Thursday, 25th May 2017  

Vijayavani

1. ಬೆಳಗಾವಿಯಲ್ಲಿ ಎಂಇಎಸ್​ ಪ್ರತಿಭಟನಾ ರ್ಯಾಲಿ ಹಿನ್ನೆಲೆ- ಡಿಸಿ ಆದೇಶಕ್ಕೆ ಹೆದರಿ ಮಹಾರಾಷ್ಟ್ರ ಸಚಿವ ವಾಪಸ್​​​​- ಕುಂದಾನಗರಿಯಲ್ಲಿ ಬಿಗಿ ​ ಬಂದೋಬಸ್ತ್​​​​ 2. ಡಿಸೆಂಬರ್​ ಆದ್ರೂ ಓಕೆ, ಮಾರ್ಚ್ ಆದ್ರೂ ಓಕೆ- ಸಿಎಂ ಯಾವಾಗ್ಬೇಕಾದ್ರೂ ಚುನಾವಣೆ ನಡೆಸ್ಲಿ- 224 ಕ್ಷೇತ್ರದಲ್ಲೂ ಸ್ಪರ್ಧೆ ಅಂದ್ರು ದೇವೇಗೌಡ 3. ವಿವಿಧ ಬೇಡಿಕೆಗೆ ಆಗ್ರಹಿಸಿ ಪೊರಕೆ ಹಿಸಿದು ಪ್ರೊಟೆಸ್ಟ್​- ಬಿಬಿಎಂಪಿ ಎದುರು ಪೌರಕಾರ್ಮಿಕರ ಧರಣಿ- ಕೂಡಲೇ ಕೆಲಸ ಖಾಯಂಗೆ ಆಗ್ರಹ 4. ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಮುಂದುವರಿಸಿ- ಕಾಂಗ್ರೆಸ್ ಉಸ್ತುವಾರಿಗೆ ನಟಿ ಭಾವನಾ ಮನವಿ- ಮರುಮಾತಾಡದ ವೇಣುಗೋಪಾಲ್ 5. ಆದಿಚುಂಚನಗಿರಿಯಲ್ಲಿ ಮಾಜಿ ಸಿಎಂ ಅಮಾವಾಸ್ಯೆ ಪೂಜೆ- ಕಾಲಭೈರವೇಶ್ವರ, ಕ್ಷೇತ್ರಾದಿ ದೇವತೆಗಳಿಗೆ ನಮನ- ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ
Breaking News :

ಸಂಬಂಧಗಳ ಸುತ್ತ ಹಾಫ್ ಗರ್ಲ್​ಫ್ರೆಂಡ್

Friday, 19.05.2017, 3:03 AM       No Comments

‘ಕಾರು.. ಬಂಗಲೆ.. ಒಳ್ಳೊಳ್ಳೆಯ ಬಟ್ಟೆ.. ಏನಂದ್ರೆ ಏನೂ ತೊಂದರೆ ಇಲ್ಲದ ಜೀವನ ರಿಯಾಳದ್ದು. ಕಲಿಯುತ್ತಿರುವ ಕಾಲೇಜಿನಲ್ಲಿ ಶ್ರೀಮಂತ ವಿದ್ಯಾರ್ಥಿನಿ ಆಕೆಯೇ. ರಿಯಾಳ ಫ್ರೆಂಡ್ಸ್, ‘ಅವಳ ಹತ್ತಿರ ಎಲ್ಲ ಇದೆ, ಅವಳಿಗೇನು ಚಿಂತೆ, ಬಿಡು..’ ಎನ್ನುತ್ತಿರುತ್ತಾರೆ. ಆದರೆ ಇದೆಲ್ಲ ರಿಯಾಳ ವಾಸ್ತವ ಬದುಕಿಗೆ ಬೇಡವಾಗಿರುತ್ತದೆ. ಸಣ್ಣ ಸಣ್ಣ ಸಂತೋಷಗಳೇ ಆಕೆಯ ಜೀವಾಳವಾಗಿರುತ್ತವೆ. ಮೇಲ್ನೋಟಕ್ಕೆ ಮಾತ್ರ ಆಕೆ ಸಿರಿವಂತ ಕುಟುಂಬದ ಹುಡುಗಿಯಾಗಿರುತ್ತಾಳೆ’- ಹೀಗೆ ಒಂದೇ ಎಳೆಯಲ್ಲಿ ‘ಹಾಫ್ ಗರ್ಲ್​ಫ್ರೆಂಡ್’ ಚಿತ್ರದ ಕಥಾವಸ್ತುವನ್ನು ಬಿಟ್ಟುಕೊಟ್ಟಿದ್ದಾರೆ ನಟಿ ಶ್ರದ್ಧಾ ಕಪೂರ್. ಚೇತನ್ ಭಗತ್ ಅವರ ‘ಹಾಫ್ ಗರ್ಲ್​ಫ್ರೆಂಡ್’ ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿ ಸಿದ್ಧಗೊಂಡಿರುವ ಸಿನಿಮಾ ಇದು. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಶ್ರದ್ಧಾ ಕಪೂರ್ ಹಾಗೂ ಅರ್ಜುನ್ ಕಪೂರ್ ಇದ್ದಾರೆ. ಹಾಡು, ಟ್ರೖೆಲರ್ ಮೂಲಕವೇ ಸಹಜ ಕುತೂಹಲ ಮೂಡಿಸಿರುವ ಈ ಸಿನಿಮಾ ಇಂದು (ಮೇ 19) ತೆರೆ ಕಾಣುತ್ತಿದೆ.

