Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಸಲ್ಲು-ಲುಲಿಯಾ ಸಿಂಗಿಂಗ್ ಬಾಬಿ-ಕೃತಿ ಡಾನ್ಸಿಂಗ್

Wednesday, 13.06.2018, 3:03 AM       No Comments

ಬಾಲಿವುಡ್​ನಲ್ಲಿ ಪ್ರೇಮಿಗಳೆಂದೇ ಬಿಂಬಿತವಾಗಿದ್ದ ಸಲ್ಮಾನ್ ಖಾನ್ ಮತ್ತು ಲುಲಿಯಾ ವಂಟೂರ್, ಇದೀಗ ರೊಮ್ಯಾಂಟಿಕ್ ಗೀತೆಗೆ ಧ್ವನಿಯಾಗುತ್ತಿದ್ದಾರೆ. ಒಟ್ಟಿಗೆ ಒಂದೇ ಚಿತ್ರದ ಹಾಡಿಗೆ ಮೈಕ್ ಹಿಡಿದು ಸಾಹಿತ್ಯ ಗುನುಗಲಿದ್ದಾರೆ. ಹೌದು, ಈ ಹಿಂದೆ ಹೇಳಿದಂತೆ ‘ಯಮ್ಲಾ ಪಗ್ಲಾ ದಿವಾನಾ 3’ ಹಲವು ಕಾರಣಗಳಿಂದ ಸುದ್ದಿಯಾಗುತ್ತ ಬಂದಿದೆ. ಅದಕ್ಕೀಗ ಈ ಮೇಲಿನ ಸುದ್ದಿ ಸಹ ಸೇರ್ಪಡೆಗೊಂಡಿದೆ.

ಈಗಾಗಲೇ ‘ರೇಸ್ 3’ ಚಿತ್ರದಲ್ಲಿ ಸಲ್ಮಾನ್ ಜತೆ ಬಾಬಿ ಡಿಯೋಲ್ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಸ್ನೇಹ ಸಂಬಂಧವಿದೆ. ಹೀಗಾಗಿ ಧಮೇಂದ್ರ, ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಮುಖ್ಯಪಾತ್ರದಲ್ಲಿರುವ ‘ಯಮ್ಲಾ ಪಗ್ಲಾ ದಿವಾನಾ 3’ ಚಿತ್ರದ ಹಾಡೊಂದನ್ನು ಹಾಡುವ ಮೂಲಕ ಮತ್ತೆ ಸಾಥ್ ನೀಡಿದ್ದಾರೆ.

ತಮ್ಮ ಪಾಲಿನ ಸಾಹಿತ್ಯವನ್ನು ಕಳೆದ ವಾರವೇ ಲುಲಿಯಾ ಹಾಡಿದ್ದಾರಂತೆ. ಇತ್ತ ‘ರೇಸ್ 3’ ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿರುವುದರಿಂದ ಅದರ ಪ್ರಚಾರದಲ್ಲಿ ಸಲ್ಮಾನ್ ಬಿಜಿಯಾಗಿದ್ದಾರೆ. ಸಿನಿಮಾ ಬಿಡುಗಡೆ ನಂತರವೇ ಹಾಡಿನ ರೆಕಾರ್ಡಿಂಗ್​ನಲ್ಲಿ ಭಾಗಿಯಾಗಲಿದ್ದಾರಂತೆ. ಇದಿಷ್ಟಕ್ಕೆ ಸಲ್ಮಾನ್ ಕೆಲಸ ಮುಗಿದಿಲ್ಲ! ಚಿತ್ರದಲ್ಲಿ ಅತಿಥಿಯಾಗಿಯೂ ಹಾಜರಿಹಾಕಲಿದ್ದಾರೆ.

ವಿಶೇಷ ಏನೆಂದರೆ, ‘ಯಮ್ಲಾ ಪಗ್ಲಾ ದಿವಾನಾ 3’ ಚಿತ್ರದಲ್ಲಿ ಬಾಬಿ ಡಿಯೋಲ್​ಗೆ ಕೃತಿ ಕರಬಂಧ ಜೋಡಿಯಾಗಿದ್ದಾರೆ. ಈವರೆಗೂ ಬಾಲಿವುಡ್​ನಲ್ಲಿ ಅಷ್ಟೇನೂ ಹೇಳಿಕೊಳ್ಳುವಂತಹ ಗೆಲುವು ದಕ್ಕಿಸಿಕೊಳ್ಳದ ಕೃತಿ, ಇದೀಗ ಸೂಪರ್ ಹಿಟ್ ಸರಣಿಯ ಭಾಗವಾಗಿದ್ದಾರೆ. ಅದರಲ್ಲೂ ಸಲ್ಮಾನ್ ಖಾನ್, ಮತ್ತು ಲೂಲಿಯಾ ಧ್ವನಿ ನೀಡಿರುವ ಹಾಡಿನಲ್ಲಿ ಕಾಣಿಸಿಕೊಳ್ಳುವ ಕಾತರದಲ್ಲಿದ್ದಾರೆ.

ಮತ್ತೊಂದು ಕಡೆ ಮಲ್ಟಿಸ್ಟಾರರ್ ಚಿತ್ರ ‘ಹೌಸ್​ಫುಲ್ 4’ರಲ್ಲೂ ಅಕ್ಷಯ್ಕುಮಾರ್ ಜತೆಗೆ ಕೃತಿ ತೆರೆಹಂಚಿಕೊಳ್ಳುತ್ತಿದ್ದು, ಸಾಲು ಸಾಲು ಚಿತ್ರಗಳನ್ನು ಬತ್ತಳಿಕೆಯಲ್ಲಿರಿಸಿಕೊಂಡಿದ್ದಾರೆ. ಈವರೆಗೂ ಕನ್ನಡ ಸೇರಿ ದಕ್ಷಿಣಭಾರತದ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ

ಕೃತಿ ಇದೀಗ ಬಾಲಿವುಡ್ ನಟಿಯಾಗಿಯೇ ಗುರುತಿಸಿಕೊಳ್ಳುತ್ತಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top