Thursday, 25th May 2017  

Vijayavani

1. ಬೆಳಗಾವಿಯಲ್ಲಿ ಎಂಇಎಸ್​ ಪ್ರತಿಭಟನಾ ರ್ಯಾಲಿ ಹಿನ್ನೆಲೆ- ಡಿಸಿ ಆದೇಶಕ್ಕೆ ಹೆದರಿ ಮಹಾರಾಷ್ಟ್ರ ಸಚಿವ ವಾಪಸ್​​​​- ಕುಂದಾನಗರಿಯಲ್ಲಿ ಬಿಗಿ ​ ಬಂದೋಬಸ್ತ್​​​​ 2. ಡಿಸೆಂಬರ್​ ಆದ್ರೂ ಓಕೆ, ಮಾರ್ಚ್ ಆದ್ರೂ ಓಕೆ- ಸಿಎಂ ಯಾವಾಗ್ಬೇಕಾದ್ರೂ ಚುನಾವಣೆ ನಡೆಸ್ಲಿ- 224 ಕ್ಷೇತ್ರದಲ್ಲೂ ಸ್ಪರ್ಧೆ ಅಂದ್ರು ದೇವೇಗೌಡ 3. ವಿವಿಧ ಬೇಡಿಕೆಗೆ ಆಗ್ರಹಿಸಿ ಪೊರಕೆ ಹಿಸಿದು ಪ್ರೊಟೆಸ್ಟ್​- ಬಿಬಿಎಂಪಿ ಎದುರು ಪೌರಕಾರ್ಮಿಕರ ಧರಣಿ- ಕೂಡಲೇ ಕೆಲಸ ಖಾಯಂಗೆ ಆಗ್ರಹ 4. ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಮುಂದುವರಿಸಿ- ಕಾಂಗ್ರೆಸ್ ಉಸ್ತುವಾರಿಗೆ ನಟಿ ಭಾವನಾ ಮನವಿ- ಮರುಮಾತಾಡದ ವೇಣುಗೋಪಾಲ್ 5. ಆದಿಚುಂಚನಗಿರಿಯಲ್ಲಿ ಮಾಜಿ ಸಿಎಂ ಅಮಾವಾಸ್ಯೆ ಪೂಜೆ- ಕಾಲಭೈರವೇಶ್ವರ, ಕ್ಷೇತ್ರಾದಿ ದೇವತೆಗಳಿಗೆ ನಮನ- ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ
Breaking News :

ಸರ್ಕಾರಿ ಕಾರ್ನರ್

Friday, 05.05.2017, 3:00 AM       No Comments

ದಿನದ ಪ್ರಶ್ನೆ

2009ರ ಜೂನ್​ನಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾನು ಎನ್​ಒಸಿ ಪಡೆದು ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿರುತ್ತೇನೆ. ನಾನು ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಹೇಗೆ ಪರಿಗಣಿಸುತ್ತಾರೆ? ಈಗಿನ ಸೇವಾ ಪುಸ್ತಕ ಮತ್ತು ರಜೆಗಳು ಮುಂದುವರಿಯುತ್ತವೆಯೇ? ಮುಂದಿನ ವೇತನ, ಭತ್ಯೆ, ಬಡ್ತಿಗಳಲ್ಲಿ ಈ ಸೇವೆಯನ್ನು ಹೇಗೆ ಪರಿಗಣಿಸುತ್ತಾರೆ? ಕೆಜಿಐಡಿ ಮುಂದುವರಿಯುತ್ತವೆಯೇ?

|ಕುಮಾರ್ ಮಂಡ್ಯ

ನೀವು ಕಾಲೇಜು ಶಿಕ್ಷಣ ಇಲಾಖೆ ಪ್ರಾಧ್ಯಾಪಕರ ಹುದ್ದೆಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252(ಬಿ) ರಂತೆ ಪೊಲೀಸ್ ಇಲಾಖೆಯ ಕರ್ತವ್ಯದಿಂದ ವಿಮುಕ್ತಿಗೊಂಡು ಹಾಜರಾದರೆ ಈಗಿನ ನಿಮ್ಮ ಸೇವಾ ಪುಸ್ತಕ ಮತ್ತು ರಜೆಗಳು ಮುಂದುವರಿಯುತ್ತವೆ. ನಿಮ್ಮ ಮುಂದಿನ ವೇತನವನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯಲ್ಲಿನ ನಿಯಮ 41ಎ ರಂತೆ ಹಾಗೂ ವಾರ್ಷಿಕ ವೇತನ ಬಡ್ತಿಯನ್ನು ನಿಯಮ 51ರಂತೆ ನಿಗದಿ ಪಡಿಸಲಾಗುತ್ತದೆ. ಅಲ್ಲದೆ ನಿಮ್ಮ ಎನ್​ಪಿಎಸ್ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ (ಸ್ಪೆಷಲ್) 118 ಪಿಇಎನ್ 2013 ದಿನಾಂಕ 7-5-2014ರ ನಡುವೆ ಮುಂದುವರಿಯುತ್ತದೆ. ಅಲ್ಲದೆ ನಿಮ್ಮ ಕೆಜಿಐಡಿ ಸಹ ಅದೇ ಖಾತೆಯಲ್ಲಿ ಮುಂದುವರಿಯುತ್ತದೆ.

Leave a Reply

Your email address will not be published. Required fields are marked *

Back To Top