Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಸರ್ವಾಂಗವೂ ದಿವ್ಯೌಷಧವಾದ ಎಕ್ಕ

Saturday, 11.08.2018, 3:04 AM       No Comments

| ಅನಂತ ವೈದ್ಯ, ಯಲ್ಲಾಪುರ

ಮಾನವಸ್ನೇಹಿ ಮತ್ತು ಪ್ರಕೃತಿಯ ಸ್ನೇಹಿಯಾಗಿ ಎಕ್ಕದ ಗಿಡ ಆವಿರ್ಭವಿಸಿದೆ. ಜೀವವಾಯುವನ್ನು ನೀಡುವ ವನಸಂಪತ್ತಿನಿಂದಲೇ ಮನುಷ್ಯನ ಮತ್ತು ಪ್ರಾಣಿಗಳ ಜೀವನ ಸಾಗುತ್ತಿದೆ. ಪ್ರಕೃತಿ ನೋಡಲು ರಮಣೀಯ. ಕೇಳಲು ಸುಮಧುರ. ಪ್ರಪಂಚದ ಸಮತೋಲನವನ್ನು ಕಾಪಾಡುವುದೇ ಪ್ರಕೃತಿ. ಯಾವುದೇ ರೋಗಗಳಿಗೂ ಸಸ್ಯಸಂಕುಲದಲ್ಲಿ ಔಷಧವಿದೆ. ಅದರಲ್ಲೂ ಬಿಳಿ ಎಕ್ಕದ ಗಿಡವು ಇದ್ದಲ್ಲಿ ಮಂತ್ರ, ತಂತ್ರ, ದುಷ್ಟ, ನಕಾರಾತ್ಮಕ ಶಕ್ತಿಗಳು ಕೆಲಸವನ್ನು ಮಾಡುವುದೇ ಇಲ್ಲ.

ಹೋಮ: ಎಕ್ಕೆಗಿಡದ ಎಲೆಯನ್ನು ಉಪಯೋಗಿಸಿ ಹೋಮ ಮಾಡಿದರೆ ರವಿಗ್ರಹದ ದೋಷ ನಿವಾರಣೆ ಆಗುವುದು. ಪ್ರಾಣವಾಯುವು ಪ್ರಕೃತಿಯಲ್ಲಿ ಸಮೃದ್ಧವಾಗುವುದು.

ಯಂತ್ರ ಮತ್ತು ಮಂತ್ರ: ಎಕ್ಕದ ಗಿಡದ ಬೇರನ್ನು ತಾಯತದಲ್ಲಿ ಹಾಕಿಕೊಂಡು ಒಂದು ಕಪ್ಪುದಾರದಲ್ಲಿ ಪೋಣಿಸಿ ಕುತ್ತಿಗೆಯಲ್ಲಿ ಧರಿಸಿಕೊಂಡರೆ ಯಾವ ಸಮಸ್ಯೆಯೂ ಬಾಧಿಸದು.

ಚರ್ಮವ್ಯಾಧಿ: 1) ಚರ್ಮ ಸುಕ್ಕುಗಟ್ಟಿದರೆ, ಎಕ್ಕದ ಹಾಲಿನ ಜತೆ ಎಕ್ಕದ ಗಿಡದ ಬೇರನ್ನು ಅರೆದು ನಿಂಬೆರಸದ ಜತೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದರೆ ಕಪ್ಪುಕಲೆಗಳು ವಾಸಿಯಾಗುತ್ತವೆ. ಹೆಚ್ಚಾಗಿ ಮಹಿಳೆಯರ ಮುಖದಲ್ಲಿ ಚರ್ಮ ಸುಕ್ಕುಗಟ್ಟಿದ ರೀತಿಯಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇದು ವಾಸಿಯಾಗಬೇಕಾದರೆ ತುಂಬ ದುಬಾರಿ ಔಷಧವನ್ನು ಬಳಕೆ ಮಾಡಬೇಕು.

