಕ್ರಮ್ ಯೋಗಾನಂದ್ ನಿರ್ದೇಶನ ಮತ್ತು ಚಂದ್ರಶೇಖರ್ ನಿರ್ವಣದ ಈ ಚಿತ್ರಕ್ಕೆ ಈ ಹಿಂದೆ ‘ಸಮಯದ ಗೊಂಬೆ’ ಎಂದು ಹೆಸರಿಡಲಾಗಿತ್ತು. ಇಡೀ ಚಿತ್ರದ ಕಥೆ ಒಂದೇ ದಿನದಲ್ಲಿ ನಡೆಯುವುದರಿಂದ ‘ಹೀಗೊಂದು ದಿನ’ ಎಂದು ಈಗ ಮರುನಾಮಕರಣ ಮಾಡಲಾಗಿದೆ. ‘ಪ್ರತಿ ದೃಶ್ಯವನ್ನೂ ಸಿಂಗಲ್​ಟೇಕ್​ನಲ್ಲಿ ಸೆರೆಹಿಡಿದಿರುವುದು ಈ ಚಿತ್ರದ ವಿಶೇಷ. ಕಟ್ ಇಲ್ಲದೆ ಚಿತ್ರಿಸಬೇಕಿದ್ದರಿಂದ ಹಲವು ಬಾರಿ ರಿಹರ್ಸಲ್ ಮಾಡಿದ ಬಳಿಕವೇ ಕ್ಯಾಮರಾ ಎದುರಿಸಿದೆವು. ನಮ್ಮ ಡೈಲಾಗ್ ಮಾತ್ರವಲ್ಲದೆ ಸಹಕಲಾವಿದರ ಡೈಲಾಗ್​ಗಳನ್ನೂ ಗಮನದಲ್ಲಿರಿಸಿಕೊಂಡು ನಟಿಸಿದ್ದು ಸವಾಲಾಗಿತ್ತು’ ಎನ್ನುತ್ತಾರೆ ಸಿಂಧೂ.

ಹಾಸ್ಯಮಯವಾಗಿ ಸಾಗುವ ‘ಹೀಗೊಂದು ದಿನ’ಕ್ಕೆ 15 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ 8.30ರವರೆಗೆ ನಡೆಯುವ ಕಥೆಯಾದ್ದರಿಂದ ಪ್ರತಿದಿನ ಅದೇ ಸಮಯಕ್ಕೆ ಸರಿಯಾಗಿ ಚಿತ್ರೀಕರಣ ಮಾಡಲಾಗಿದೆ. ಇದೊಂದು ನಾಯಕಿಪ್ರಧಾನ ಚಿತ್ರವಾಗಿದ್ದು, ಸಿಂಧೂ ಅವರದ್ದೇ ಮುಖ್ಯ ಭೂಮಿಕೆ. ಅತಿಥಿ ಪಾತ್ರದಲ್ಲಿ ‘ಸಿಂಪಲ್ಲಾಗ್ ಇನ್ನೊಂದು ಲವ್​ಸ್ಟೋರಿ’ ಚಿತ್ರದ ಖ್ಯಾತಿಯ ಪ್ರವೀಣ್ ನಟಿಸಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ಗಿರಿಜಾ ಲೋಕೇಶ್, ಶೋಭರಾಜ್, ಪದ್ಮಜಾ ರಾವ್, ಗುರುಪ್ರಸಾದ್, ಮಿತ್ರ ಮುಂತಾದವರು ಬಣ್ಣ ಹಚ್ಚಿದ್ದಾರೆ. ‘ಹೀಗೊಂದು ದಿನ’ಕ್ಕೆ ಇನ್ನೂ ಸೆನ್ಸಾರ್ ಪ್ರಮಾಣಪತ್ರ ಸಿಗುವುದು ಬಾಕಿ ಇದೆ. ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

 

ನಾವು ಏನಾದರೊಂದು ಪ್ರಯೋಗ ಮಾಡುತ್ತಲೇ ಇರಬೇಕು. ‘ಲೂಸ್ ಕನೆಕ್ಷನ್‘ ವೆಬ್ ಸರಣಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಈಗ ‘ಹೀಗೊಂದು ದಿನ’ ಕೂಡ ಕ್ಲಿಕ್ ಆಗುತ್ತೆ ಎಂಬ ನಂಬಿಕೆ ಇದೆ. ಇದು ಮಹಿಳಾ ಪ್ರಧಾನ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ.

| ಸಿಂಧೂ ಲೋಕನಾಥ್ ನಟಿ

 

Leave a Reply

Your email address will not be published. Required fields are marked *

Back To Top