Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಸರ್ಕಾರಿ ರಜೆ ಎಷ್ಟಿದ್ದರೂ ಮೂವತ್ತು ದಿನಗಳಿಗಷ್ಟೇ ವಿಶೇಷ ವೇತನ!

Tuesday, 16.01.2018, 3:03 AM       No Comments

| ಕೀರ್ತಿನಾರಾಯಣ ಸಿ.

ಬೆಂಗಳೂರು: ಸರ್ಕಾರಿ ನೌಕರರು ರಜೆ ದಿನವೂ ಕರ್ತವ್ಯ ನಿರ್ವಹಿಸಿದರೆ ಬೇರೊಂದು ದಿನ ಆ ರಜೆ ಬಳಸಿಕೊಳ್ಳಬಹುದು. ಆದರೆ, ಪೊಲೀಸರಿಗೆ ಮಾತ್ರ ಈ ಅನುಕೂಲ ಇಲ್ಲ. ಆ ದಿನದ ಸೇವೆಗೆ ಬದಲಾಗಿ ವಿಶೇಷ ವೇತನ ನೀಡಲಾಗುತ್ತದೆಯಾದರೂ ಎಷ್ಟೇ ಸರ್ಕಾರಿ ರಜೆ ಇದ್ದರೂ ಕೂಡ 30 ದಿನಕ್ಕೆ ಮಾತ್ರ ವಿಶೇಷ ವೇತನ ಕೊಡುತ್ತೇವೆ ಎನ್ನುವ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಧೋರಣೆಗೆ ಖಾಕಿ ವಲಯದಲ್ಲಿ ಅತೃಪ್ತಿ ವ್ಯಕ್ತವಾಗಿದೆ.

ಹಬ್ಬಗಳು, ಗಣ್ಯರ ಜಯಂತಿಗಳು, 2ನೇ ಶನಿವಾರ, ಭಾನುವಾರ ಸೇರಿ ವಾರ್ಷಿಕವಾಗಿ 48 ಸರ್ಕಾರಿ ರಜೆಗಳು ಬರುತ್ತವೆ. ಬೇರೆಲ್ಲ ಇಲಾಖೆಗಳ ನೌಕರರಿಗೂ ರಜೆ ಸಿಗುತ್ತದೆ. ಆದರೆ, ಪೊಲೀಸರಿಗೆ ಮಾತ್ರ ಸಿಗುವುದಿಲ್ಲ. 48ರ ಪೈಕಿ 45 ರಜೆ ದಿನಗಳನ್ನು ವಿಶೇಷ ವೇತನಕ್ಕೆ ಪರಿಗಣಿಸುವಂತೆ ಕೆಎಸ್​ಆರ್​ಪಿ ಹಾಗೂ ಸಿಎಆರ್ ಸಿಬ್ಬಂದಿ ಸೇರಿ ವಿವಿಧ ಘಟಕಗಳ ನೌಕರರು ಹಲವು ಬಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವ ಭರವಸೆಯೂ ಸಿಕ್ಕಿಲ್ಲ. ಬದಲಾಗಿ ಎಷ್ಟೇ ರಜೆಗಳಿದ್ದರೂ ವೇತನ ಕೊಡುವುದು 30 ದಿನಕ್ಕಷ್ಟೇ ಎಂದು ಎಲ್ಲ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.

ಪೇದೆಗೆ 30, ಎಸ್​ಐಗೆ 15 ದಿನ: ಪೊಲೀಸ್ ಪೇದೆ ಮತ್ತು ಮುಖ್ಯ ಪೇದೆಗಳಿಗೆ 30 ದಿನಗಳ ವಿಶೇಷ ವೇತನ ನೀಡಲಾಗುತ್ತದೆ. ಎಎಸ್​ಐ ಹಾಗೂ ಪಿಎಸ್​ಐಗಳಿಗೆ 15 ದಿನಗಳ ವೇತನ ಮಂಜೂರು ಮಾಡಲಾಗುತ್ತದೆ. ಸಸ್ಪೆಂಡ್ ಆಗಿರುವ, ವೇತನರಹಿತ ರಜೆಯಾಗಿರುವ ನೌಕರರನ್ನು ವಿಶೇಷ ವೇತನಕ್ಕೆ ಪರಿಗಣಿಸುವುದಿಲ್ಲ. ನಿವೃತ್ತಿ ಹೊಂದಿರುವ ಹಾಗೂ ಮೃತಪಟ್ಟಿರುವ ಸಿಬ್ಬಂದಿಗೂ ವಿಶೇಷ ವೇತನದ ಸೌಲಭ್ಯ ನೀಡಲು ಪರಿಗಣಿಸಲಾಗುತ್ತದೆ.

