Tuesday, 24th October 2017  

Vijayavani

1. ಕೊಳೆಯುತ್ತಿದೆ ಹಸಿವು ಮುಕ್ತ ರಾಜ್ಯದ ಕನಸು – ಹುಳು ಹಿಡಿದು ಪಡಿತರ ಹಾಳು – ರಾಜ್ಯದಲ್ಲಿ ಅನ್ನಭಾಗ್ಯದ ಬದಲು ಹುಳು ಭಾಗ್ಯ 2. 100 ಸಿಸಿ ಬೈಕ್‌ನಲ್ಲಿ ಡಬಲ್ ರೈಡಿಂಗ್ ನಿಷೇಧ ವಿಚಾರ – ವಿಷಯ ಗಮನಕ್ಕೆ ಬಂದಿಲ್ಲ ಎಂದ ಸಚಿವರು – ಅಧಿಕಾರಿಗಳಿಗೆ ಸೂಚಿಸುವುದಾಗಿ ರೇವಣ್ಣ ಸ್ಪಷ್ಟನೆ 3. ಹಂದಿ ತಿಂದು ಮಸೀದಿಗೆ ಹೋಗ್ಲಿ – ಸಿಎಂಗೆ ಸವಾಲೆಸೆದ ಸೊಗಡು ಶಿವಣ್ಣ – ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಮತ್ತಷ್ಟು ಸಿಡಿಮಿಡಿ 4. ಮತ್ತೆ ಭುಗಿಲೆದ್ದ ತಾಜ್‌ ಮಹಲ್‌ ಕಟ್ಟಡ ವಿವಾದ – ಯಾವಾಗ ಕೆಡವ್ತೀರ ಅಂತಾ ಪ್ರಕಾಶ್‌ ರಾಜ್ ವ್ಯಂಗ್ಯ – ಅತ್ತ ಸ್ಮಾರಕದ ಎದುರು ಶಿವಪೂಜೆ 5. ವಜ್ರ ಮಹೋತ್ಸವಕ್ಕೆ ಸಜ್ಜಾಗ್ತಿದೆ ವಿಧಾನಸೌಧ – ಶಕ್ತಿಕೇಂದ್ರಕ್ಕೆ ಬಣ್ಣಬಣ್ಣದ ಹೂಗಳ ಅಲಂಕಾರ – ಸಭಾಪತಿ, ಸಭಾಧ್ಯಕ್ಷರಿಂದ ಸಿದ್ಧತೆಗಳ ಪರಿಶೀಲನೆ
Breaking News :

ಸಾಹೋದಲ್ಲಿ ಪ್ರಭಾಸ್​ಗೆ ಅನುಷ್ಕಾ ನಾಯಕಿ?

Friday, 19.05.2017, 3:04 AM       No Comments

‘ಬಾಹುಬಲಿ 2’ ಬಳಿಕ ನಟ ಪ್ರಭಾಸ್ ಭಾರತೀಯ ಚಿತ್ರರಂಗದ ಹಾಟ್ ಫೇವರಿಟ್ ನಟ ಎನಿಸಿಕೊಂಡಿದ್ದಾರೆ. ಅವರ ಮುಂದಿನ ಚಿತ್ರ ‘ಸಾಹೋ’ ಕೂಡ ಸಖತ್ ನಿರೀಕ್ಷೆ ಹುಟ್ಟಿಸಿದೆ. ಒಂದು ಟೀಸರ್ ಬಿಟ್ಟರೆ ಚಿತ್ರದ ಬಗ್ಗೆ ಬೇರೇನೂ ಮಾಹಿತಿ ಇಲ್ಲ. ಚಿತ್ರೀಕರಣವಂತೂ ಶುರುವಾಗಿಯೇ ಇಲ್ಲ. ಆದರೂ ‘ಸಾಹೋ’ ಕುರಿತ ಸುದ್ದಿಗಳಿಗೇನೂ ಕೊರತೆ ಇಲ್ಲ. ಈಗಾಗಲೇ ಪ್ರಭಾಸ್​ಗೆ

