Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಸಮಂತಾ-ನಾಗಚೈತನ್ಯ ಅದ್ದೂರಿ ಆರತಕ್ಷತೆ

Tuesday, 14.11.2017, 3:02 AM       No Comments

ಕ್ಷಿಣ ಭಾರತೀಯ ಚಿತ್ರರಂಗದ ತಾರಾಜೋಡಿ ಸಮಂತಾ ರುತ್​ಪ್ರಭು ಹಾಗೂ ನಾಗಚೈತನ್ಯ ಪರಸ್ಪರ ಕೈಹಿಡಿದು ರಿಯಲ್ ಲೈಫ್​ನಲ್ಲೂ ಜೋಡಿಯಾಗಿರುವುದು ಹಳೇ ವಿಷಯ. ಕಳೆದ ತಿಂಗಳಲ್ಲಿ ಮದುವೆಯಾಗಿದ್ದ ಅವರು, ಆ ಬಳಿಕ ಮಧುಚಂದ್ರಕ್ಕಾಗಿ ಲಂಡನ್​ಗೆ ತೆರಳಿರುವುದೂ ಅಭಿಮಾನಿಗಳಿಗೆ ಗೊತ್ತಿರದ ವಿಷಯವೇನಲ್ಲ. ಹೊಸ ವಿಷಯ ಏನೆಂದರೆ ಅವರೀಗ ಅದ್ದೂರಿ ರಿಸೆಪ್ಷನ್ ಆಯೋಜಿಸಿದ್ದು, ಅದರಲ್ಲಿ ಚಿತ್ರರಂಗದ ಅತಿಗಣ್ಯರು ಆಗಮಿಸಿ, ಸಮಾರಂಭ ಮತ್ತಷ್ಟು ಕಳೆಗಟ್ಟುವಂತೆ ಮಾಡಿದ್ದಾರೆ.

ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಟ ನಾಗಾರ್ಜುನ್ ಪುತ್ರ ನಾಗಚೈತನ್ಯ ವಿವಾಹ ನಟಿ ಸಮಂತಾ ಜತೆ ಅ. 6 ಮತ್ತು 7ರಂದು ಗೋವಾದಲ್ಲಿ ನೆರವೇರಿತ್ತು. ಹಿಂದೂ ಹಾಗೂ ಕ್ರೖೆಸ್ತ ಸಂಪ್ರದಾಯ ಪ್ರಕಾರ ಈ ಮದುವೆ ನಡೆದಿದ್ದು, ಆ ಬಳಿಕ ನವವಿವಾಹಿತರು ಲಂಡನ್​ಗೆ ತೆರಳಿ ಮಧುಚಂದ್ರ ಆಚರಿಸಿಕೊಂಡಿದ್ದರು. ಬಳಿಕ ವಾಪಸಾಗಿದ್ದ ಈ ಜೋಡಿ, ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿತ್ತು. ಇದೀಗ ಬಿಡುವು ಮಾಡಿಕೊಂಡು ಹೈದರಾಬಾದ್​ನಲ್ಲಿ ಅದ್ದೂರಿ ರಿಸೆಪ್ಷನ್ ನೀಡಿದ್ದಾರೆ.

ನಾಗಾರ್ಜುನ-ಅಮಲಾ ಸೇರಿ ಅಕ್ಕಿನೇನಿ ಕುಟುಂಬದ ಸದಸ್ಯರ ಜತೆಗೆ ಮೆಗಾಸ್ಟಾರ್ ಚಿರಂಜೀವಿ, ಖ್ಯಾತ ನಿರ್ದೇಶಕ ರಾಜಮೌಳಿ, ಚಿತ್ರರಂಗದ ಗಣ್ಯರಾದ ರಾಮ್ ಚರಣ್, ವೆಂಕಟೇಶ್ ದಗ್ಗುಬಾಟಿ, ಅಲ್ಲು ಅರ್ಜುನ್, ವರುಣ್ ತೇಜ್, ರಾಕುಲ್ ಪ್ರೀತ್ ಮುಂತಾದವರು ಉಪಸ್ಥಿತರಿದ್ದು, ಶುಭ ಕೋರಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top