2) ಗಂಧೆಯಾಗಿದ್ದರೂ ಈ ಸಸ್ಯದ ಔಷಧ ರಾಮಬಾಣವಾಗಿದೆ. ಎಕ್ಕದ ಹಾಲಿಗೆ ಮೂರು ಗ್ರಾಂ ಅರಿಶಿಣವನ್ನು ಕಲಸಿ ಚರ್ಮಕ್ಕೆ ಹಚ್ಚಿದರೆ ಗಂಧೆ-ನವೆ ಕಡಿಮೆಯಾಗುತ್ತದೆ. 3) ಎಕ್ಕದ ಹಾಲಿನ ಜತೆ ಅರಿಶಿಣವನ್ನು ಮಿಶ್ರಣ ಮಾಡಿ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ. 4) ದೇಹದ ಮೇಲೆ ಕೆಡುಕು, ಮಾಯಾಮಂತ್ರಗಳಿಂದ ಸಂಭವಿಸಿದ ತೊಂದರೆಗಳಿದ್ದರೆ ಅದಕ್ಕೆ ಎಕ್ಕದ ಎಲೆಯ ಹಾಲನ್ನು ಹತ್ತು ದಿನಗಳ ಕಾಲ ನಿರಂತರವಾಗಿ ಹಚ್ಚಿದರೆ ಸಂಪೂರ್ಣ ಮಾಯವಾಗುತ್ತದೆ. 5) ಚರ್ಮದ ಕಾಯಿಲೆ ಇದ್ದರೆ ಎಕ್ಕದ ಹಾಲು ಹಾಗೂ ಜೇನುತುಪ್ಪವನ್ನು ಬೆರೆಸಿ ಹಚ್ಚಬೇಕು. 6) ಎಕ್ಕದ ಎಲೆಗಳನ್ನು ತುಪ್ಪದಲ್ಲಿ ಹುರಿದು ಅದರಿಂದ ರಸ ತೆಗೆದು ನಿಯತವಾಗಿ ಕಿವಿಗಳಿಗೆ ಹಾಕಿದರೆ ಕಿವಿನೋವು, ಕಿವಿ ಸೋರುವುದು ಇನ್ನಿತರ ಕಿವಿ ಸಮಸ್ಯೆಗಳು ದೂರವಾಗುತ್ತವೆ.

ವಿಷಬಾಧೆ: 7) ಕಾಲಿಗೆ ಅಥವಾ ದೇಹದ ಯಾವುದೇ ಭಾಗಕ್ಕೂ ವಿಷದ ಮುಳ್ಳು ಚುಚ್ಚಿ ಗಾಯವಾಗಿದ್ದರೆ ಅದಕ್ಕೆ ಎಕ್ಕದ ಹಾಲನ್ನು ನೇರವಾಗಿ ಹಚ್ಚಿದರೆ ನೋವು ತಕ್ಷಣ ಕಡಿಮೆಯಾಗುತ್ತದೆ. 8) ಎಕ್ಕದ ಎಲೆಗಳನ್ನು ಬಿಸಿ ಮಾಡಿ ಕಟ್ಟಿದರೆ ಗಾಯ ಬೇಗ ಗುಣವಾಗುತ್ತದೆ. 9) ಎಕ್ಕದ ಎಲೆ ರಸಕ್ಕೆ ಎಳ್ಳೆಣ್ಣೆ ಮತ್ತು ಅರಿಶಿಣ ಸೇರಿಸಿ ಹಚ್ಚಿದರೆ ಚರ್ಮದ ತೊಂದರೆ ಗುಣವಾಗುತ್ತದೆ. 10) ಮುಳ್ಳು ಚುಚ್ಚಿದ ಜಾಗಕ್ಕೆ ಎಕ್ಕದ ಹಾಲನ್ನು ಹಾಕಿ ಕೆಲವು ನಿಮಿಷಗಳ ನಂತರ ಆ ಜಾಗವನ್ನು ಒತ್ತಿದರೆ ಮುಳ್ಳು ಸುಲಭವಾಗಿ ಆಚೆ ಬರುತ್ತದೆ. 11) ಕಾಲಿಗೆ ಚೇಳು ಕಚ್ಚಿದರೆ ಇದರ ಹಾಲನ್ನೇ ಹಚ್ಚುತ್ತಾರೆ. 12) ಚೇಳು, ಹಾವು ಮುಂತಾದ ವಿಷಜಂತುಗಳು ಕಡಿದರೆ ಎಕ್ಕದ ಬೇರನ್ನು ಅರಿಶಿಣದಿಂದ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ಕರಗುವುದು.

ಪ್ರಾಣಿಗಳಿಗೂ ಪ್ರಯೋಜಕ:

13) ದನಗಳಿಗೆ ಅಥವಾ ಮೇಕೆಗಳಿಗೆ ಕಾಲುಬಾಯಿ, ಬಾಯಿಹುಣ್ಣು, ನಾಲಗೆಯಲ್ಲಿ ಹುಣ್ಣು, ಕಾಲಿನಲ್ಲಿ ಹುಳವಾದರೆ ಇದರ ಎಲೆ, ಕಾಯಿ ಹೂ, ಮತ್ತು ಬೇರನ್ನು ಬೇಯಿಸಿ ಅದಕ್ಕೆ ಉಪ್ಪು ಹಾಕಿ ಅದರ ರಸವನ್ನು ಕುಡಿಸಿದರೆ ವಾಸಿಯಾಗುತ್ತದೆ. 14) ದನ ಮತ್ತು ಮೇಕೆಗಳಿಗೆ ಅಜೀರ್ಣವಾದರೂ ಇದರ ಸೊಪ್ಪನ್ನು ಬೇಯಿಸಿ ಪಶು ಆಹಾರದ ಜತೆಗೆ ನೀಡಬೇಕು ಅಥವಾ ಅದನ್ನು ಅವುಗಳಿಗೆ ತಿನ್ನಿಸಿದರೆ ಅಜೀರ್ಣ ವಾಸಿಯಾಗುತ್ತದೆ.