ಎರಡು ತಿಂಗಳ ಸಂಬಳ: ಸರ್ಕಾರಿ ನೌಕರರ ಪೈಕಿ ಪೊಲೀಸರಿಗೆ ಮಾತ್ರ ಹೊಸ ವರ್ಷದ ಆರಂಭದಲ್ಲಿ ಒಂದೇ ಬಾರಿಗೆ ಎರಡು ತಿಂಗಳ ವೇತನ ಪಡೆಯುವ ಯೋಗ ಒಲಿಯುತ್ತದೆ. ಸರ್ಕಾರಿ ರಜೆಗಳ ವಿಶೇಷ ವೇತನವನ್ನೂ ಕೂಡ ತಿಂಗಳ ವೇತನದ ಜತೆಗೆ ಸೇರಿಸಿ ಜನವರಿ ಅಥವಾ ಫೆಬ್ರವರಿಯಲ್ಲಿ ಒಟ್ಟಿಗೆ ನೀಡಲಾಗುತ್ತದೆ. ಹೀಗಾಗಿ ಎರಡು ತಿಂಗಳ ಸಂಬಳವನ್ನು ಒಮ್ಮೆಲೆ ಪಡೆಯುವ ಏಕೈಕ ಇಲಾಖೆ ಪೊಲೀಸ್ ಇಲಾಖೆಯಾಗಿದೆ.

ತಪು್ಪ ಮಾಹಿತಿ ಕೊಟ್ಟರೆ ಶಿಸ್ತು ಕ್ರಮ

ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್​ಸ್ಟೆೆಬಲ್, ಹೆಡ್ ಕಾನ್​ಸ್ಟೆೆಬಲ್, ಎಎಸ್​ಐ ಹಾಗೂ ಎಸ್​ಐಗಳ ವಿವರಗಳನ್ನು ಜಿಲ್ಲಾ ಕಚೇರಿಗೆ ಸಲ್ಲಿಸುವ ಜವಾಬ್ದಾರಿ ಆಯಾ ಠಾಣಾಧಿಕಾರಿಗಳಿಗೆ ಸೇರಿದೆ. ಈ ಹಿಂದೆ ಬೇರೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ತಮ್ಮ ಠಾಣೆಗೆ ಬಂದಿದ್ದರೂ ಸಹ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಠಾಣಾಧಿಕಾರಿಯೇ ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಠಾಣೆಯಿಂದ ಮಾಹಿತಿ ತರಿಸಿಕೊಂಡು ಸಲ್ಲಿಸಬೇಕು. ಅಪೂರ್ಣ ಮಾಹಿತಿ ಹಾಗೂ ತಪು್ಪ ಮಾಹಿತಿ ಸಲ್ಲಿಸಿದರೆ ಆಯಾ ಠಾಣಾಧಿಕಾರಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಡಿಜಿಪಿ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ.

ಎಷ್ಟು ದಿನ ರಜೆ ಇದೆಯೋ ಅಷ್ಟು ದಿನವೂ ಕೊಡಿ

ಕಾನ್​ಸ್ಟೆಬಲ್​ಗಳಿಗೆ ಕಡಿಮೆ ವೇತನ ಬರುತ್ತದೆ. ಸರ್ಕಾರಿ ರಜೆ ದಿನವನ್ನು ಬೇರೆ ದಿನ ಬಳಸಿಕೊಳ್ಳುವ ವ್ಯವಸ್ಥೆಯೂ ಇಲ್ಲ. ಹೀಗಾಗಿ ವಾರ್ಷಿಕವಾಗಿ ಸರ್ಕಾರಿ ರಜೆಗಳು ಎಷ್ಟು ಇವೆಯೋ ಅಷ್ಟು ದಿನವೂ ವಿಶೇಷ ವೇತನಕ್ಕೆ ಪರಿಗಣಿಸಿದರೆ ಸೂಕ್ತ. ಎಎಸ್​ಐ ಸೇರಿ ಮೇಲ್ಮಟ್ಟದ ಅಧಿಕಾರಿಗಳಿಗೆ ರಜೆ ದಿನದಂದು ಕರ್ತವ್ಯ ನಿರ್ವಹಿಸಿದರೆ ಬೇರೆ ದಿನ ಬಳಸಿಕೊಳ್ಳುವ ಅವಕಾಶವಿದೆ. ಪೇದೆಗಳಿಗೂ ಅದೇ ರೀತಿ ವ್ಯವಸ್ಥೆಯನ್ನು ಜಾರಿ ಮಾಡಬೇಕು ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Back To Top