Saturday, 26th May 2018  

Vijayavani

ರಾಮನಗರದಲ್ಲಿ ನಾಡಿಗೆ ಬಂತು ಚಿರತೆ - ರೇಷ್ಮೆ ಸಾಕಾಣಿಕಾ ಕೊಠಡಿಯಲ್ಲಿ ಸೆರೆ - ಅರಣ್ಯಇಲಾಖೆ ಅಧಿಕಾರಿಗಳಿಂದ ಆಪರೇಷನ್​​ ಚಿರತೆ        ಬಿಬಿಎಂಪಿ ರಸ್ತೆ ಕಾಮಗಾರಿ ವೇಳೆ ದುರಂತ - ಬಾಲಕನ ಮೇಲೆ ಹರಿದ ರೋಡ್​​ರೋಲರ್​​ - ಸೈಕಲ್​ ತುಳಿಯುತ್ತಿದ್ದ ಬಾಲಕ ದರ್ಮರಣ        ಕೈ​​​ ಹೈ ಕಮಾಂಡ್​ ಭೇಟಿಗೆ ನಿಗದಿಯಾಗದ ಟೈಂ - ರಾಜ್ಯ ಕಾಂಗ್ರೆಸ್​​​​ ನಾಯಕರ ದೆಹಲಿ ಪ್ರವಾಸ ಕ್ಯಾನ್ಸಲ್​​​ - ಇತ್ತ ಪ್ರಧಾನಿ ಭೇಟಿಗೆ ಸಮಯಾವಕಾಶ ಕೇಳಿದ ಸಿಎಂ        11 ದಿನವಾದ್ರೂ ಸ್ವಕ್ಷೇತ್ರದತ್ತ ಬಾರದ ಶಾಸಕರು - ನಾಯಕರ ಮನೆಗಳಿಗೆ ಬಂದ್ರು ಬೆಂಬಲಿಗರು - ಗೋಳು ಕೇಳೋರಿಲ್ಲದೆ ಜನರ ಕಂಗಾಲು        ಮೋದಿ ಸರ್ಕಾರಕ್ಕೆ ತುಂಬಿತು ನಾಲ್ಕು ವರ್ಷ - 15 ದಿನಗಳ ಕಾಲ ಬಿಜೆಪಿ ಸಂಭ್ರಮಾಚರಣೆ - ಅತ್ತ ಕಾಂಗ್ರೆಸ್​​​ನಿಂದ ವಿಶ್ವಾಸ ದಿನಾಚರಣೆ        ಗಡಿ ನುಸುಳಲು ಬಂದವರಿಗೆ ಬ್ರೇಕ್​ - ಜಮ್ಮುವಿನಲ್ಲಿ ಸೇನಾ ದಾಳಿಗೆ ಐವರು ಉಗ್ರರು ಮಟಾಷ್​​ - ಶಸ್ತ್ರಾಸ್ತ್ರಗಳು ವಶ, ಮುಂದುವರಿದ ಶೋಧ       
Breaking News

ಶ್ರುತಿ ಹೇಳಿದ ಕಾಸ್ಟಿಂಗ್ ಕೌಚ್ ಕಹಿಸತ್ಯ

Saturday, 20.01.2018, 3:05 AM       No Comments

ಬೆಂಗಳೂರು: ಚಿತ್ರರಂಗದಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಅನಿಷ್ಟದ ಬಗ್ಗೆ ಹಾಲಿವುಡ್, ಬಾಲಿವುಡ್ ಸೇರಿ ಹಲವು ಇಂಡಸ್ಟ್ರಿಯ ನಟಿಯರು ಮಾತನಾಡುತ್ತಿದ್ದಾರೆ. ಈ ವೇಳೆಗೆ ಸರಿಯಾಗಿ ಸ್ಯಾಂಡಲ್​ವುಡ್ ನಟಿ ಶ್ರುತಿ ಹರಿಹರನ್ ಕೂಡ ಧೈರ್ಯವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಅನೇಕ ಕಹಿಸತ್ಯಗಳನ್ನು ಬಹಿರಂಗ ಪಡಿಸಿದ್ದಾರೆ.

