Friday, 21st September 2018  

Vijayavani

Breaking News

ಸರ್ಕಾರಿ ನೌಕರರ ಕುಟುಂಬ ನಿವೃತ್ತಿ ವೇತನ ನಿಯಮಗಳು

Wednesday, 13.12.2017, 3:00 AM       No Comments

 

| ಲ ರಾಘವೇಂದ್ರ 

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಪರಿಶಿಷ್ಟ V1 ರಲ್ಲಿ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ )ನಿಯಮಗಳು 2002ನ್ನು ನೀಡಲಾಗಿದೆ. ಈ ನಿಯಮವು 1.4.1998ರಿಂದ 31.3.2006ರವರೆಗೆ ಸರ್ಕಾರಿ ಸೇವೆಗೆ ಸೇರಿದ ಸರ್ಕಾರಿ ನೌಕರರಿಗೆ ಅನ್ವಯವಾಗುತ್ತದೆ. ಈ ನಿಯಮದ ಸಂಕ್ಷಿಪ್ತ ವಿವರವನ್ನು ಕೆಳಗೆ ವಿವೇಚಿಸಲಾಗಿದೆ.

=ಕುಟುಂಬ ನಿವೃತ್ತಿ ವೇತನ ಮಂಜೂರಾತಿಯು ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಮೃತನಾದರೆ ಅವನ ಕುಟುಂಬಕ್ಕೆ ಅಥವಾ ಅವಲಂಬಿತರಿಗೆ ಮರಣ ಉಪದಾನ ಮತ್ತು ಈ ಕುಟುಂಬ ವೇತನವನ್ನು ಸಂದಾಯ ಮಾಡಲಾಗುವುದು. ಈ ಕುಟುಂಬ ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರನು ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು. ಈ ಒಂದು ವರ್ಷದ ಸೇವೆಯಲ್ಲಿ ಅಮಾನತ್ತಿನ ಅವಧಿ, ಕರ್ತವ್ಯವಲ್ಲದ ಅವಧಿ ಹಾಗೂ ವೇತನ ರಹಿತ ರಜೆಯು ಒಳಗೊಳ್ಳುವುದಿಲ್ಲ.

ಕುಟುಂಬ ನಿವೃತ್ತಿ ವೇತನವನ್ನು ಒಬ್ಬ ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಮೃತನಾದಾಗ ಅಥವಾ ನಿವೃತ್ತಿ ನಂತರ ಮರಣ ಹೊಂದಿದಲ್ಲಿ ಮರಣದ ಅಥವಾ ನಿವೃತ್ತಿಯ ನಿಕಟ ಪೂರ್ವದಲ್ಲಿ ಪಡೆಯುತ್ತಿದ್ದ ಅಂತಿಮ ವೇತನದ ಶೇ. 30ರಷ್ಟು ಕುಟುಂಬ ನಿವೃತ್ತಿ ವೇತನವನ್ನು ಮಂಜೂರು ಮಾಡಲಾಗುತ್ತದೆ. (ನಿಯಮ 4)

ಏಳು ವರ್ಷಕ್ಕೆ ಕಡಿಮೆಯಿಲ್ಲದ ಅರ್ಹತಾದಾಯಕ ಸೇವೆ ಸಲ್ಲಿಸಿ ಸೇವೆಯಲ್ಲಿರುವಾಗಲೆ ಮರಣ ಹೊಂದಿದ ಸರ್ಕಾರಿ ನೌಕರನ ಕುಟುಂಬ ವೇತನವನ್ನು ಆತನು ಅಂತಿಮವಾಗಿ ಪಡೆಯುತ್ತಿದ್ದ ಉಪಲಬ್ಧಿಗಳ ಶೇ.50ರಷ್ಟು ಅಥವಾ ಸಾಮಾನ್ಯವಾಗಿ ದೊರೆಯುವ ಕುಟುಂಬ ವೇತನದ 2ರಷ್ಟಕ್ಕೆ ಸಮನಾದ ಹೆಚ್ಚಿಸಿದ ದರದಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ಏಳು ವರ್ಷಗಳ ಅವಧಿಗಾಗಿ ಸಂದಾಯ ಮಾಡಲಾಗುವುದು. (ನಿಯಮ 5)

