Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ಸಾರಿಪುತ್ರ ಬುದ್ಧ ವಿಹಾರ ಲೋಕಾರ್ಪಣೆ

Sunday, 27.11.2016, 7:32 AM       No Comments

 ಯಾದಗಿರಿ/ಶಹಾಪುರ: ಶಹಾಪುರದ ಧಮ್ಮಗಿರಿಯ ಬೆಟ್ಟದಲ್ಲಿ ಸಾರಿಪುತ್ರ ಬುದ್ಧ ವಿಹಾರವನ್ನು ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ದೇಶ ಕಟ್ಟುವ ಶಕ್ತಿ ಬೌದ್ಧ ಧರ್ಮಕ್ಕೆ ಇದೆ. ಬುದ್ಧನ ತತ್ವಗಳನ್ನು ನಾವೆಲ್ಲರೂ ಅನುಷ್ಠಾನಕ್ಕೆ ತರಬೇಕು ಮತ್ತು ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು. ಜಪಾನ್ ದೇಶದ ಅರ್ಯ ನಾಗಾರ್ಜನ ಸುರಾಯಿ ಸಸಾಯಿ ಶೊನೊನ್ ಬಂತೇಜಿ, ಔರಂಗಬಾದ್ನ ಬೋಧಿಪಾಲ್ ಮಾಹಾತೇರೋ, ಬೆಂಗಳೂರಿನ ಪೂಜ್ಯ ಧರ್ಮಪಾಲ್, ಸಂಸದ ಬಿ.ವಿ. ನಾಯಕ ಮತ್ತಿತರರು ಪಾಲ್ಗೊಂಡಿದ್ದರು. ಧಮ್ಮಗಿರಿ ಬೆಟ್ಟ ಸಮೀಪ ಉದ್ಯಾನ ನಿರ್ವಣದ ಜತೆಗೆ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸಾರಿಪುತ್ರ ಬುದ್ಧ ವಿಹಾರವನ್ನು ಜನರನ್ನು ಆರ್ಕಸá-ವ ಮತ್ತು ವಿಹಾರಕ್ಕೆ ಒಳ್ಳೆಯ ಸ್ಥಳವಾಗಿದೆ ಎಂದು ಶಾಸಕ ಗುರು ಪಾಟೀಲ ಹೇಳಿದರು.

ಖರ್ಗೆ ಎರಡನೇ ಅಂಬೇಡ್ಕರ್: ಡಾ.ಮಲ್ಲಿಕಾರ್ಜುನ ಖರ್ಗೆ ವಿಶ್ವದ ಎರಡನೇ ಅಂಬೇಡ್ಕರ್ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಖರ್ಗೆ ಅವರನ್ನು ಕಾರ್ಯಕ್ರಮದಲ್ಲಿ ಕೊಂಡಾಡಿದರು. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಖರ್ಗೆ ಆಮ್ಲಜನಕವಿದ್ದಂತೆ ಎಂದು ಬಣ್ಣಿಸಿದರು.

Leave a Reply

Your email address will not be published. Required fields are marked *

Back To Top