‘ಮೊದಲಿನಿಂದಲೂ ನಾನು ಈ ವಿಚಾರದಲ್ಲಿ ಪ್ರಾಮಾಣಿಕ ಅಭಿಪ್ರಾಯ ನೀಡುತ್ತ ಬಂದಿದ್ದೇನೆ. ಕಾಸ್ಟಿಂಗ್ ಕೌಚ್ ಅನುಭವ ನನಗೂ ಆಗಿದೆ. ನಾನು 18 ವರ್ಷದವಳಿದ್ದಾಗ, ಮೊದಲ ಕನ್ನಡ ಚಿತ್ರದ ಮೀಟಿಂಗ್​ಗಾಗಿ ತೆರಳಿದ್ದೆ. ಆಗ ನನಗೆ ಕೆಟ್ಟ ಅನುಭವ ಆಯಿತು. ಎಷ್ಟರಮಟ್ಟಿಗೆಂದರೆ ಅಂದು ನಾನು ಅಳುತ್ತ ಹೊರಬರಬೇಕಾಯಿತು’ ಎನ್ನುವ ಶ್ರುತಿ, ಕಡೆಗೆ ಆ ಚಿತ್ರವನ್ನು ಒಪ್ಪಿಕೊಳ್ಳಲಿಲ್ಲವಂತೆ. ಅವರಿಗೆ ಅದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಎದುರಾಗಿದ್ದು ತಮಿಳು ಚಿತ್ರರಂಗದಲ್ಲಿ. ಶ್ರುತಿ ಕನ್ನಡದಲ್ಲಿ ನಟಿಸಿದ ಸೂಪರ್ ಹಿಟ್ ಚಿತ್ರವೊಂದರ ರಿಮೇಕ್ ಹಕ್ಕನ್ನು ಕಾಲಿವುಡ್​ನ ಖ್ಯಾತ ನಿರ್ಮಾಪಕರೊಬ್ಬರು ಖರೀದಿಸಿದ್ದರು. ತಮಿಳಿನಲ್ಲಿಯೂ ನಾಯಕಿ ಪಾತ್ರಕ್ಕಾಗಿ ಶ್ರುತಿಗೆ ಆಫರ್ ನೀಡಲಾಗಿತ್ತು. ಆದರೆ ‘ನಾವು ಐವರು ನಿರ್ಮಾಪಕರು ಇದ್ದೇವೆ. ನಮಗೆ ಬೇಕಾದಾಗೆಲ್ಲ ನಿಮ್ಮನ್ನು ಎಕ್ಸ್​ಚೇಂಜ್ ಮಾಡಿಕೊಳ್ಳುತ್ತೇವೆ’ ಎಂದು ಆ ನಿರ್ಮಾಪಕ ಬೇಡಿಕೆ ಇಟ್ಟನಂತೆ. ಇದರಿಂದ ಸಿಟ್ಟಿಗೆದ್ದ ಶ್ರುತಿ, ‘ನನ್ನ ಬಳಿ ಸದಾ ಚಪ್ಪಲಿ ಇರುತ್ತೆ. ಹೀಗೆಲ್ಲ ಮಾತನಾಡಿದರೆ ಖಂಡಿತ ಹೊಡೆಯುತ್ತೇನೆ’ ಎಂದು ಖಡಕ್ ಆಗಿಯೇ ಎಚ್ಚರಿಕೆ ನೀಡಿದರಂತೆ. ಆ ಘಟನೆ ಬಳಿಕ ಶ್ರುತಿ ಜತೆ ಕೆಲಸ ಮಾಡುವುದು ತುಂಬ ಕಷ್ಟ ಎಂಬ ಅಭಿಪ್ರಾಯ ಇಡೀ ತಮಿಳು ಇಂಡಸ್ಟ್ರಿ ತುಂಬ ಸುದ್ದಿ ಹಬ್ಬಿತಂತೆ. ಪರಿಣಾಮ, ಕಾಲಿವುಡ್​ನಲ್ಲಿ ಯಾವುದೇ ಆಫರ್​ಗಳೂ ತಮಗೆ ಸಿಗಲಿಲ್ಲ ಎಂದು ಶ್ರುತಿ ಹೇಳಿಕೊಂಡಿದ್ದಾರೆ. ಆದರೆ ಆ ನಿರ್ಮಾಪಕ ಯಾರು ಎಂಬುದನ್ನು ಅವರು ಎಲ್ಲಿಯೂ ಬಾಯಿಬಿಟ್ಟಿಲ್ಲ. ಮಹಿಳೆಯರನ್ನು ತೆರೆಮೇಲೆ ತೋರಿಸುವ ರೀತಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಶ್ರುತಿ, ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದೆ ಎಂದಿದ್ದಾರೆ.

