Sunday, 18th February 2018  

Vijayavani

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ - ಸಂಜೆಯೊಳಗೆ ಬಂಧಿಸದಿದ್ದರೆ ಅಧಿಕಾರಿಗಳು ಸಸ್ಪೆಂಡ್- ಗೃಹ ಸಚಿವರ ಖಡಕ್ ವಾರ್ನಿಂಗ್.        ಕಾಂಗ್ರೆಸ್‌ನ ಗೂಂಡಾಗಿರಿ ಬಯಲಾಗಿದೆ - ತಮ್ಮ ಸರ್ಕಾರ ಇದೆ ಅಂತಲೇ ಈ ಕೃತ್ಯ - ಹ್ಯಾರಿಸ್ ಮಗನ ದರ್ಪಕ್ಕೆ ಆರ್‌.ಅಶೋಕ್ ಕಿಡಿ.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.        ಇರಾನ್‌ನ ಸೆಮಿರೋಮ್‌ ಬಳಿ ವಿಮಾನ ಪತನ - 66 ಪ್ರಯಾಣಿಕರ ದುರ್ಮರಣ - ಏರ್‌ಲೈನ್ಸ್‌ ಕಡೆಯಿಂದ ಸ್ಪಷ್ಟನೆ.       
Breaking News

ಸಮ-ಬೆಸ ಅರ್ಜಿ ಹಿಂಪಡೆದ ದೆಹಲಿ ಸರ್ಕಾರ

Wednesday, 15.11.2017, 3:00 AM       No Comments

ನವದೆಹಲಿ: ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಸಮ-ಬೆಸ ವಾಹನ ಸಂಚಾರ ಸೂತ್ರ ಜಾರಿಗೆ ಮುಂದಾಗಿದ್ದ ದೆಹಲಿ ಸರ್ಕಾರ, ಎನ್​ಜಿಟಿ ನೀಡಿದ್ದ ತಡೆಯಾಜ್ಞೆ ತೆರವು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದಿದೆ.

ಕಳೆದ ವಾರದಿಂದ ಉಂಟಾಗಿರುವ ವಾಯುಮಾಲಿನ್ಯ ಸಮಸ್ಯೆ ಸರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ದೆಹಲಿ ಮತ್ತು ಕೇಂದ್ರ ಸರ್ಕಾರಗಳಿಗೆ ಎನ್​ಜಿಟಿ, ದೆಹಲಿ ಹೈಕೋರ್ಟ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಸಿದ್ದವು. ಅದಕ್ಕೆ ಪ್ರತಿಯಾಗಿ ದೆಹಲಿ ಸರ್ಕಾರ ನ. 13ರಿಂದ 17ರವರೆಗೆ ಸಮ-ಬೆಸ ವಾಹನ ಸಂಚಾರ ಜಾರಿಗೆ ಮುಂದಾಗಿತ್ತು.

ಜತೆಗೆ ಅದರಿಂದ ಮಹಿಳೆಯರು ಮತ್ತು ದ್ವಿಚಕ್ರವಾಹನಗಳಿಗೆ ವಿನಾಯಿತಿ ನೀಡಿತ್ತು. ದೆಹಲಿ ಸರ್ಕಾರದ ಈ ಆದೇಶಕ್ಕೆ ಎನ್​ಜಿಟಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಮ-ಬೆಸ ಜಾರಿಯೊಂದೇ ಪರಿಹಾರವಲ್ಲ, ಅದರ ಬದಲಾಗಿ ಮಾಲಿನ್ಯ ನಿಯಂತ್ರಣಕ್ಕೆ ಇತರ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿತ್ತು. ಹೀಗಾಗಿ ಎನ್​ಜಿಟಿ ತಡೆಯಾಜ್ಞೆಯನ್ನು ಸೋಮವಾರ ದೆಹಲಿ ಸರ್ಕಾರ ಪ್ರಶ್ನಿಸಿತ್ತು. ಮಂಗಳವಾರ ಅರ್ಜಿ ವಿಚಾರಣೆಯ ಸಂದರ್ಭ, ಎನ್​ಜಿಟಿ ದೆಹಲಿ ಸರ್ಕಾರ ಸಮ-ಬೆಸ ಜಾರಿಗೆ ಸೂಕ್ತ ವಿವರಣೆ ನೀಡದ ಕಾರಣ ಒಪ್ಪಿಗೆ ನೀಡಿಲ್ಲ. ಹೀಗಾಗಿ ದೆಹಲಿ ಸರ್ಕಾರ ಅರ್ಜಿ ವಾಪಸ್ ಪಡೆದಿದೆ. ಹೀಗಾಗಿ ಸಮ-ಬೆಸ ನೀತಿ ಜಾರಿ ಅನುಮಾನವಾಗಿದೆ. ಮುಂದಿನ ಬಾರಿ ಸಮ-ಬೆಸ ನೀತಿ ಯಾಕೆ ಜಾರಿಯಾಗಬೇಕು ಎಂದು ಸ್ಪಷ್ಟವಾಗಿ ತಿಳಿಸುವಂತೆ ಎನ್​ಜಿಟಿ ಸರ್ಕಾರಕ್ಕೆ ಸೂಚಿಸಿದೆ. ಜತೆಗೆ ಮಹಿಳೆಯರಿಗೆ ಪ್ರತ್ಯೇಕ ಬಸ್ ಓಡಿಸುವ ಪ್ರಸ್ತಾವನೆಯನ್ನು ಕೂಡ ಪರಿಶೀಲಿಸಲು ಸಲಹೆ ನೀಡಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top