ನಾಯಕಿ ಯಾರು ಎಂಬ ಪ್ರಶ್ನೆಗೆ ಬಾಲಿವುಡ್​ನತ್ತ ಬೆರಳು ಮಾಡಿತ್ತು ಟಾಲಿವುಡ್. ಆಲಿಯಾ ಭಟ್, ಕತ್ರಿನಾ ಕೈಫ್, ಶ್ರದ್ಧಾ ಕಪೂರ್, ಪೂಜಾ ಹೆಗ್ಡೆ ಹೆಸರುಗಳು ಮುಂಚೂಣಿಯಲ್ಲಿದ್ದವು. ಇದೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಪ್ರಭಾಸ್ ಜತೆ ರೊಮ್ಯಾನ್ಸ್ ಮಾಡುವ ಅವಕಾಶ ಮತ್ತೊಮ್ಮೆ ಅನುಷ್ಕಾ ಶೆಟ್ಟಿಗೆ ಸಿಗಲಿದೆಯಂತೆ!

‘ಬಾಹುಬಲಿ 2’ ಯಶಸ್ಸನ್ನು ಬಳಕೆ ಮಾಡಿಕೊಳ್ಳುವ ಸಲುವಾಗಿ ಪ್ರಭಾಸ್ ಎದುರು ಅನುಷ್ಕಾ ಅವರನ್ನೇ ನಾಯಕಿಯನ್ನಾಗಿ ಮಾಡಬೇಕೆಂಬ ಯೋಜನೆ ನಿರ್ವಪಕರದ್ದು ಎನ್ನಲಾಗಿದೆ. ಹಾಗಾಗಿಯೇ ಅನುಷ್ಕಾ ಬಳಿ ಈ ಕುರಿತು ನಿರ್ವಪಕರು ಮಾತುಕತೆ ನಡೆಸಿದ್ದಾರಂತೆ. ಈ ಜೋಡಿ ‘ಬಿಲ್ಲಾ’, ‘ಮಿರ್ಚಿ’, ‘ಬಾಹುಬಲಿ’ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಮಾತ್ರವಲ್ಲದೆ, ಆ ಎಲ್ಲ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಮಾಯಿ ಮಾಡಿವೆ. ಹೀಗಾಗಿಯೇ ಟಾಲಿವುಡ್​ನಲ್ಲಿ ಇದೊಂದು ಹಿಟ್ ಜೋಡಿ ಎಂದು ಹೆಸರು ಮಾಡಿದೆ.

ಹಾಲಿವುಡ್ ಸಿನಿಮಾಗಳ ಮಾದರಿಯಲ್ಲಿ ಮೂಡಿಬರಲಿರುವ ‘ಸಾಹೋ’ ಚಿತ್ರದ ಟೀಸರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸುಜಿತ್ ನಿರ್ದೇಶನ ಮಾಡಲಿರುವ ಈ ಚಿತ್ರವನ್ನು ಬರೋಬ್ಬರಿ 100 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣ ಮಾಡಬೇಕೆಂಬ ಉದ್ದೇಶ ನಿರ್ವಪಕರದ್ದು. ‘ಬಾಹುಬಲಿ’ಯಂತೆಯೇ ‘ಸಾಹೋ’ ಕೂಡ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ವಣವಾಗಲಿದೆ.

ಈ ಮಧ್ಯೆ ಅನುಷ್ಕಾ-ಪ್ರಭಾಸ್ ಬಗ್ಗೆ ಸಿಕ್ಕಾಪಟ್ಟೆ ಗಾಸಿಪ್ ಕೂಡ ಹರಿದಾಡುತ್ತಿವೆ. ಇವರಿಬ್ಬರು ಪ್ರೀತಿಸುತ್ತಿದ್ದು, ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಆದರೆ, ಇಂತಹ ಸುದ್ದಿಗಳು ಅನುಷ್ಕಾಗೆ ಬೇಜಾರು ಉಂಟು ಮಾಡಿವೆಯಂತೆ. ಕೆಲ ತಿಂಗಳ ಹಿಂದೆಯಷ್ಟೇ ಉದ್ಯಮಿಯೊಬ್ಬರನ್ನು ಅನುಷ್ಕಾ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಹೀಗೆ ಪದೇಪದೆ ಮದುವೆ ಕುರಿತು ಸೃಷ್ಟಿಯಾಗುತ್ತಿರುವ ಗಾಸಿಪ್ ಬಗ್ಗೆ ಅವರಿಗೆ ಬೇಸರ ಮೂಡಿದೆಯಂತೆ.

-ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top