ಇನ್ನು, ಈ ಸಂವಾದದಲ್ಲಿ ನಟಿ ಪ್ರಣೀತಾ ಸುಭಾಷ್ ಕೂಡ ಭಾಗವಹಿಸಿದ್ದರು. ಚಿತ್ರರಂಗದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮಹಿಳೆಯರು ಕೊನೇ ಹಂತದಲ್ಲಿದ್ದಾರೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ಅವರಿಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲ. ನಾಯಕಿಯರು ಕೇವಲ ಗ್ಲಾಮರ್ ದೃಷ್ಟಿಯಿಂದ ತೆರೆಮೇಲೆ ಬರುತ್ತಾರೆ ಎಂಬಂತ ಪರಿಸ್ಥಿತಿ ಇದೆ ಎಂಬುದು ಪ್ರಣೀತಾ ಅಭಿಪ್ರಾಯ. ತುಂಬ ಒಳ್ಳೆಯ ಟೀಮ್ಳ ಜತೆ ಕೆಲಸ ಮಾಡಿದ್ದರಿಂದಾಗಿ ಅವರಿಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿಲ್ಲವಂತೆ. ಆದರೆ ‘ಚಿತ್ರೋದ್ಯಮದಲ್ಲಿ ಪ್ರಭಾವಿಗಳ ವಿರುದ್ಧ ಮಾತನಾಡಿದರೆ ನಟಿಯರನ್ನು ಟಾರ್ಗೆಟ್ ಮಾಡಲಾಗುತ್ತದೆ. ಅದಕ್ಕೆ ಬಹುಭಾಷಾ ನಟಿ ಪಾರ್ವತಿ ಸಾಕ್ಷಿ’ ಎಂದಿದ್ದಾರೆ ಪ್ರಣೀತಾ.

ಘಟಾನುಘಟಿಗಳಿಗೂ ಟಾಂಗ್!

ತೆಲುಗು ಚಿತ್ರರಂಗದಲ್ಲಿನ ಘಟಾನುಘಟಿಗಳ ಬಗ್ಗೆಯೂ ವಿಮರ್ಶಾತ್ಮಕ ಚರ್ಚೆ ನಡೆಯಿತು. ‘ಬಾಹುಬಲಿ’ ಚಿತ್ರದ ಹಾಡೊಂದರಲ್ಲಿ ನಟಿ ತಮನ್ನಾ ಅವರನ್ನು ನಾಯಕ ಪ್ರಭಾಸ್ ಬಲವಂತವಾಗಿ ಸೆಳೆದುಕೊಳ್ಳುವ ದೃಶ್ಯ ಅಗತ್ಯವಿರಲಿಲ್ಲ. ಪೋರ್ಸ್ ಮಾಡಿದರೆ ಹೆಣ್ಣು ಒಲಿಯುತ್ತಾಳೆ ಎಂಬ ತಪ್ಪು ಕಲ್ಪನೆ ಇಂಥ ದೃಶ್ಯಗಳಿಂದ ಮೂಡುತ್ತದೆ. ‘ಅರ್ಜುನ್ ರೆಡ್ಡಿ’ ಚಿತ್ರದಲ್ಲಿಯೂ ನಾಯಕಿಯ ಪಾತ್ರವನ್ನು ತೀರಾ ಕೆಟ್ಟದಾಗಿ ಟ್ರೀಟ್ ಮಾಡಲಾಗಿದೆ. ಈ ಸಿನಿಮಾಗಳು ಸೂಪರ್ ಹಿಟ್ ಆಗಿರಬಹುದು. ಆದರೆ ಇಂಥ ಅಂಶಗಳ ಬಗ್ಗೆ ಮುಕ್ತ ಚರ್ಚೆ ಆಗಬೇಕು ಎಂಬ ಬಗ್ಗೆಯೂ ಶ್ರುತಿ ಮತ್ತು ಪ್ರಣೀತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top