Thursday, 24th August 2017  

Vijayavani

1. ಹಾವೇರಿಯಲ್ಲಿ ಇಂಜೆಕ್ಷನ್‌ ಬಳಿಕ ರೋಗಿ ಸಾವು- ಆಸ್ಪತ್ರೆ ಮುಂದೆ ಪೋಷಕರ ಪ್ರತಿಭಟನೆ- ಸಾವಿನ ಇಂಜೆಕ್ಷನ್‌ ಅಂತಾ ಆರೋಪ 2. ಡಿವೈಎಸ್‌ಪಿ ಗಣಪತಿ ಸಾವು ಪ್ರಕರಣ- ಗಣಪತಿ ಆತ್ಮಹತ್ಯೆ ವೇಳೆ ನನಗೆ ಯಾವುದೇ ಕರೆ ಬಂದಿಲ್ಲ- ಕಾಲ್‌ಡಿಟೆಲ್ಸ್‌ ಡಿಲೀಟ್‌ ಬಗ್ಗೆ ಶಾಸಕ ವಿನಯ್ ಕುಮಾರ್ ಸೊರಕೆ ಪ್ರತಿಕ್ರಿಯೆ 3. ಕೋಲಾರದಲ್ಲಿ ಮಕ್ಕಳ ಸಾವು ಪ್ರಕರಣ- ಆಸ್ಪತ್ರೆಗೆ ಬಿಜೆಪಿ ಸತ್ಯ ಶೋಧನ ಸಮಿತಿ ಭೇಟಿ- ಜಿಲ್ಲೆಗೆ ಇದು ಶೋಭೆಯಲ್ಲ ಎಂದ ಮಾಜಿ ಸಚಿವ ಸುರೇಶ್​ ಕುಮಾರ್​​​ 4. ಮತ್ತೆ ಒಂದಾದ ಸುದೀಪ್​​​​ ದಂಪತಿ- ಪ್ರಿಯಾ-ಸುದೀಪ್​​​​​​​​​​​​​​​​​​​​​ಗೆ ಕಲಾವಿದರ ಶುಭಾಶಯ- ನೂರ್ಕಾಲ ಬಾಳಲಿ ಎಂದ ಜಗ್ಗೇಶ್​​​​​​​ 5. ಬಿಡುಗಡೆಯಾಯ್ತು 200ರ ಹೊಸ ನೋಟು- ನಾಳೆಯಿಂದಲೇ ಬ್ಯಾಂಕ್​​​​​​​​​​​​​​​​​​​​​​​​​​​​​​​​​​ಗಳಿಗೆ ಪೂರೈಕೆ- ಆರ್​​​​​​​ಬಿಐನಿಂದ ಪ್ರಕಟಣೆ
Breaking News :

ಸಚಿವತ್ರಯರ ಹೆಲಿಕಾಪ್ಟರ್ ಯಾನಕ್ಕೆ ಮಳೆ ಅಡ್ಡಿ

Friday, 21.04.2017, 3:00 AM       No Comments

ಮೈಸೂರು: ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಗುರುವಾರ ಸಂಜೆ ಮೂವರು ಸಚಿವರನ್ನು ಬೆಂಗಳೂರಿಗೆ ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಮಳೆಯ ಕಾರಣಕ್ಕೆ ದಿಢೀರ್ ನಿಲ್ದಾಣಕ್ಕೆ ವಾಪಸ್ ಬಂದಿಳಿದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ ಮುಗಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ ಮತ್ತು ಜಯಚಂದ್ರ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿದ್ದರು. ಬಳಿಕ, ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ನೋಡಲು ಸಿಎಂ ತೆರಳಿದರು.

