Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಸಸ್ಪೆನ್ಸ್ ಥ್ರಿಲ್ಲರ್​ನಲ್ಲಿ ಅನು ಪ್ರಭಾಕರ್

Tuesday, 13.03.2018, 3:02 AM       No Comments

ಬೆಂಗಳೂರು: ಇತ್ತೀಚಿಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಅನು ಪ್ರಭಾಕರ್, ಇದೀಗ ಅಶ್ವಥ್ ಸ್ಯಾಮ್ಯುವೆಲ್ ನಿರ್ದೇಶನದ ‘ಅನುಕ್ತ’ ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದ್ದು, ಅನು ಮತ್ತು ಬಹುಭಾಷಾ ನಟ ಸಂಪತ್ ರಾಜ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಪೋಸ್ಟರ್​ನಲ್ಲಿ ರಕ್ತದ ಕಲೆಗಳನ್ನು ತೋರಿಸಿದ್ದಾರೆ ನಿರ್ದೇಶಕರು. ಹೀಗಾಗಿ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಇರಬಹುದೇ ಎಂಬ ಅನುಮಾನ ಮೂಡುವುದು ಸಹಜ. ಈ ಬಗ್ಗೆ ಹೇಳಿಕೊಳ್ಳುವ ನಿರ್ದೇಶನ ತಂಡದ ಸದಸ್ಯ ಕಿರಣ್ ಶೆಟ್ಟಿ ಮತ್ತು ನವೀನ್ ಶರ್ವ, ‘ಒಂದು ಕೊಲೆ ಸುತ್ತ ಈ ಕಥೆ ಸಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಆರಂಭವಾಗುತ್ತದೆ. ಪ್ರತಿಯೊಬ್ಬರು ಕೊಲೆಯನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡಿರುತ್ತಾರೆ. ಕೊಲೆಯ ಬಗ್ಗೆ ಭಿನ್ನ ಅಭಿಪ್ರಾಯಗಳು ಬಂದಾಗ ಪ್ರಕರಣ ಬೇರೆಯದೇ ತಿರುವು ಪಡೆದುಕೊಳ್ಳುತ್ತದೆ. ತನಿಖೆ ನಡೆಯುವಾಗ ಪ್ರತಿ ಪಾತ್ರಧಾರಿಯೂ ಆರೋಪಿ ಸ್ಥಾನದಲ್ಲಿ ನಿಲ್ಲುತ್ತಾನೆ. ಚಿತ್ರದ ಕೊನೆಯಲ್ಲಿ ಅಪರಾಧಿ ಯಾರು ಎಂಬ ವಿಚಾರ ಬಯಲಾಗುತ್ತದೆ’ ಎಂದು ಮಾಹಿತಿ ಬಿಚ್ಚಿಡುತ್ತಾರೆ. ಚಿತ್ರದಲ್ಲಿ ದೃಶ್ಯದಿಂದ ದೃಶ್ಯಕ್ಕೆ ತಿರುವುಗಳು ಇವೆಯಂತೆ. ಚಿತ್ರ ಆರಂಭದಿಂದ ಕೊನೆಯವರೆಗೂ ಸಸ್ಪೆನ್ಸ್ ಇದೆ ಎಂಬುದು ಚಿತ್ರತಂಡದ ಮಾತು. ಗುತ್ತಿನಮನೆಯ ಯಜಮಾನನಾಗಿ ಸಂಪತ್ ರಾಜ್ ಕಾಣಿಸಿಕೊಂಡರೆ ಅವರ ಪತ್ನಿಯಾಗಿ ಅನು ನಟಿಸಿದ್ದಾರೆ. ಈ ಮೊದಲು ಧಾರಾವಾಹಿಗಳಲ್ಲಿ ನಟಿಸಿದ್ದ ಕಾರ್ತಿಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ಅವರು

ಸ್ಯಾಂಡಲ್​ವುಡ್​ಗೆ ಪರಿಚಿತರಾಗುತ್ತಿದ್ದಾರೆ. ‘ಎರಡನೇ ಸಲ’ ಖ್ಯಾತಿಯ ಸಂಗೀತಾ ಭಟ್ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಸಸ್ಪೆನ್ಸ್ ಅಂಶಗಳ ಜತೆ ಕಾರ್ತಿಕ್ ಹಾಗೂ ಸಂಗೀತಾ ನಡುವೆ ನವಿರಾದ ಪ್ರೇಮಕಥೆಯೂ ಸಾಗಲಿದೆಯಂತೆ. ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮೇ ವೇಳೆಗೆ ಚಿತ್ರವನ್ನು ಪ್ರೇಕ್ಷಕರೆದುರು ತರುವ ಯೋಜನೆ ಚಿತ್ರತಂಡದ್ದು. ಚಿತ್ರಕ್ಕೆ ಹರ್ಷಾ ಬಂಗೇರಾ ಬಂಡವಾಳ ಹೂಡಿದ್ದಾರೆ. ನೋಬಿನ್ ಪೌಲ್ ಸಂಗೀತ ನೀಡಿದ್ದು, ಮನೋಹರ್ ಜೋಷಿ ಛಾಯಾಗ್ರಹಣ ಮಾಡಿದ್ದಾರೆ.

Leave a Reply

Your email address will not be published. Required fields are marked *

Back To Top