Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಸಕಾಲಿಕ ಕ್ರಮ

Tuesday, 03.10.2017, 3:00 AM       No Comments

ದೇಶದ ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದು ಪರಿಭಾವಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಪದ್ಧತಿ ಜಾರಿಯಾಗಿ ಸಾಕಷ್ಟು ದಿನಗಳಾಗಿವೆ. ಸುದೀರ್ಘ ಕಾಲಾವಧಿವರೆಗೆ ಚಿಂತನ-ಮಂಥನದ ತರುವಾಯ ಜಾರಿಯಾಗಿರುವ ಮತ್ತು ಅರ್ಥಿಕ ಸುಧಾರಣೆಯ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಎಂಬ ಹೆಗ್ಗಳಿಕೆ ಹೊತ್ತಿರುವ ಜಿಎಸ್​ಟಿ ಕುರಿತು ಕೆಲವೊಂದು ವಲಯಗಳಿಂದ ಭಿನ್ನದನಿ ಅಥವಾ ಅಸಮಾಧಾನ ಹೊಮ್ಮಿರುವ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಜಿಎಸ್​ಟಿ ದರ ಇಳಿಕೆಯ ಸೂಚನೆ ನೀಡಿದ್ದಾರೆ.

ಜಿಎಸ್​ಟಿ ಅನುಸಾರ ಪ್ರಸ್ತುತ ಶೇ. 5, 12, 18 ಮತ್ತು ಶೇ. 28ರಂತೆ ನಾಲ್ಕು ಸ್ತರಗಳ ತೆರಿಗೆ ವಿಂಗಡಣೆ