ತಂದೆ ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು ಮೃತರಾದ ಸಂದರ್ಭದಲ್ಲಿ ಅಪ್ರಾಪ್ತ ಮಕ್ಕಳಿಗೆ 2 ಕುಟುಂಬ ವೇತನವನ್ನು ಪಾವತಿ ಮಾಡಬಹುದಾಗಿದ್ದು ಇದು ಗರಿಷ್ಠ ಮೊತ್ತ 23,990ಕ್ಕಿಂತ ಮೀರಬಾರದು (ನಿಯಮ 6) ಈ ನಿಯಮಗಳಲ್ಲಿ ಕುಟುಂಬ ಎಂಬ ಪದ ಅರ್ಥದಲ್ಲಿ ಸರ್ಕಾರಿ ನೌಕರನ ಪತ್ನಿ ಅಥವಾ ಸಂದರ್ಭಾನುಸಾರ ಪತಿ, 18 ವರ್ಷ ವಯಸ್ಸಿನವರೆಗಿನ ಅಪ್ರಾಪ್ತ ಗಂಡು ಮಕ್ಕಳು, 21 ವರ್ಷ ವಯಸ್ಸಿಗಿಂತ ಕಡಿಮೆಯ ಅವಿವಾಹಿತ ಅಪ್ರಾಪ್ತವಯಸ್ಸಿನ ಹೆಣ್ಣುಮಕ್ಕಳು ಒಳಗೊಳ್ಳುತ್ತಾರೆ. (ನಿಯಮ 8) ಆದರೆ ಸರ್ಕಾರಿ ನೌಕರನ ಮಗ ಅಥವಾ ಮಗಳು ಮಾನಸಿಕ ಅಸ್ವಸ್ಥತೆ ಅಥವಾ ದೈಹಿಕ ಅಂಗಹೀನತೆ ಹೊಂದಿದ್ದು ಜೀವನೋಪಾಯ ಮಾಡಲು ಅಸಮರ್ಥರಾಗಿದ್ದರೆ ಅಂತಹ ಮಗ/ ಮಗಳಿಗೆ ಅವರ ಜೀವಮಾನ ಪರ್ಯಂತ ಕುಟುಂಬ ನಿವೃತ್ತಿ ವೇತನವನ್ನು ಸಂದಾಯ ಮಾಡಲಾಗುತ್ತದೆ. (ನಿಯಮ 9(ಡಿ)) =ಸರ್ಕಾರಿ ನೌಕರನು ಸರ್ಕಾರದ ಅನುಮತಿಯನ್ನು ಪಡೆದು ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದಿದ್ದರೆ ಅವರಿಬ್ಬರಿಗೆ ಸಮಾನವಾಗಿ ಈ ಕುಟುಂಬ ನಿವೃತ್ತಿ ವೇತನವನ್ನು ಹಂಚಬೇಕು. (ನಿಯಮ 9 (ಇ)) =ಮಾನಸಿಕವಾಗಿ ಅಥವಾ ದೈಹಿಕವಾಗಿ ಅಂಗವಿಕಲತೆಯಿಂದ ಕೂಡಿದ ಹಾಗೂ ಜೀವನೋಪಾಯ ಮಾಡಲು ಅಸಮರ್ಥರಾದ ಗಂಡು ಮಕ್ಕಳಿಗೆ ಒಬ್ಬರಾದ ಮೇಲೆ ಒಬ್ಬರಂತೆ ಜೀವಮಾನ ಪರ್ಯಂತ ಸಂದಾಯ ಮಾಡಲಾಗುತ್ತದೆ (ನಿಯಮ 9) =ಸರ್ಕಾರಿ ನೌಕರನು ಅಥವಾ ನಿವೃತ್ತಿದಾರನು ಮರಣ ಹೊಂದಿದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಮೇರೆಗೆ ಕುಟುಂಬ ನಿವೃತ್ತಿ ವೇತನ, ಉಪದಾನ ಪಡೆಯಲು ಅರ್ಹನಾಗಿದ್ದು ಅವರು ಕೊಲೆಯ ಅಪರಾಧ ಮಾಡಿದ ಅಥವಾ ಅಪರಾಧಕ್ಕೆ ದುಷ್ಪ್ರೇರಣೆ ನೀಡಿದ ದೋಷಾರೋಪಣೆ ಸಾಬೀತಾದಲ್ಲಿ ಅವನ ಕುಟುಂಬ ಈ ಉಪದಾನ ಪಡೆಯಲು ಅನರ್ಹರಾಗುತ್ತಾರೆ. (ನಿಯಮ 9(ಎಫ್ ) ಮತ್ತು ನಿಯಮ 292 ಸಿ)

Leave a Reply

Your email address will not be published. Required fields are marked *

Back To Top