Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಸಕಾರಾತ್ಮಕ ಬೆಳವಣಿಗೆ

Wednesday, 13.12.2017, 3:03 AM       No Comments

ಸಂಸದರು ಮತ್ತು ಶಾಸಕರ ವಿರುದ್ಧ ಬಾಕಿ ಉಳಿದಿರುವ ನ್ಯಾಯಾಂಗ ವಿಚಾರಣೆಯನ್ನು ಕ್ಷಿಪ್ರಗತಿಯಲ್ಲಿ ನಡೆಸಿ ಅಂಥ ಪ್ರಕರಣಗಳಿಗೆ ರ್ತಾಕ ಅಂತ್ಯ ನೀಡಲೆಂದು 12 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಸವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಇದೊಂದು ಸಕಾರಾತ್ಮಕ ಬೆಳವಣಿಗೆ ಎನ್ನಲಡ್ಡಿಯಿಲ್ಲ. ದೇಶಾದ್ಯಂತ ವಿವಿಧ ರಾಜ್ಯಗಳ ಶಾಸಕರು ಮತ್ತು ಸಂಸದರ ವಿರುದ್ಧ ಕ್ರಮವಾಗಿ 13,500 ಮತ್ತು 1,571 ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಬಾಕಿಯಿದ್ದು, ಕೇಂದ್ರದ ಈ ತೀರ್ವನದಿಂದಾಗಿ ನ್ಯಾಯಾಂಗ ಪ್ರಕ್ರಿಯೆ ಚುರುಕಾಗಲಿರುವುದಂತೂ ದಿಟ. ಇಂಥ ಪ್ರಕರಣಗಳ ತ್ವರಿತ ವಿಚಾರಣೆಗೆಂದು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆಯೊಂದನ್ನು ರೂಪಿಸಿ, ಇದಕ್ಕೆ ಮೀಸಲಿಡಬಹುದಾದ ಹಣದ ಮೊತ್ತದ ಕುರಿತು ತಿಳಿಯಪಡಿಸುವಂತೆ ಸವೋಚ್ಚ ನ್ಯಾಯಾಲಯ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತೆಂಬುದು ಇಲ್ಲಿ ಸ್ಮರಣಾರ್ಹ.

ಎದುರಾಳಿಗಳ ಮೇಲೆ ವಿನಾಕಾರಣ ಕಳಂಕ ಹೊರಿಸುವ ಮತ್ತು ಯಾವುದೇ ಸಾಕ್ಷಿ-ಪುರಾವೆ ಅಥವಾ ಪೂರಕ ದಾಖಲೆಗಳಿಲ್ಲದೆ ಅಕ್ರಮ ಚಟುವಟಿಕೆಯ ಆರೋಪ ಹೊರಿಸುವ ಪರಿಪಾಠ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಬೇರುಬಿಟ್ಟಿದೆ. ಒಂದು ವೇಳೆ ಇಂಥ ಆಪಾದನೆಗಳಿಗೆ ಗಟ್ಟಿ ನೆಲಗಟ್ಟಿದ್ದು, ಆರೋಪಕ್ಕೊಳಗಾದವರು ನಿರ್ದಿಷ್ಟ ತಪು್ಪ-ಅಪರಾಧ-ಅಕ್ರಮವನ್ನು ಎಸಗಿದ್ದೇ ಆದಲ್ಲಿ (ಅದು ಚಿಕ್ಕದೇ ಇರಬಹುದು ಅಥವಾ ಗುರುತರವಾದದ್ದೇ ಇರಬಹುದು), ಈ ನೆಲದ ಕಾಯ್ದೆ-ಕಾನೂನಿನ ಪ್ರಕಾರ ಅನ್ವಯವಾಗುವ ದಂಡನೆಯನ್ನು ಸ್ವೀಕರಿಸಲೇಬೇಕಾಗುತ್ತದೆ. ಚಾಲ್ತಿಯಲ್ಲಿರುವ ನೀತಿ-ನಿಯಮಗಳ ಅನುಸಾರ, ನ್ಯಾಯಾಲಯದಿಂದ ‘ತಪ್ಪಿತಸ್ಥ/ಅಪರಾಧಿ’ ಎಂಬ ಹಣೆಪಟ್ಟಿ ಕಟ್ಟಿಸಿಕೊಂಡಿರುವ ಜನಪ್ರತಿನಿಧಿಗಳು 6 ವರ್ಷಗಳವರೆಗೆ ಸಾರ್ವಜನಿಕ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ ರಾಜಕೀಯ ಎದುರಾಳಿಗಳು ಮಾಡುವ ಆರೋಪಗಳ ಹಿಂದೆ ದುರುದ್ದೇಶವೇ ತುಂಬಿದ್ದು, ಜತೆಗೆ ಪ್ರಕರಣದ ವಿಚಾರಣೆ ಅನಗತ್ಯವಾಗಿ ಎಳೆಸಲ್ಪಡುವಂತಾದಲ್ಲಿ ಆಪಾದಿತರ ಸ್ಥಿತಿ ಅತಂತ್ರವಾಗುವುದರಲ್ಲಿ ಸಂದೇಹವಿಲ್ಲ. ಕಾರಣ, ಕಳಂಕದಿಂದ ಮುಕ್ತರಾಗದಿದ್ದಲ್ಲಿ ಕ್ಷೇತ್ರದ ಜನತೆಗೆ ಮುಖ ತೋರಿಸಲಾಗದೆ ಅಥವಾ ಅವರ ಸಹಜ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಆರೋಪಿತರ ರಾಜಕೀಯ ಭವಿಷ್ಯಕ್ಕೆ ಗ್ರಹಣ ಬಡಿದಂತಾಗುತ್ತದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್​ಆರ್ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಿದ್ದ ಕಲಾವಿದೆಯೊಬ್ಬರು ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದರು ಎಂಬ ಆರೋಪ ಹೊರಬೇಕಾಗಿ ಬಂದಿದ್ದು, ಈ ಪ್ರಕರಣದ ವಿಚಾರಣೆ ಇತ್ತೀಚಿನವರೆಗೂ ಎಳೆಸಿಕೊಂಡು ಬಂದಿದ್ದು, ತನ್ಮೂಲಕ ನಿರ್ಣಾಯಕ ಸಂದೇಶ ಹೊರಹೊಮ್ಮದಂತಾಗಿರುವುದು ಈ ನಿಟ್ಟಿನಲ್ಲೊಂದು ಪುಟ್ಟ ಉದಾಹರಣೆಯಾದೀತು.