ಯಾದದ್ದೇನೋ ದಿಟ. ಆದರೆ ಕೆಲವೊಂದು ವ್ಯಾವಹಾರಿಕ ವಲಯಗಳು ಈ ಹೊಸ ತೆರಿಗೆ ಪದ್ಧತಿಯಿಂದ ಸೊರಗುತ್ತಿದ್ದು ವ್ಯತಿರಿಕ್ತ ಪರಿಣಾಮಕ್ಕೆ ಒಳಗಾಗಿವೆ ಎಂಬ ಕಳವಳ ವ್ಯಕ್ತವಾಯಿತು. ಜತೆಗೆ ತೆರಿಗೆ ಸಲ್ಲಿಕೆಯ ವಿಧಿ-ವಿಧಾನಗಳಲ್ಲೂ ಕೆಲವೊಂದು ತೊಡಕುಗಳು ಕಂಡುಬಂದಿರುವುದರಿಂದ ಈ ಸಮಗ್ರ ವ್ಯವಸ್ಥೆಯನ್ನು ಮತ್ತಷ್ಟು ಪರಿಷ್ಕರಿಸಬೇಕಾದ ಹಾಗೂ ನ್ಯೂನತೆ-ರಹಿತವಾಗಿಸಬೇಕಾದ ಅಗತ್ಯದ ಕುರಿತೂ ಮಾತುಗಳು ಕೇಳಿಬಂದವೆನ್ನಬೇಕು. ಜಿಎಸ್​ಟಿ ಜಾರಿಯಾಗಿ ಮೂರು ತಿಂಗಳಷ್ಟೇ ಸಂದಿವೆ. ಆದ್ದರಿಂದ ಇದರ ಸಾಧಕ-ಬಾಧಕಗಳ ಕುರಿತಾಗಿ ‘ಇದಮಿತ್ಥಂ’ ಎಂಬ ತೀರ್ವನಕ್ಕೆ ಈಗಲೇ ಬರಲಾಗದು. ಯಾವುದೇ ವ್ಯವಸ್ಥೆ ಹೊಸದಾಗಿ ಜಾರಿಯಾದಾಗ ಇಂಥ ತೊಡಕುಗಳು ಸಹಜ; ಆದರೆ ಈ ಸಂಬಂಧವಾಗಿ ಸೂಕ್ತ ಹಿಮ್ಮಾಹಿತಿಗಳನ್ನು ಪಡೆದುಕೊಂಡು, ಸಮಸ್ಯೆಗಳನ್ನು ಅಥವಾ ತೊಡಕುಗಳನ್ನು ಕಾಲಕಾಲಕ್ಕೆ ನಿವಾರಿಸಿಕೊಂಡಲ್ಲಿ ದೂರಗಾಮಿ ಪ್ರಯೋಜನಗಳಿವೆ ಎಂಬುದನ್ನು ಅಲ್ಲಗಳೆಯಲಾಗದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಿಎಸ್​ಟಿ ದರ ಇಳಿಕೆಗೆ ಚಿಂತನೆ ನಡೆಸಿರುವುದು ನಿಜಕ್ಕೂ ಸಕಾಲಿಕ ಮತ್ತು ಸೂಕ್ತ ಕ್ರಮ ಎನ್ನಲಡ್ಡಿಯಿಲ್ಲ. ಕಾರಣ, ಸಣ್ಣ ತೆರಿಗೆ ಪಾವತಿಸುವ ಜನಸಾಮಾನ್ಯರ ಹಿತದೃಷ್ಟಿ ಇದರ ಹಿಂದಡಗಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ, ತೆರಿಗೆ ಪಾವತಿಸಲು ಅಶಕ್ತರಾದವರಿಂದ ಬಲವಂತವಾಗಿ ವಸೂಲಿ ಮಾಡುವ, ತನ್ಮೂಲಕ ಭಯಹುಟ್ಟಿಸುವ ಕ್ರಮಗಳು ಬೇಡ ಎಂಬ ಸಲಹೆಯನ್ನು ಜೇಟ್ಲಿಯವರು ಅಧಿಕಾರಿಗಳಿಗೆ ನೀಡಿರುವುದು ಶ್ಲಾಘನೀಯ ಎನ್ನಲಡ್ಡಿಯಿಲ್ಲ. ದೇಶದ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ, ವಿವಿಧ ಸೇವೆ, ಮಾರಾಟ-ಖರೀದಿ ವ್ಯವಹಾರಗಳಂಥ ಬಾಬತ್ತುಗಳಿಂದ ಸಂಗ್ರಹವಾಗುವ ತೆರಿಗೆಯೇ ಮೂಲಾಧಾರವಾಗುತ್ತದೆ. ಆದ್ದರಿಂದ ಅನ್ವಯವಾಗುವ ತೆರಿಗೆಯನ್ನು ಪಾವತಿಸಬೇಕಾದ್ದು ವ್ಯವಹಾರಸ್ಥರ ಮತ್ತು ಸಾರ್ವಜನಿಕರ ಆದ್ಯ ಕರ್ತವ್ಯವಾಗಬೇಕು. ಆದರೆ, ಶ್ರೀಮಂತರಂತೆ ನೇರತೆರಿಗೆಯ ವ್ಯಾಪ್ತಿಗೆ ಬರದ ದುರ್ಬಲ ವರ್ಗದವರು ಮತ್ತು ಜನಸಾಮಾನ್ಯರು ಪರೋಕ್ಷ ತೆರಿಗೆಯ ಭಾರವನ್ನೂ ಹೊರಬೇಕಾಗಿ ಬರುವುದರಿಂದ ದೈನಂದಿನ ಬದುಕೇ ದುಸ್ತರ ಎನ್ನುವಂಥ ಸನ್ನಿವೇಶ ನಿರ್ವಣವಾಗಬಹುದು. ಆದ್ದರಿಂದ ಶ್ರೀಸಾಮಾನ್ಯರು ಹೆಚ್ಚಾಗಿ ಬಳಸುವ ವಸ್ತು/ಸಾಮಗ್ರಿಗಳ ತೆರಿಗೆ ದರವನ್ನು ಕಡಿತಗೊಳಿಸುವುದು ಸ್ವಾಗತಾರ್ಹ ಕ್ರಮವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂಥ ಉಪಕ್ರಮ ಮಾತ್ರವಲ್ಲದೆ, ಜಿಎಸ್​ಟಿ ಪದ್ಧತಿಯ ಸಮಗ್ರ ಪರಿಶೀಲನೆ ಹಾಗೂ ಇನ್ನೂ ಉಳಿದಿರಬಹುದಾದ ಕುಂದುಕೊರತೆಗಳ ನಿವಾರಣೆಯ ನಿಟ್ಟಿನಲ್ಲೂ ಸರ್ಕಾರ ಆದ್ಯ ಗಮನ ಹರಿಸುವಂತಾಗಲಿ.

Leave a Reply

Your email address will not be published. Required fields are marked *

Back To Top