Monday, 19th February 2018  

Vijayavani

ವಿದ್ಯಾರ್ಥಿ ಮೇಲೆ ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಕಬ್ಬನ್‌ ಪಾರ್ಕ್‌ ಪೊಲೀಸರಿಂದ ಬಂಧನ - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ        ಶ್ರವಣಬೆಳಗೊಳದತ್ತ ಪ್ರಧಾನಿ ಮೋದಿ ಪಯಣ - ಬಾಹುಬಲಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪನಮನ - ನಾಲ್ಕು ಗಂಟೆ ವೇಳೆಗೆ ಮೈಸೂರಲ್ಲಿ ಬಿಜೆಪಿ ಪರಿವರ್ತನಾ        ಭಾರತವೇ ಎಲ್ಲ ಆವಿಷ್ಕಾರಕ್ಕೆ ಹಾಟ್‌ ಸ್ಪಾಟ್ - ಜನರಿಂದಲೇ ಡಿಜಿಟಲ್ ಇಂಡಿಯಾ ಸಕ್ಸಸ್ - ಹೈದ್ರಾಬಾದ್ ಸಮಾವೇಶಕ್ಕೆ ಮೈಸೂರಿಂದ ಮೋದಿ ಸ್ಪೀಚ್        ಮುಂದುವರಿದ ಪಿಎನ್‌ಬಿ ಬ್ಯಾಂಕ್‌ ಹಗರಣ ಬೇಟೆ - ಬೆಂಗಳೂರಿನ ಹಲವೆಡೆ ಇಡಿ ದಾಳಿ - ನೀರವ್ ಡೈಮಂಡ್ಸ್ ಮಳಿಗೆಗಳಲ್ಲಿ ಶೋಧ        ಕೆ.ಆರ್‌ ಆಸ್ಪತ್ರೆಗೆ ಕೆ.ಎಸ್‌ ಪುಟ್ಟಣ್ಣಯ್ಯ ಪಾರ್ಥಿವ ಶರೀರ ರವಾನೆ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ       
Breaking News

ಸಮರ್ಥ ಭಾರತ ಕಲ್ಯಾಣಕ್ಕೆ ಧರ್ಮ ಸಂಸತ್ತಿನಿಂದ ಕ್ರಾಂತಿ

Sunday, 13.08.2017, 3:00 AM       No Comments

ಉಡುಪಿ: ಸಮರ್ಥ ಭಾರತದ ಕಲ್ಯಾಣಕ್ಕಾಗಿ ಧರ್ಮ ಸಂಸತ್ತಿನ ಮೂಲಕ ಬೃಹತ್ ಜಾಗೃತಿ ಮೂಡಿಸಲು ಸಂಕಲ್ಪ ತೊಡಬೇಕು ಎಂದು ಧರ್ಮ ಸಂಸತ್ತು ಸ್ವಾಗತ ಸಮಿತಿ ಅಧ್ಯಕ್ಷ, ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.

ವಿಶ್ವ ಹಿಂದು ಪರಿಷತ್ ವತಿಯಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ ನ.24, 25, 26ರಂದು ನಡೆ ಯುವ ಧರ್ಮ ಸಂಸತ್ ಅಧಿವೇಶನ ಪೂರ್ವ ಭಾವಿಯಾಗಿ ಶನಿವಾರ ಶ್ರೀ ಕೃಷ್ಣ ಮಠ ರಾಮ ವಿಠಲ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಧರ್ವಧಿಕಾರಿ, ಧರ್ಮ ಸಂಸತ್ತು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಸಮಸ್ತ ಹಿಂದು ಸಮೂಹದ ಐಕಮತ್ಯ ಸಂಕಲ್ಪವಿರಿಸಿಕೊಂಡು ನಿರೀಕ್ಷೆಗೂ ಮೀರಿ ಧರ್ಮ ಸಂಸತ್ತನ್ನು ಯಶಸ್ವಿಯಾಗಿಸೋಣ ಎಂದರು. ಧರ್ಮ ಸಂಸತ್ತಿನ ಲಾಂಛನವನ್ನು ಪರ್ಯಾಯ ಪೇಜಾವರ ಸ್ವಾಮೀಜಿ ಅನಾವರಣಗೊಳಿಸಿದರು.

ಧರ್ಮ ಸಂಸತ್ತು ಸ್ವಾಗತ ಸಮಿತಿ ಪ್ರಮುಖ, ವಿಆರ್​ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಧರ್ಮ ಸಂಸತ್ತು ಸ್ಮರಣ ಸಂಚಿಕೆ ಸಂಪಾದಕಿ ಡಾ.ಸಂಧ್ಯಾ ಪೈ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೋಹನ್ ಆಳ್ವ, ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರು, ಸಂಸ್ಕೃತಿ ಚಿಂತಕ ಏರ್ಯ ಲಕ್ಷ್ಮಿನಾರಾಯಣ ಆಳ್ವ, ಡಾ.ರಾಮನ ಗೌಡರ್ ಉಪಸ್ಥಿತರಿದ್ದರು.

ರಾಮಮಂದಿರ ಬಗ್ಗೆ ನಿರ್ಣಯ

ಆಯೋಧ್ಯೆ ರಾಮ ಮಂದಿರ ವಿಚಾರದಲ್ಲಿ ತಮ್ಮದು ಹಿಂದಿನಿಂದಲೂ ಒಂದೇ ನಿಲುವು. ಧರ್ಮ ಸಂಸತ್ತಿನಲ್ಲಿ ಎಲ್ಲ ಸಂತರು ಸೇರಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಒಂದು ಉತ್ತಮ ನಿರ್ಣಯ ಕೈಗೊಳ್ಳುತ್ತೇವೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.


ವಿಜಯವಾಣಿ, ದಿಗ್ವಿಜಯ ಸಮಾಜಮುಖಿ

ಉಡುಪಿ: ಧರ್ಮ ಸಂಸತ್ತು ಪೂರ್ವಭಾವಿ ಸ್ವಾಗತ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಶನಿವಾರ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ವಿಆರ್​ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಶ್ರೀಕೃಷ್ಣ ದೇವರ ದರ್ಶನ ಮಾಡಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ ಸುದ್ದಿವಾಹಿನಿ ಸಮಾಜಮುಖಿ ಮಾಧ್ಯಮವಾಗಿ ಮೂಡಿ ಬರುತ್ತಿದೆ ಎಂದು ಪೇಜಾವರ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ವಿಆರ್​ಎಲ್ ಮೀಡಿಯಾ ನಿರ್ದೇಶಕ, ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ಐ. ತಪಶೆಟ್ಟಿ ಜತೆಗಿದ್ದರು.

Leave a Reply

Your email address will not be published. Required fields are marked *

Back To Top