ಇನ್ನು ಈ ಹಿಂದೆ ಚೇತನ್ ಭಗತ್ ಅವರ ‘2 ಸ್ಟೇಟ್ಸ್’ ಚಿತ್ರದಲ್ಲಿ ಪಂಜಾಬಿಯಾಗಿದ್ದ ಅರ್ಜುನ್ ಕಪೂರ್ ಈ ಚಿತ್ರದಲ್ಲಿ ಬಿಹಾರಿ ಮೂಲದವರಾಗಿದ್ದಾರೆ. ಇಂಗ್ಲಿಷ್ ಬಾರದೆ ಆತ ತೊಳಲಾಡುವ ಪರಿಯನ್ನು ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ಜತೆಗೆ ಸಿನಿಮಾ ಬಗ್ಗೆಯೂ ಅರ್ಜುನ್ ಕಪೂರ್ ಮಾತನಾಡಿದ್ದಾರೆ. ‘ಜೀವನದಲ್ಲಿ ಸುಮಾರು ಸಂಬಂಧಗಳಿಗೆ ನಾವು ಅಂಟಿಕೊಂಡಿರುತ್ತೇವೆ. ಅದರಲ್ಲಿ ಕೆಲವು ಕಳಚಿ ಹೋಗಿರುತ್ತವೆ ಅಥವಾ ನಾವೇ ಬೇಡ ಎಂದು ಕಳಚಿಕೊಂಡಿದ್ದೂ ಇರುತ್ತವೆ. ಇನ್ನು ಕೆಲವು ಸಂಬಂಧಗಳು ಪೂರ್ಣಗೊಳ್ಳದೆ, ಒಂದು ಹಂತಕ್ಕೆ ತಲುಪದೆ ಬೇರೆ ಸ್ವರೂಪ ಪಡೆದುಕೊಳ್ಳುವುದೂ ಉಂಟು. ಹಾಗೆಯೇ ‘ಹಾಫ್

ಗರ್ಲ್​ಫ್ರೆಂಡ್’ ಸಿನಿಮಾ ಕೂಡ ಒಂದು ಸಂಬಂಧದ ಸುತ್ತ ಹೊರಳಾಡುವ ಕಥೆ. ಇಲ್ಲಿ ‘ಹಾಫ್ ಗರ್ಲ್​ಫ್ರೆಂಡ್’ ಎಂದರೆ ಎಲ್ಲವನ್ನೂ ಭಾವನೆಗಳ ಮೂಲಕ ಹಂಚಿಕೊಳ್ಳುವ ಮಧ್ಯವರ್ತಿ ಮಾತ್ರ’ ಎಂದಿದ್ದಾರೆ ಅರ್ಜುನ್.

 

Leave a Reply

Your email address will not be published. Required fields are marked *

Back To Top