ಇತ್ತ ಮೂವರು ಸಚಿವರು ಬೆಂಗಳೂರಿಗೆ ಹೆಲಿಕಾಪ್ಟರ್​ನಲ್ಲಿ ಪ್ರಯಾಣ ಮುಂದುವರೆೆಸಿದರು. ಆದರೆ, ಹೆಲಿಕಾಪ್ಟರ್ ತುಸು ದೂರ ಹಾರಾಟ ನಡೆಸುತ್ತಿದ್ದಂತೆ ಮಳೆ ಪ್ರಾರಂಭವಾಗಿದೆ. ಹೀಗಾಗಿ ತಕ್ಷಣವೇ ಹೆಲಿಕಾಪ್ಟರ್ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಮಿಸಿತು. ನಿಲ್ದಾಣದಲ್ಲಿಯೇ ಕೆಲ ಹೊತ್ತು ವಿಶ್ರಾಂತಿ ಪಡೆದ ಸಚಿವರು ರಾತ್ರಿ ರಸ್ತೆ ಮೂಲಕ ಬೆಂಗಳೂರಿಗೆ ತೆರಳಿದರು.


ಬಿರುಗಾಳಿ ಮಳೆಗೆ ಇಬ್ಬರು ಬಲಿ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಗುಡುಗು ಸಹಿತ ಬಿರುಗಾಳಿ ಮಳೆ ಅಬ್ಬರಿಸಿದ್ದು, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಬೆಟ್ಟದಹಳ್ಳಿ ಗೇಟ್ ಮಣಿಪುರದಲ್ಲಿ ಗಾಳಿ ರಭಸಕ್ಕೆ ಆಲದ ಮರದ ಬೃಹತ್ ಕೊಂಬೆಯೊಂದು ಕಾರಿನ ಮೇಲೆ ಬಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ, ಪಾವಗಡದವರಾದ ಕಾರು ಚಾಲಕ ಜಯಸಿಂಹ (35) ಸ್ನೇಹಿತ ಪದ್ದು (30) ಮೃತರು. ಒಮ್ನಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಜಯಸಿಂಹ ಪತ್ನಿ ಶಿವರತ್ನ, ಹದಿನೈದು ದಿನದ ಮಗು ಹಾಗೂ ನಾದಿನಿ ಶೋಭಾ ಪಾರಾಗಿದ್ದಾರೆ.

ಉತ್ತಮ ವರ್ಷಧಾರೆ: ಮಂಡ್ಯ ಮತ್ತು ಮೈಸೂರು ನಗರ ಸೇರಿ ಜಿಲ್ಲೆಗಳ ವಿವಿಧೆಡೆ ಗುರುವಾರ ಸಂಜೆ ಧಾರಾಕಾರ ಮಳೆ ಸುರಿದಿದೆ. ಮಂಡ್ಯ ತಾಲೂಕಿನ ಬಸರಾಳು ಸುತ್ತಮುತ್ತ ಮುಕ್ಕಾಲು ಗಂಟೆ ಆಲಿಕಲ್ಲು ಮಳೆ ಸುರಿದಿದ್ದು, ಮೈಸೂರಿನ ಕೆಲವೆಡೆ ಮರಗಳ ಕೊಂಬೆಗಳು ಮುರಿದುಬಿದ್ದು, ಸಂಚಾರಕ್ಕೆ ಅಡ್ಡಿಯಾಯಿತು. ಇನ್ನು ದಕ್ಷಿಣ ಕನ್ನಡ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು, ಬಂಟ್ವಾಳ ಭಾಗ ಹಾಗೂ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ತುಮಕೂರು, ರಾಮನಗರಗಳಲ್ಲೂ ಗುರುವಾರ ಸಂಜೆ ವರ್ಷಧಾರೆಯಾಗಿದೆ. ಕಲಬುರಗಿಯಲ್ಲಿ ಬಿಸಿಲು ಬೆಂಕಿಯಂತಾಗಿದೆ.

ಬಿಸಿಲಿಗೆ ವ್ಯಕ್ತಿ ಬಲಿ: ಕುರುಗೋಡು(ಬಳ್ಳಾರಿ): ಸಿಂಧಿಗೇರಿ ಗ್ರಾಮದ ರಸ್ತೆಯಲ್ಲಿ ಕುಡಿವ ನೀರಿನ ಕೆರೆ ದಂಡೆಗೆ ಮೀನು ಹಿಡಿಯಲು ಹೋಗಿದ್ದ ಪಟ್ಟಣದ ನಿವಾಸಿ ಜಂಗ್ಲಿ ಸಾಬ್ (40) ಬಿಸಿಲಿನ ತಾಪ ತಾಳಲಾರದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

Back To Top