Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

ಸರ್ಕಾರಿ ಕಾರ್ನರ್​

Sunday, 01.10.2017, 3:00 AM       No Comments

 

ದಿನದ ಪ್ರಶ್ನೆ

ನಾನು 2007ರಿಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿದ್ದು, 2017ರ ಆಗಸ್ಟ್ 8ಕ್ಕೆ ಹತ್ತು ವರ್ಷಗಳ ಕಾಲ ಬಡ್ತಿ ಪಡೆಯಲಿದ್ದೇನೆ. ಪ್ರಸ್ತುತ ಕೆಪಿಎಸ್​ಸಿ ಕರೆದಿರುವ ಎಫ್​ಡಿಎ ಹುದ್ದೆಗೆ ಅರ್ಜಿ ಸಲ್ಲಿಸಲು ಅನುಮತಿ ಅವಶ್ಯಕವೇ? ಎಫ್​ಡಿಎ ಹುದ್ದೆಗೆ ಆಯ್ಕೆಯಾದರೆ ನನ್ನ ಈಗಿನ ಮೂಲವೇತನ 17,200 ಇದ್ದು ಎಫ್​ಡಿಎ ಮೂಲವೇತನ 14,550 ಇರುವುದರಿಂದ ನನಗೆ ಇದರಿಂದ ಪ್ರಯೋಜನವಾಗಲಿದೆಯೇ?

|ಎನ್. ಬಸವರಾಜ್ ಧಾರವಾಡ

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 11ರಂತೆ ಪ್ರತಿಯೊಬ್ಬ ಸರ್ಕಾರಿ ನೌಕರನು ಬೇರೊಂದು ಇಲಾಖೆಗೆ ಅರ್ಜಿ ಸಲ್ಲಿಸಬೇಕಾದರೆ ತನ್ನ ನೇಮಕಾತಿ ಪ್ರಾಧಿಕಾರದಿಂದ ಅನುಮತಿ ಪಡೆದು ಅರ್ಜಿ ಸಲ್ಲಿಸಬೇಕಾಗುತ್ತದೆ. ನೀವು ಎಫ್​ಡಿಎ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದರೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41-ಎ ಪ್ರಕಾರ ವೇತನ ರಕ್ಷಣೆ ದೊರೆಯುತ್ತದೆ. ಆದರೆ ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252-ಬಿ ಪ್ರಕಾರ ಹಳೆ ಹುದ್ದೆಯಿಂದ ಬಿಡುಗಡೆಗೊಂಡು ಹೊಸ ಹುದ್ದೆಗೆ ಹಾಜರಾದರೆ ನಿಮ್ಮ ಇಂದಿನ ಸೇವಾವಧಿ ರಜೆ ಹಾಗೂ ವೇತನ ರಕ್ಷಣೆ ದೊರಕುತ್ತದೆ.

 

ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.

ಇ-ಮೇಲ್: [email protected]

ದೂರವಾಣಿ: 8884431909, ಫ್ಯಾಕ್ಸ್: 080-26257464.

Leave a Reply

Your email address will not be published. Required fields are marked *

Back To Top