Sunday, 18th February 2018  

Vijayavani

ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಕೇಸ್ - ಪ್ರಕರಣ ಸಂಬಂಧ ಐವರು ಅರೆಸ್ಟ್ - ಮಹಮ್ಮದ್‌ ಬಂಧನ ಯಾವಾಗ?        ಮಕ್ಕಳಂದ್ರೆ ಹಿಂಗೆ ಬೆಳಸ್ಪೇಕು ನೋಡಿ - ಹ್ಯಾರಿಸ್‌ ಪುತ್ರನನ್ನು ಹೊಗಳಿದ್ದ ಪ್ರಕಾಶ್ ರೈ - ಘಟನೆ ಬಳಿಕ ಉಲ್ಟಾ ಹೊಡೆದ ನಟ.        ವಿಂದ್ಯಗಿರಿಯಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ - ನಾಳೆ ಮೋದಿಯಿಂದ ಜೈನಮುನಿಗಳಿಗೆ ನಮನ - ಶ್ರವಣಬೆಳಗೊಳದಲ್ಲಿ ಬಿಗಿ ಬಂದೋಬಸ್ತ್.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.       
Breaking News

ಸದ್ಯದ ಋಣಾತ್ಮಕ ಪ್ರಭಾವಗಳು

Monday, 21.11.2016, 10:53 AM       No Comments

ಕಪ್ಪುಹಣ, ಭ್ರಷ್ಟಾಚಾರ ಮತ್ತು ನಕಲಿ ನೋಟುಗಳ ನಿಯಂತ್ರಣ ಮತ್ತು ಉಗ್ರಸಂಘಟನೆಗಳಿಗೆ ಹಣ ವರ್ಗಾವಣೆಯಾಗುವುದನ್ನು ತಡೆಯಲು ಅಧಿಕ ಮುಖಬೆಲೆಯ ನೋಟು ಚಲಾವಣೆ ಸ್ಥಗಿತದಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಬುದ್ಧಿವಂತಿಕೆ ಮತ್ತು ಸರಿಯಾದ ಯೋಜನೆ ಇರಬೇಕು ನಿಜ. ಆದರೆ ಇದರಿಂದ ಆರ್ಥಿಕ ಕ್ಷೇತ್ರದ ಮೇಲೆ ಬೀಳುವ ಪ್ರಭಾವದ ಅರಿವಿದೆಯೇ? ಹೆಚ್ಚಿನವರು ಇದನ್ನು ಅಲ್ಪಾವಧಿಗೆ ನಷ್ಟದಾಯಕ ಮತ್ತು ದೀರ್ಘಾವಧಿಗೆ ಪ್ರಯೋಜನದ ನಿರ್ಧಾರ ಎಂದು ಪರಿಗಣಿಸುತ್ತಾರೆ. ಆದರೆ ಇದು ನಿಜವೇ? ಈ ನಿರ್ಧಾರದಿಂದ ಭಾರತದ ಉದ್ಯಮ ಕ್ಷೇತ್ರ ಪ್ರಭಾವಿತವಾಗಿದೆ. ದೇಶದ ಜಿಡಿಪಿ ಸದ್ಯ ಶೇ.7.5ರಷ್ಟಿದ್ದು, ಇದು ಶೇ.6ರ ಹಂತಕ್ಕಿಳಿಯುವ ಸಾಧ್ಯತೆಯಿದೆ. ಮುಂದಿನ ಎರಡು ತ್ರೖೆಮಾಸಿಕ ಅವಧಿಯಲ್ಲಿ ಕಾಪೋರೇಟ್ ಕ್ಷೇತ್ರದ ಗಳಿಕೆ ಕೂಡಾ ಭಾರಿ ಇಳಿಕೆಯಾಗಲಿದೆ ಎನ್ನುವ ಕಳವಳವಿದೆ. ಇದರ ಜತೆಗೆ ತೆರಿಗೆಯಿಂದ ಬರುವ ಒಟ್ಟು ಆದಾಯದ ಶೇ.70ರಷ್ಟಿರುವ ಪರೋಕ್ಷ ತೆರಿಗೆ ಪ್ರಮಾಣವೂ ಕುಸಿಯಲಿದೆ. ಇದಕ್ಕೆ ಪ್ರಮುಖ ಕಾರಣ ಉದ್ಯಮ ಕ್ಷೇತ್ರದಲ್ಲಾಗುತ್ತಿರುವ ಇಳಿಕೆ ಮತ್ತು ಜನರ ಖರೀದಿ ಪ್ರಮಾಣ ಕುಗ್ಗಿರುವುದು. ರಾಜಕೀಯವಾಗಿ ನೋಡಿದರೆ ಮೋದಿಯವರ ನಿರ್ಧಾರ ದೊಡ್ಡದೆ ಆದರೆ ಅವರು ಆರ್ಥಿಕ ಕ್ಷೇತ್ರದ ಬಗ್ಗೆಯೂ ಚಿಂತನೆ ನಡೆಸುತ್ತಾರೆಯೇ. ಕುಸಿಯುತ್ತಿರುವ ಆರ್ಥಿಕತೆಯನ್ನು ಎತ್ತಿ ನಿಲ್ಲಿಸಲು ಕ್ರಮ ಕೈಗೊಳ್ಳುತ್ತಾರೆಯೇ? ರಿಯಲ್ ಎಸ್ಟೇಟ್, ಚಿನ್ನ, ಬಾಂಡ್ಗಳು, ಬ್ಯಾಂಕ್ ಠೇವಣಿ ಮತ್ತು ಷೇರು ಮಾರುಕಟ್ಟೆಗಳಲ್ಲಿ ಅಲ್ಪಾವಧಿಯ ಇಳಿಕೆ ಕಂಡುಬಂದಿದೆ. ಇದು ಆರ್ಥಿಕ ಕ್ಷೇತ್ರ ಕುಸಿಯುತ್ತಿರುವುದರ ಪ್ರತೀಕ. ವಿದೇಶಿ ಹೂಡಿಕೆದಾರರು ಕೂಡಾ ಹೂಡಿಕೆ ಹಿಂಪಡೆಯುತ್ತಿದ್ದಾರೆ. ಇನ್ನು ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.