ಇನ್ನು, ನ್ಯಾಯಾಲಯದ ವಿಚಾರಣಾಪರ್ವ ಸುದೀರ್ಘಕಾಲದವರೆಗೆ ಎಳೆಸಲ್ಪಟ್ಟ ಕಾರಣದಿಂದಾಗಿ ಆಪಾದಿತನೊಬ್ಬ ಅಪರಾಧಿಯೋ ನಿರಪರಾಧಿಯೋ ಎಂಬುದು ನಿರ್ಧಾರವಾಗದೆ ಅತಂತ್ರ ಸ್ಥಿತಿ ನಿರ್ವಣವಾದಂಥ ಹಲವು ನಿದರ್ಶನಗಳಿದ್ದು, ಬಹುಕೋಟಿ ರೂ. ಮೇವು ಹಗರಣದಲ್ಲಿ ಕಳಂಕಿತರೆನಿಸಿದ ಲಾಲು ಪ್ರಸಾದ್ ಯಾದವ್ ಪ್ರಕರಣ ಇದಕ್ಕೊಂದು ಉದಾಹರಣೆಯಾಗಿದೆ. ಅದರ ಬದಲು, ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳು ಕ್ಷಿಪ್ರವಾಗಿ ಇತ್ಯರ್ಥವಾಗುವಂತಾದಲ್ಲಿ, ಆಪಾದಿತರು ಮಾತ್ರವಲ್ಲದೆ ಅವರು ಪ್ರತಿನಿಧಿಸುವ ರಾಜಕೀಯ ಪಕ್ಷ ಹಾಗೂ ಚುನಾವಣಾ ಕ್ಷೇತ್ರದ ಮತದಾರರಿಗೆ ಸ್ಪಷ್ಟ ಸಂದೇಶ ರವಾನೆಯಾದಂತಾಗುತ್ತದೆ. ಜತೆಗೆ, ಪ್ರಕರಣವೊಂದರ ವಿಚಾರಣೆ ಸುದೀರ್ಘ ಕಾಲದವರೆಗೆ ಎಳೆಸುವುದರಿಂದ ವ್ಯವಸ್ಥೆಗೆ ಆಗುವ ಅತಿರೇಕದ ಖರ್ಚಿಗೂ ಕಡಿವಾಣ ಬಿದ್ದಂತಾಗುತ್ತದೆ. ನಮ್ಮ ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಿಸಲು, ತನ್ಮೂಲಕ ಪ್ರಜಾಪ್ರಭುತ್ವಕ್ಕೊಂದು ಆರೋಗ್ಯಕರ ಆಯಾಮ ನೀಡಲು ಇಂಥ ಹಲವು ಉಪಕ್ರಮಗಳಿಗೆ ಮುಂದಾಗಬೇಕಿದೆ. ಆದ್ಯತಾನುಸಾರ ಅವಕ್ಕೆ ಚಾಲನೆ ಸಿಗಲಿ ಎಂಬುದು ಪ್ರಜ್ಞಾವಂತರ ಆಶಯ.

Leave a Reply

Your email address will not be published. Required fields are marked *

Back To Top