Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಸಮೃದ್ಧಿಯಿಂದ ಸಮೃದ್ಧ ಬಡಾವಣೆ

Saturday, 10.03.2018, 3:00 AM       No Comments

ರಿಯಾಲ್ಟಿ ವಲಯದಲ್ಲಿ ಜಮೀನುಗಳ ಅಭಿವೃದ್ಧಿ ಜತೆಗೆ ಸಮೃದ್ಧ ಬಡಾವಣೆ ನಿರ್ವಿುಸುವ ಕೈಂಕರ್ಯದಲ್ಲಿ ತೊಡಗಿರುವ ಸಮೃದ್ಧಿ ಪ್ರಾಪರ್ಟಿಸ್ ಸಂಸ್ಥೆಯು ಮಾರ್ಚ್ ಅಂತ್ಯದವರೆಗೆ ಸ್ಪಾಟ್ ಬುಕಿಂಗ್​ಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.

ಗೌರಿಬಿದನೂರಿನ ಗುಡಿಬಂಡೆ ಸಮೀಪ ಸಮೃದ್ಧಿ ನಿತ್ಯೋತ್ಸವ ಹಾಗೂ ಹಾಗೂ ಮೈಸೂರು ರಸ್ತೆಯ ದೊಡ್ಡ ಆಲದ ಮರದ ಬಳಿ ಜ್ಞಾನಾಕ್ಷಿ ರಾಜರಾಜೇಶ್ವರಿ ಬಡಾವಣೆ ಯೋಜನೆಗಳನ್ನು ನಿರ್ವಿುಸಿದೆ. ಈ ಎರಡು ಯೋಜನೆಗಳಲ್ಲಿ ಸ್ಪಾಟ್ ಬುಕಿಂಗ್ ನಿವೇಶನ ಖರೀದಿದಾರರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.

10 ಸಾವಿರ ರೂ. ಮೌಲ್ಯದ ಗಿಫ್ಟ್ ವೋಚರ್, ಚಿನ್ನದ ನಾಣ್ಯ ಹಾಗೂ ಕನಕಪುರ ಭಾಗದಲ್ಲಿನ ರೆಸಾರ್ಟ್​ಗೆ ಉಚಿತ ಕಪಲ್ ಪಾಸ್ ಸಿಗಲಿದೆ. ಈ ಆಫರ್ ಸೀಮಿತ ಅವಧಿಗೆ ಮಿಸಲಿರಲಿದೆ. ಹೂಡಿಕೆಯ ಅನೇಕ ಅವಕಾಶಗಳನ್ನು ಗಮದಲ್ಲಿರಿಸಿರುವ ಸಂಸ್ಥೆ, ನಿವೇಶನ ಖರೀದಿದಾರರ ಇಚ್ಛೆಗೆ ತಕ್ಕಂತಹ ಹಾಗೂ ಸುಸಜ್ಜಿತ ಸೌಲಭ್ಯಗಳುಳ್ಳ ಬಡಾವಣೆಗಳನ್ನು ನಿರ್ವಿುಸುತ್ತಿದೆ.

ಉಪನಗರಗಳತ್ತ ಚಿತ್ತ

ಪ್ರಸ್ತುತ ಬೆಂಗಳೂರಿನ ಆಸುಪಾಸಿನಲ್ಲಿ ಕೆಂಗೇರಿ, ಮೈಸೂರು ರಸ್ತೆ ಭಾಗಕ್ಕೆ ರಿಯಾಲ್ಟಿ ವಲಯದಲ್ಲಿ ಹೆಚ್ಚು ಬೇಡಿಕೆ ಇವೆ. ಹೆದ್ದಾರಿಗೆ ಹೊಂದಿಕೊಂಡ ಬಡಾವಣೆಯಾಗಿರುವ ಜ್ಞಾನಾಕ್ಷಿ ರಾಜರಾಜೇಶ್ವರಿ ಬಡಾವಣೆಯ ಶೇ.100 ಅಭಿವೃದ್ಧಿಯಾಗಿದ್ದು, ಗ್ರಾಹಕರು ತಮ್ಮ ಕನಸಿನ ಮನೆ ನಿರ್ವಣಕ್ಕೆ ಅಗತ್ಯವಾದ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. 2 ಎಕರೆ ಪ್ರದೇಶದಲ್ಲಿ ಬಿಎಂಆರ್​ಡಿನಿಂದ ಅನುಮೋದನೆ ಪಡೆದ ಭೂ ಭಾಗವನ್ನು ಆಕರ್ಷಕ ಬಡಾವಣೆಯನ್ನಾಗಿ ರೂಪುಗೊಳಿಸಲಾಗಿದೆ.

