Sunday, 18th February 2018  

Vijayavani

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ - ಸಂಜೆಯೊಳಗೆ ಬಂಧಿಸದಿದ್ದರೆ ಅಧಿಕಾರಿಗಳು ಸಸ್ಪೆಂಡ್- ಗೃಹ ಸಚಿವರ ಖಡಕ್ ವಾರ್ನಿಂಗ್.        ಕಾಂಗ್ರೆಸ್‌ನ ಗೂಂಡಾಗಿರಿ ಬಯಲಾಗಿದೆ - ತಮ್ಮ ಸರ್ಕಾರ ಇದೆ ಅಂತಲೇ ಈ ಕೃತ್ಯ - ಹ್ಯಾರಿಸ್ ಮಗನ ದರ್ಪಕ್ಕೆ ಆರ್‌.ಅಶೋಕ್ ಕಿಡಿ.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.        ಇರಾನ್‌ನ ಸೆಮಿರೋಮ್‌ ಬಳಿ ವಿಮಾನ ಪತನ - 66 ಪ್ರಯಾಣಿಕರ ದುರ್ಮರಣ - ಏರ್‌ಲೈನ್ಸ್‌ ಕಡೆಯಿಂದ ಸ್ಪಷ್ಟನೆ.       
Breaking News

ಸರ್ಕಾರಿ ಗೋಶಾಲೆಗೆ ಪತಂಜಲಿ ಪಾಲುದಾರಿಕೆ

Wednesday, 15.11.2017, 3:00 AM       No Comments

ನಾಗಪುರ: ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯ ಪಾಲುದಾರಿಕೆಯಲ್ಲಿ ಮಹಾರಾಷ್ಟ್ರದ ವಿದರ್ಭದಲ್ಲಿ ಗೋಶಾಲೆ ನಿರ್ವಿುಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ವಿದರ್ಭ ಪ್ರದೇಶದಲ್ಲಿರುವ ಹೇಟಿ ಗ್ರಾಮದಲ್ಲಿ 1,000 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದರಲ್ಲಿ 800 ಎಕರೆ ಪ್ರದೇಶದಲ್ಲಿ ಗೋಶಾಲೆ ತಲೆ ಎತ್ತಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ.

ಪತಂಜಲಿ ಸಂಸ್ಥೆ 10,000 ಹಸುಗಳನ್ನು ಖರೀದಿಸಿ, ಸಾಕಾಣಿಕೆ ಮಾಡಲಿದೆ. ಡೇರಿ ಹಾಗೂ ಹಾಲು ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.

ಹೇಟಿ ಗ್ರಾಮದಲ್ಲಿ ಈಗಾಗಲೆ ರಾಜ್ಯ ಸರ್ಕಾರದ ಪಶುಸಂಗೋಪನೆ ಇಲಾಖೆಯ ಗೋಶಾಲೆ ಇದೆ. 328 ಹೆಕ್ಟೇರ್ ವಿಸ್ತಾರವಾಗಿರುವ ಈ ಗೋಶಾಲೆಯ 40.80 ಹೆಕ್ಟೇರ್ ಭೂಮಿ ಪಶುಸಂಗೋಪನೆ ಇಲಾಖೆಯ ಒಡೆತನಕ್ಕೆ ಸೇರಿದೆ. ಅಲ್ಲದೆ, ಸಮೀಪದಲ್ಲೇ ಇರುವ ಅರಣ್ಯ ಪ್ರದೇಶದ 227.2 ಹೆಕ್ಟೇರ್ ಪ್ರದೇಶದಲ್ಲಿ ಗೋವುಗಳನ್ನು ಮೇಯಿಸುವ ಹಕ್ಕು ಕೂಡ ಇಲಾಖೆಯ ಬಳಿ ಇದೆ. ಇದನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮಾಡಬೇಕೋ ಅಥವಾ ಸರ್ಕಾರದ ವತಿಯಿಂದಲೇ ಮಾಡಬೇಕೋ ಎಂಬುದು ನಿರ್ಧಾರವಾಗಿಲ್ಲ. ಆದರೆ ಈ ಕುರಿತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಪಶುಸಂಗೋಪನೆ ಸಚಿವರು ಕೇಂದ್ರ ಸಚಿವರ ಜತೆ ಮಾತುಕತೆ ನಡೆಸಿದ್ದಾರೆ. ಆದರೆ ಯಾವುದೂ ಇನ್ನೂ ಸ್ಪಷ್ಟ ರೂಪು ತಳೆದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರದ ಪಶುಸಂಗೋಪನೆ ಇಲಾಖೆಯ ಆಯುಕ್ತ ಕಾಂತಿಲಾಲ್ ಉಮಾಪ್ ತಿಳಿಸಿದ್ದಾರೆ. -ಏಜೆನ್ಸೀಸ್

ಇದು ವಾಣಿಜ್ಯಾತ್ಮಕ ಯೋಜನೆ ಯಲ್ಲ. ಇಲ್ಲಿ ನಾವು ಸೇವಾ ಮನೋ ಭಾವದಲ್ಲಿ ಗೋಶಾಲೆ ಆರಂಭಿಸಲು ಉದ್ದೇಶಿಸಿದ್ದೇವೆ. ಇದರ ಯೋಜನಾ ವರದಿಯನ್ನು ಶೀಘ್ರ ಸಲ್ಲಿಸುವಂತೆ ನಿತಿನ್ ಗಡ್ಕರಿ ಸೂಚಿಸಿದ್ದಾರೆ. ಅದರಂತೆ ವರದಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ಸಲ್ಲಿಸಲಾಗುವುದು.

| ಆಚಾರ್ಯ ಬಾಲಕೃಷ್ಣ ಪತಂಜಲಿ ಎಂಡಿ

Leave a Reply

Your email address will not be published. Required fields are marked *

Back To Top