Thursday, 20th September 2018  

Vijayavani

Breaking News

ಸಂಶಿಯಲ್ಲಿ ಮುಸ್ಲಿಂ ಕುಟುಂಬದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ

Saturday, 15.09.2018, 2:03 AM       No Comments

ಕುಂದಗೋಳ: ಆ ಮನೆಯಲ್ಲಿ ಇಷ್ಟು ದಿನ ಅಲ್ಲಾನ ನಾಮಸ್ಮರಣೆ ಕೇಳಿಬರುತ್ತಿತ್ತು. ಆದರೀಗ ಅಲ್ಲಾನ ಜತೆಗೆ ವಿಘ್ನನಿವಾರಕ ಗಣಪನ ನಾಮಸ್ಮರಣೆಯೂ ಕೇಳಿಬರುತ್ತಿದೆ. ತಾಲೂಕಿನ ಹಿಂದು-ಮುಸ್ಲಿಂ ಭಾವೈಕ್ಯದ ಊರು ಸಂಶಿ ಗ್ರಾಮದಲ್ಲಿ ಗ್ರಾ.ಪಂ. ಸದಸ್ಯೆ ಮನ್ನಾಬಿ ಮೌಲಾಸಾಬ ಜಮಾಲಖಾನವರ ತಮ್ಮ ಮನೆಯಲ್ಲಿ ಮೂರು ವರ್ಷಗಳಿಂದ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಈ ಮುಸ್ಲಿಂ ಕುಟುಂಬದಲ್ಲಿ ಗಣಪತಿ ಆರಾಧಿಸುವುದಕ್ಕೆ ಕಾರಣವೂ ಇದೆ. 23 ವರ್ಷಗಳ ಹಿಂದೆ ಮೌಲಾಸಾಬ ಹಾಗೂ ಮನ್ನಾಬಿ ದಂಪತಿಗೆ ಗಣೇಶ ಚತುರ್ಥಿಯ ದಿನವೇ ಪುತ್ರ ಹಸನಸಾಬ ಜನಿಸಿದ. ಆಗಿನಿಂದ ಕುಟುಂಬಸ್ಥರು ಗ್ರಾಮದಲ್ಲಿ ಗಣೇಶ ಉತ್ಸವ ಸಮಿತಿಗಳು ಪ್ರತಿಷ್ಠಾಪಿಸಿದ ಗಣಪತಿಗಳಿಗೆ ಎಣ್ಣೆ, ಭತ್ತಿ, ಹೂ- ಹಣ್ಣು ಸೇರಿ ವಿವಿಧ ಭಕ್ತಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ. 3 ವರ್ಷದ ಹಿಂದೆ ಗಣೇಶ ಹಬ್ಬದ ದಿನ ಇವರ ಮನೆ ಬಾಗಿಲಲ್ಲಿ ಅಪರಿಚಿತರು ಗಣೇಶ ಮೂರ್ತಿ ಇಟ್ಟು ಹೋಗಿದ್ದಾರೆ. ಈ ಕುರಿತು ಜಂಗಮರ ಬಳಿ ವಿಚಾರಿಸಿದಾಗ ಗಣಪತಿ ಮತ್ತೆ ನಿಮ್ಮ ಮನೆಗೆ ಬಂದಿದ್ದಾನೆ. ಒಳಗೆ ಕರೆದುಕೊಂಡು ಪೂಜಿಸಿ ಎಂದು ತಿಳಿಸಿದ್ದಾರೆ. ಅಂದಿನಿಂದ ಮನೆಯಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದೇವೆ ಎಂದು ಹಸನಸಾಬ ಹೇಳುತ್ತಾರೆ.

Leave a Reply

Your email address will not be published. Required fields are marked *

Back To Top