ಮೂಲವ್ಯಾಧಿ: 15) ಎಕ್ಕದ ಹಾಲನ್ನು ಮೂಲವ್ಯಾಧಿಯ ಮೊಳಕೆಗೆ ಹಚ್ಚುವುದರಿಂದ ಆ ಸಮಸ್ಯೆ ಪರಿಹಾರವಾಗುವುದು.

ಹೊಟ್ಟೆನೋವು: 16) ಎಕ್ಕದ ಎಲೆಯ ಕಷಾಯ ಸೇವಿಸಿದರೆ ದೇಹದಲ್ಲಿನ ಕೀಲುನೋವು, ಹಲ್ಲುನೋವು, ಹೊಟ್ಟೆನೋವು ಶಮನವಾಗುವುದು.

ಸಕ್ಕರೆ ಕಾಯಿಲೆ, ಬಿ.ಪಿ. ನಿಯಂತ್ರಣ: 17) ಸಕ್ಕರೆ ಕಾಯಿಲೆ ಅಥವಾ ರಕ್ತದೊತ್ತಡದ ಕಾಯಿಲೆ ಇದ್ದವರು ಎಕ್ಕದ ಎಲೆಯನ್ನು ಕಾಲಿನ ಅಡಿಭಾಗದಲ್ಲಿ ಇಟ್ಟರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ಇದು ವೈಜ್ಞಾನಿಕವಾಗಿ ಸಿದ್ಧವಾಗಿದೆ.

ಎಕ್ಕದ ಗಿಡದ ಎಲೆಯಲ್ಲಿ ಔಷಧೀಯ ಗುಣವಿರುವುದು ವೈದ್ಯಕೀಯವಾಗಿ ದೃಡಪಟ್ಟಿದೆ. ಆಂಗ್ಲಭಾಷೆಯಲ್ಲಿ ಇದಕ್ಕೆ ಶೋಲೋವಾರ್ಟ್ ಎಂದು ಕರೆಯುತ್ತಾರೆ. ಇದರ ಎಲೆ, ಹಾಲು, ಬೇರು, ಕಾಂಡ ಎಲ್ಲವೂ ಹೇರಳವಾದ ಔಷಧೀಯ ಗುಣಗಳನ್ನು ಹೊಂದಿದೆ. ಹಿಂದಿನ ಕಾಲದಲ್ಲಿ ಇದರ ಉಪಯೋಗ ಬಹಳವಾಗಿತ್ತು. ಈ ಗಿಡದಲ್ಲಿ ವಿಷದ ರಸವನ್ನು ದೇಹದಿಂದ ಹೀರುವ ಶಕ್ತಿ ಹೇರಳವಾಗಿದೆ. ಇದರ ಪ್ರತಿಯೊಂದು ಭಾಗವೂ ಅತ್ಯಂತ ಸೂಕ್ಷ್ಮ ಮತ್ತು ಅಪಾಯಕಾರಿಯಾಗಿರುವ ಕಾರಣ ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು.

ಎಕ್ಕದ ಹಾಲನ್ನು ಉಪಯೋಗಿಸುವಾಗ ಎಚ್ಚರದಿಂದ ಇರಬೇಕು. ಇದರ ಹಾಲು ಕಣ್ಣಿಗೆ ಸಿಡಿದರೆ ಕಣ್ಣಿಗೆ ಹಾನಿಯಾಗಬಹುದು. ದಪ್ಪವಾದ ಎಲೆಯನ್ನು ಹೊಂದಿರುವ ಗಿಡದ ಕಾಂಡದಲ್ಲೂ ಸ್ವಲ್ಪಮಟ್ಟಿನ ಹಾಲು ಇದ್ದರೆ ಎಲೆಯಲ್ಲಿ ಧಾರಾಳವಾಗಿ ಹಾಲು ದೊರೆಯುತ್ತದೆ. ಸ್ವಲ್ಪ ಚಿವುಟಿದರೆ ಹಾಲು ಚಿಮ್ಮುತ್ತದೆ. ಹಾಲು ಎಷ್ಟು ಅಪಾಯಕಾರಿಯಾಗಿದೆಯೋ ಅದಕ್ಕಿಂತ ದುಪ್ಪಟ್ಟು ಔಷಧ ಗುಣವನ್ನು ಹೊಂದಿದೆ. ಅತಿಯಾದರೆ ಅಮೃತವೂ ವಿಷವಾಗುವುದು. ಆದುದರಿಂದಲೇ ‘ಅತಿ ಸರ್ವತ್ರ ವರ್ಜಯೇತ್’ ಎನ್ನುವರು.

(ಲೇಖಕರು ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)

Leave a Reply

Your email address will not be published. Required fields are marked *

Back To Top