Monday, 11th December 2017  

Vijayavani

1. ಜಮ್ಮುವಿನಲ್ಲಿ ಗುಂಡಿನ ಚಕಮಕಿ- ಯೋಧರ ಗುಂಡೇಟಿಗೆ ಮೂವರು ಉಗ್ರರು ಮಟಾಶ್​​​- ಒಬ್ಬ ಜೀವಂತವಾಗಿ ಸೆರೆ, ವಿಚಾರಣೆ 2. ರವಿ ಬೆಳಗೆರೆ ಕಸ್ಟಡಿ ಅವಧಿ ಇಂದಿಗೆ ಅಂತ್ಯ- ಮಧ್ಯಾಹ್ನ ನ್ಯಾಯಾಲಯಕ್ಕೆ ಪತ್ರಕರ್ತ ಹಾಜರು- ಜಾಮೀನು ಕೊಡ್ತಾರಾ ನ್ಯಾಯಾಧೀಶರು..? 3. ಮಕ್ಕಳ ಮೊಟ್ಟೆ ಗುತ್ತಿಗೆದಾರರ ಹೊಟ್ಟೆಗೆ- ಕೊಪ್ಪಳದಲ್ಲಿ ನಡೆದಿದೆ ಮೊಟ್ಟೆ ಗೋಲ್​​ಮಾಲ್​- ಡಿಸಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತಕ್ಕೆ ದೂರು 4. ಸರ್ಕಾರಿ ಜಾಗದ ಮೇಲೆ ಬಿಲ್ಡರ್​ ಕಣ್ಣು- ರಾತ್ರೋರಾತ್ರೊ ಮನೆ ಖಾಲಿಗೆ ಆವಾಜ್​​- ಹುಬ್ಬಳ್ಳಿಯಲ್ಲಿ ದಯಾಮರಣಕ್ಕೆ 12 ಕುಟುಂಬದಿಂದ ಅರ್ಜಿ 5. ಗುತ್ತಿಗೆದಾರರ ಬಳಿ ಸರ್ಕಾರಿ ಫೈಲ್​​​​​ ಪ್ರಕರಣ- ಸ್ಪಷ್ಟನೆ ಕೋರಿ ಎಇಇಗೆ ನೋಟಿಸ್​​​- ಇದು ದಿಗ್ವಿಜಯ ನ್ಯೂಸ್​​ ಬಿಗ್​​ ಇಂಪ್ಯಾಕ್ಟ್​​​​
Breaking News :

ಸಾಮಾಜಿಕ ಕಾರ್ಯದಲ್ಲಿ ತೊಡಗಿ

Thursday, 14.09.2017, 3:00 AM       No Comments

ಯಲಹಂಕ: ಶಿಕ್ಷಣದ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಚಿತ್ರನಟ ದಿಗಂತ್ ಹೇಳಿದ್ದಾರೆ.ಹೆಬ್ಬಾಳದ ಸಿಂಧಿ ಕಾಲೇಜು ಮತ್ತು ಸಿಂಧಿ ಸೇವಾ ಸಮಿತಿ ಆಯೋಜಿಸಿದ್ದ ಕ್ರೆಸೆಂಡೊ ಅಂತರ ಕಾಲೇಜು ಸಾಂಸ್ಕೃಕ ಸ್ಪರ್ಧೆ ‘ಇಂದ್ರಪ್ರಸ್ತ’ ಉದ್ಘಾಟಿಸಿ ಮಾತನಾಡಿ, 10 ವರ್ಷಗಳಿಂದ ನಡೆಸುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದರು.

ಪ್ರಾಂಶುಪಾಲ ಬಿ.ಎಸ್. ಶ್ರೀಕಂಠ ಮಾತನಾಡಿ, ವಿದ್ಯಾರ್ಥಿಗಳ ಮನೋವಿಕಾಸ ಮತ್ತು ಸ್ಪರ್ಧಾ ಮನೋಭಾವ ಹೆಚ್ಚಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಮಹಾಭಾರತದ ಬಗ್ಗೆ ಕ್ವಿಜ್ ಏರ್ಪಡಿಸಿರುವುದು ವಿಶೇಷ ಎಂದರು. ಎರಡು ದಿನಗಳ ಕಾಲ ಚರ್ಚಾಸ್ಪರ್ಧೆ, ಅಂತ್ಯಾಕ್ಷರಿ, ಫ್ಯಾಷನ್ ಶೋ ಮೊದಲಾದ ಕಾರ್ಯಕ್ರಮಗಳಲ್ಲಿ ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ 150 ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಟಿ ದಿಶಾ ಪೂವಯ್ಯ, ಉಪಪ್ರಾಂಶುಪಾಲ ಅನಿಲ್​ಕುಮಾರ್, ಕಾಲೇಜಿನ ಕಾರ್ಯದರ್ಶಿ ಅವಿನಾಶ್, ಜಂಟಿ ಕಾರ್ಯದರ್ಶಿ ರಾಜೇಶ್ ಬಜಾಜ್, ಪದ್ಮಾವತಿ, ಶಶಿಕಲಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *

Back To Top