ಸನಿಹದಲ್ಲೇ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು

ಬಡಾವಣೆಯ ಸುತ್ತಮುತ್ತ ಪ್ರತಿಷ್ಠಿತ ರೆಸಿಡೆನ್ಷಿಯಲ್ ರಿಯಾಲ್ಟಿ ಚಟುವಟಿಕೆಗಳು ಹೆಚ್ಚಿರುವುದರಿಂದ ಬಡಾವಣೆಗೆ ಬೇಡಿಕೆ ಹೆಚ್ಚಿಸಿದೆ. ಇದಲ್ಲದೆ ಕುಂಬಳಗೂಡುವರೆಗೆ ಮೆಟ್ರೋ ರೈಲು ಸಂಪರ್ಕದಿಂದ ಹೂಡಿಕೆಗೆ ಅನುಕೂಲ ಸೃಷ್ಟಿಸಿದೆ. ಇದಲ್ಲದೆ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು, ಆರ್.ವಿ. ಇಂಜಿನಿಯರಿಂಗ್ ಕಾಲೇಜು ಸೇರಿ ಅನೇಕ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಬಡಾವಣೆಗೆ ಹತ್ತಿರದಲಿದೆ. ನಿವೇಶನಗಳಿಗೆ ಗ್ರಾಹಕರ ಪ್ರೊಫೈಲ್ ಹಾಗೂ ಬ್ಯಾಂಕಿಂಗ್​ನ ನಿಯಮಗಳು ಹೊಂದಾಣಿಕೆಯಾದಲ್ಲಿ ಶೇ.80 ಸಾಲ ಸೌಲಭ್ಯವೂ ಲಭ್ಯವಾಗಲಿದೆ ಎನ್ನುತ್ತಾರೆ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ ಕುಮಾರ್ ಜಿ.ಎಸ್.

ಸಮೃದ್ಧಿ ನಿತ್ಯೋತ್ಸವದಲ್ಲಿ 4ನೇ ಹಂತ

ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಸನಿಹದಲ್ಲಿನ ಒಟ್ಟಾರೆ 40 ಎಕರೆ ಪ್ರದೇಶವನ್ನು 4 ಹಂತಗಳಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದೆ. ‘ಸಮೃದ್ಧಿ ನಿತ್ಯೋತ್ಸವ’ ಬಡಾವಣೆಯ ಮೂಲಕ 4 ಹಂತಗಳಲ್ಲಿ ನಿವೇಶನ ರಚಿಸಲು ಸಂಸ್ಥೆ ಮುಂದಾಗಿದೆ. ಈಗಾಗಲೇ 3 ಹಂತಗಳ ಕಾಮಗಾರಿ ಪೂರ್ಣಗೊಂಡಿದ್ದು, 4 ನೇ ಹಂತದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. 3ನೇ ಹಂತದಲ್ಲಿ 70 ಸೈಟುಗಳಷ್ಟೇ ಹೊಸ ಗ್ರಾಹಕರಿಗೆ ಲಭ್ಯವಿದೆ. ಗೌರಿಬಿದನೂರು ಕೈಗಾರಿಕಾ ಪ್ರದೇಶ, ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಭವಿಷ್ಯದ ಯೋಜನೆಗಳು ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ರೂಪುಗೊಳ್ಳುತ್ತಿದೆ. ಡಿಟಿಸಿಪಿಯಿಂದ ಅನುಮೋದನೆಯನ್ನೂ ಪಡೆದುಕೊಂಡಿದೆ.

ಸುಸಜ್ಜಿತ ಮೂಲಸೌಕರ್ಯ, ಈಜುಕೊಳ, ಕಾಂಕ್ರೀಟ್ ರಸ್ತೆ ಸೇರಿ ಆಧುನಿಕ ಅಗತ್ಯಕ್ಕೆ ತಕ್ಕಂತೆ ಬಡಾವಣೆ ಅಭಿವೃದ್ಧಿಪಡಿಸಲಾಗಿದೆ. ನಿತ್ಯೋತ್ಸವ 4ನೇ ಹಂತದಲ್ಲಿ ಶೇ.70 ಕಾಮಗಾರಿ ಪೂರ್ಣಗೊಂಡಿದೆ. ಹಬ್ಬದ ಪ್ರಯುಕ್ತ ಸ್ಪಾಟ್ ಬುಕಿಂಗ್ ಗ್ರಾಹಕರಿಗೆ ಕೊಡುಗೆಗಳೂ ಇವೆ.

| ಜಿ.ಎಸ್.ವಿಜಯ್ ಕುಮಾರ್ ವ್ಯವಸ್ಥಾಪಕ ನಿರ್ದೇಶಕ

ಗುಣಮಮಟ್ಟದ ಸೌಕರ್ಯ

ಬಡಾವಣೆಯಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದ್ದು, ನೀರು ಸರಬರಾಜು, ಸ್ಯಾನಿಟರಿ, ವಿದ್ಯುತ್, ಭದ್ರತೆ ಇತ್ಯಾದಿ ಎಲ್ಲ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. 40 ಅಡಿ ಅಗಲದ ಕಾಂಕ್ರೀಟ್ ರಸ್ತೆಗಳಿರಲಿದೆ. ನಿತ್ಯೋತ್ಸವ ಬಡಾವಣೆಯಲ್ಲಿ ಕ್ಲಬ್ ಹೌಸ್, ಆಕರ್ಷಕ ಆರ್ಚ್, ಈಜುಕೊಳ ಇತ್ಯಾದಿ ಸೌಲಭ್ಯಗಳಿವೆ. ಹೆಚ್ಚಿನ ಮಾಹಿತಿಗೆ 9019621962 ಕಚೇರಿ ದೂರವಾಣಿ-080-28488238 ಸಂರ್ಪಸಬಹುದು.

Leave a Reply

Your email address will not be published. Required fields are marked *

Back To Top