Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ಸರ್ಜಾ ಫ್ಯಾಮಿಲಿ ಜತೆ ದರ್ಶನ್ ಟಪ್ಪಾಂಗುಚ್ಚಿ

Thursday, 07.12.2017, 3:04 AM       No Comments

ಬೆಂಗಳೂರು: ನಟ, ನಿರ್ದೇಶಕ ಅರ್ಜುನ್ ಸರ್ಜಾ ಅವರ ‘ಪ್ರೇಮ ಬರಹ’ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡಿದೆ. ಅರ್ಜುನ್ ಪುತ್ರಿ ಐಶ್ವರ್ಯಾ ಹಾಗೂ ಚಂದನ್​ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಕನ್ನಡ-ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧಗೊಳ್ಳುತ್ತಿದೆ. ಇದೀಗ ಈ ಸಿನಿಮಾಕ್ಕೆ ಭರ್ಜರಿ ಬಲವೊಂದು ದೊರಕಿದೆ. ಏನದು? ‘ಪ್ರೇಮ ಬರಹ’ದಲ್ಲಿರುವ ಆಂಜನೇಯನ ಕುರಿತ ಹಾಡೊಂದಕ್ಕೆ ಅರ್ಜುನ್ ಸರ್ಜಾ ಸೇರಿ ಒಟ್ಟು ನಾಲ್ವರು ಸ್ಟಾರ್ ನಟರು ಜತೆಯಾಗಿದ್ದಾರೆ. ಆ ಉಳಿದ ಮೂವರು ಯಾರು? ‘ಚಾಲೆಂಜಿಂಗ್ ಸ್ಟಾರ್’ ದರ್ಶನ್, ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ!

ಬೆಂಗಳೂರಿನ ಜಿ.ಎಂ. ಪಾಳ್ಯ ಬಳಿ ಹಾಕಿದ್ದ ಸೆಟ್​ನಲ್ಲಿ ಈ ಹಾಡಿನ ಅದ್ದೂರಿ ಚಿತ್ರೀಕರಣ ನಡೆದಿದೆ. ಕೇಸರಿ ದಿರಿಸಿನಲ್ಲಿ ಅರ್ಜುನ್, ದರ್ಶನ್, ಚಿರು, ಧ್ರುವ ಸಖತ್ತಾಗಿಯೇ ಸ್ಟೆಪ್ ಹಾಕಿದ್ದಾರೆ. ಅಷ್ಟಕ್ಕೂ ಈ ಹಾಡಿಗೆ ಸಾಹಿತ್ಯ ಬರೆದಿರುವುದು ಹಿರಿಯ ಗೀತ ಸಾಹಿತಿ ವಿಜಯ ನಾರಸಿಂಹ. ಅವರು ನಿಧನರಾಗುವುದಕ್ಕೂ ಮೊದಲೇ ಅರ್ಜುನ್ ಸರ್ಜಾಗೆ ನಾಲ್ಕು ದೇವರ ಗೀತೆಗಳನ್ನು ಬರೆದುಕೊಟ್ಟಿದ್ದರಂತೆ. ಅದರಲ್ಲೊಂದು ಗೀತೆಗೆ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಅವರಿಂದ ರಾಗ ಸಂಯೋಜಿಸಿ, ‘ಪ್ರೇಮ ಬರಹ’ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಅರ್ಜುನ್ ಸರ್ಜಾ. ಅಂದಹಾಗೆ, ‘ಹನುಮನ ಪ್ರಾಣ ರಾಮ..’ ಎಂದು ಶುರುವಾಗುವ ಈ ಗೀತೆಯನ್ನು ಎಸ್.ಪಿ. ಬಾಲಸುಬ್ರಮಣ್ಯಂ ಹಾಡಿದ್ದಾರೆ. ಹಾಡಿಗೆ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಇನ್ನು, ಈ ಚಿತ್ರ ಎರಡು ಭಾಷೆಯಲ್ಲಿ ಸಿದ್ಧಗೊಂಡಿರುವುದರಿಂದ ತಮಿಳಿನಲ್ಲಿಯೂ ಈ ಹಾಡಿಗೆ ಇದೇ ಕಲಾವಿದರು ಇರಲಿದ್ದಾರೆಯೇ ಅಥವಾ ಬೇರೆ ಕಲಾವಿದರು ಹಜ್ಜೆ ಹಾಕಲಿದ್ದಾರಾ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಅರ್ಜುನ್ ಪುತ್ರಿ ಐಶ್ವರ್ಯಾಗೆ ಈಗಾಗಲೇ ತಮಿಳಿನಲ್ಲಿ ಬಣ್ಣ ಹಚ್ಚಿದ ಅನುಭವ ಇದೆ. ಆದರೆ, ಇದೇ ಮೊದಲ ಬಾರಿಗೆ ‘ಪ್ರೇಮ ಬರಹ’ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು, ಕಳೆದ ವರ್ಷ ‘ನಾಗರಹಾವು’ ಚಿತ್ರದ ಹಾಡೊಂದಕ್ಕೆ ದರ್ಶನ್ ಹೆಜ್ಜೆ ಹಾಕಿದ್ದರು. ಈ ಬಾರಿ ‘ಪ್ರೇಮ ಬರಹ’ಕ್ಕೆ ಜತೆಯಾಗಿದ್ದಾರೆ ಅವರು. ಸರ್ಜಾ ಕುಟುಂಬದ ಕಲಾವಿದರು ಒಂದೇ ಚಿತ್ರದಲ್ಲಿ ಯಾವಾಗ ನಟಿಸುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಸದ್ಯ ಹಾಡೊಂದರಲ್ಲಿ ಅರ್ಜುನ್, ಚಿರು, ಧ್ರುವ ಒಟ್ಟಿಗೆ ಕಾಣಿಸಿಕೊಂಡು ಸರ್ಜಾ ಫ್ಯಾನ್ಸ್​ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ತೆರೆಗೆ ಬರುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

Back To Top