ಹಣದುಬ್ಬರ ಕುಸಿತ ಮತ್ತು ಬಡ್ಡಿದರ ಇಳಿಕೆಗಳು ನೋಟು ಚಲಾವಣೆ ಸ್ಥಗಿತಗೊಳಿಸಿದ್ದರ ಧನಾತ್ಮಕ ಪ್ರಭಾವವೇ. ಆದರೆ, ಉದ್ಯಮ ಕ್ಷೇತ್ರ ಸಂಪದ್ಭರಿತವಾಗಿದ್ದಗಲಷ್ಟೇ ಕಡಿಮೆ ಬಡ್ಡಿದರಕ್ಕೆ ಸಾಲವನ್ನು ಪಡೆದುಕೊಳ್ಳಲು ಸಾಧ್ಯವೇ ಹೊರತು, ಇಂತಹ ಆರ್ಥಿಕ ಹಿಂಜರಿತ ಇರುವಾಗ ಅಂತಹ ಸಾಹಸ ಸಾಧ್ಯವೇ ಇಲ್ಲ. ಅಲ್ಲದೇ, ಐಷಾರಾಮಿ ವೆಚ್ಚ ಕಡಿತ, ನಗದು ವಹಿವಾಟು ಕಡಿಮೆಯಾದ ಈ ಸಂದರ್ಭದಲ್ಲಿ ಹೆಚ್ಚಿನ ತೆರಿಗೆ ಹೊರೆಯು ಈಗಾಗಲೇ ಆಗಿರುವಂತಹ ಗಾಯದ ಮೇಲೆ ಉಪ್ಪು ಸವರಿದಂತಾಗಲಿದೆ.

ಷೇರು ಮಾರುಕಟ್ಟೆಯಲ್ಲಿ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳಿಂದ ಹೂಡಿಕೆದಾರರು ದೂರವುಳಿಯುವುದು ಒಳಿತು. ಸದ್ಯ ಐಟಿ, ಬ್ಯಾಂಕ್ ಮತ್ತು ಫಾರ್ವ ಕ್ಷೇತ್ರ ಬಲವಾಗಿದೆ. ಆರ್ಬಿಐ ಯಾವತ್ತು ಬೇಕಾದರೂ ಬಡ್ಡಿದರ ಇಳಿಕೆ ಬಗ್ಗೆ ಘೊಷಿಸುವ ಸಾಧ್ಯತೆಯಿದ್ದು, ಉದ್ಯಮಿಗಳು ಎಚ್ಚರದಿಂದಿರಬೇಕು. ಇನ್ನಾದರೂ ಮೋದಿ ಆರ್ಥಿಕ ಕ್ಷೇತ್ರದ ಏರಿಕೆ ಹಿನ್ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಒಳಿತು. ಆಗಲೇ ಅವರು ಕೈಗೊಂಡ ನಿರ್ಧಾರ ನೈಜ ಯಶಸ್ಸು ಸಾಧಿಸಲು ಸಾಧ್ಯ.

Leave a Reply

Your email address will not be published. Required fields are marked *

Back To Top