Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ಸರ್ಕಾರಿ ಕಾರ್ನರ್​

Monday, 30.10.2017, 3:00 AM       No Comments

ನಾನು 2017ರ ಜೂನ್ 1ರಂದು ಪ್ರೊಬೆಷನರಿಯಾಗಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಸೇರಿರುತ್ತೇನೆ. ನವೆಂಬರ್​ನಲ್ಲಿ ನಡೆಯುವ ಅಕೌಂಟ್ಸ್ ಹೈಯರ್, ಜನರಲ್ ಲಾ ಭಾಗ 1, 2 ಪರೀಕ್ಷೆಗಳಿಗೆ ಹಾಜರಾಗುತ್ತಿದ್ದು, ಈ ಪರೀಕ್ಷೆಗೆ ಹೇಗೆ ಓದಬೇಕು? ಯಾವ ಯಾವ ಪುಸ್ತಕಗಳನ್ನು ಬಳಸಬೇಕು. ಪರೀಕ್ಷೆಗೆ ಪುಸ್ತಕಗಳನ್ನು ನೋಡಿಕೊಂಡು ಉತ್ತರಿಸಬಹುದೇ?

|ಶ್ವೇತ ಎಂ. ಶಿವಮೊಗ್ಗ

ಕರ್ನಾಟಕ ಸರ್ಕಾರಿ ಸೇವಾ (ಸೇವಾ ಮತ್ತು ಕನ್ನಡ ಭಾಷೆ) ನಿಯಮಗಳು 1974ರ ಪ್ರಕಾರ ಪ್ರತಿಯೊಬ್ಬ ಸರ್ಕಾರಿ ನೌಕರನು ಅವನ ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರುತ್ತದೆ. ನೀವು ಈ ಇಲಾಖಾ ಪರೀಕ್ಷೆಗಳಿಗೆ ಲ. ರಾಘವೇಂದ್ರ ಅವರು ಸಿದ್ಧಪಡಿಸಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು, ಕರ್ನಾಟಕ ಆರ್ಥಿಕ ಸಂಹಿತೆ , ಕರ್ನಾಟಕ ಬಜೆಟ್ ಕೈಪಿಡಿ, ಸಾದಿಲ್ವಾರು

ವೆಚ್ಚದ ಕೈಪಿಡಿ ಪುಸ್ತಕ ಅಕೌಂಟ್ಸ್ ಹೈಯರ್ ಪರೀಕ್ಷೆಗೆ ಬಳಸಬಹುದಾಗಿದೆ. ಅಕೌಂಟ್ಸ್ ಹೈಯರ್, ಲೋಯರ್ ಇಲಾಖಾ ಪರೀಕ್ಷಾ ಕೈಪಿಡಿ,

ಜನರಲ್ ಲಾ ಭಾಗ 1 ಮತ್ತು 2ಕ್ಕೆ ಲ. ರಾಘವೇಂದ್ರ ಅವರೇ ಸಂಕಲನ ಗೊಳಿಸಿರುವ ಪಠ್ಯಪುಸ್ತಕಗಳನ್ನು ನೀವು ಖರೀದಿಸಿ ಅದರಲ್ಲಿರುವ ವಿಷಯಾನುಕ್ರಮಾಣಿಕೆ, ವಿಷಯ ಸೂಚಿ, ಅಧ್ಯಯನ ಮಾಡಿಕೊಂಡು ಹಿಂದಿನ ಪರೀಕ್ಷಾ ಪತ್ರಿಕೆಗಳನ್ನು ಅವಲೋಕಿಸಿ ಉತ್ತರವನ್ನು ಮಾಡಿದರೆ ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ.

ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.

ಇ-ಮೇಲ್: [email protected]

ದೂರವಾಣಿ: 8884431909, ಫ್ಯಾಕ್ಸ್: 080-26257464.

Leave a Reply

Your email address will not be published. Required fields are marked *

Back To Top