Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಶ್ರೀಮನ್ನಾರಾಯಣನಿಗೆ ಕೋಟಿ ಮೌಲ್ಯದ ಸೆಟ್

Tuesday, 13.03.2018, 3:04 AM       No Comments

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಕಳೆದ ಒಂದು ವರ್ಷದಿಂದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದ್ದರು. ಸ್ಕ್ರಿಪ್ಟ್ ಪರಿಪೂರ್ಣವಾಗುವವರೆಗೂ ಶೂಟಿಂಗ್ ಶುರು ಮಾಡದ ಚಿತ್ರತಂಡ, ಇದೀಗ ಎಲ್ಲ ಸಿದ್ಧತೆಗಳೊಂದಿಗೆ ಚಿತ್ರೀಕರಣಕ್ಕೆ ಅಣಿಯಾಗಿದೆ. ಅದರ ಮೊದಲ ಕಾರ್ಯವಾಗಿ ಮಾರ್ಚ್ 15ರಂದು ‘ಅವನೇ ಶ್ರೀಮನ್ನಾರಾಯಣ’ಕ್ಕೆ ಮುಹೂರ್ತ ಮಾಡಲಾಗುತ್ತಿದೆ. ವಿಶೇಷವೆಂದರೆ, ಚಿತ್ರದ ಬಹುಭಾಗ ಚಿತ್ರೀಕರಣ ಸೆಟ್​ನಲ್ಲೇ ನಡೆಯಲಿದೆ. ಅದಕ್ಕಾಗಿ ಕೋಟಿ ಕೋಟಿ ಹಣ ಖರ್ಚು ಮಾಡುವುದಕ್ಕೆ ನಿರ್ವಪಕರು ಸಿದ್ಧರಾಗಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕಾಗಿ ಬೃಹತ್ ಸೆಟ್ ಹಾಕಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡುವ ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ‘ಚಿತ್ರದ ಶೇ.60ರಷ್ಟು ಚಿತ್ರೀಕರಣ ಸೆಟ್​ನಲ್ಲೇ ನಡೆಯಲಿದೆ. 80ರ ದಶಕದಲ್ಲಿ ಕಥೆ ಸಾಗುವುದರಿಂದ ರೆಟ್ರೋ ಮಾದರಿಯಲ್ಲಿ ಸೆಟ್ ಹಾಕುತ್ತಿದ್ದೇವೆ. ಅದಕ್ಕೆಂದೇ ಐದು ತಿಂಗಳು ಜಾಗವನ್ನು ಬಾಡಿಗೆಗೆ ಪಡೆದುಕೊಂಡಿದ್ದೇವೆ. ಅದರಲ್ಲಿ ಕೋಟೆ, 80-90ರ ದಶಕದ ಪಬ್ ಸೇರಿ ಮೂರು ಬಗೆಯ ಸೆಟ್ ಇರಲಿವೆ. ಬಾಗಲಕೋಟೆಯಿಂದ 30 ಕಿ.ಮೀ ದೂರದ ಹಳ್ಳಿಯೊಂದರಲ್ಲಿ ಶೇ.30 ಭಾಗ ಚಿತ್ರೀಕರಣ ಮಾಡುವ ಪ್ಲಾ್ಯನ್ ಇದೆ. ಅಲ್ಲದೆ, ರಾಜಸ್ಥಾನದ ಸಾಂಬಾರ್ ಲೇಕ್​ನಲ್ಲೂ ಶೂಟಿಂಗ್ ಮಾಡಲಿದ್ದೇವೆ ಎಂದು ಮಾಹಿತಿ ನೀಡುತ್ತಾರೆ.

ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಗೆಟಪ್​ನಲ್ಲಿ ರಕ್ಷಿತ್ ಶೆಟ್ಟಿ ಕಾಣಿಸುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ ನಟಿಸುತ್ತಿದ್ದಾರೆ. ಉಳಿದಂತೆ ಅಚ್ಯುತ್​ಕುಮಾರ್ ಪ್ರಮುಖ ಪಾತ್ರದಲ್ಲಿ ನಟಸಿದರೆ, ಖಳನಾಯಕನಾಗಿ ಬಾಲಾಜಿ ಮನೋಹರ್ ಇದ್ದಾರೆ. ಬಹುಭಾಷಾ ನಟ ಮಧುಸೂದನ್ ಕೂಡ ಮುಖ್ಯಪಾತ್ರದಲ್ಲಿದ್ದಾರೆ. ‘ಮುಖ್ಯಪಾತ್ರಗಳಿಗೆ ಈಗಾಗಲೇ ಕಲಾವಿದರ ಆಯ್ಕೆಯಾಗಿದೆ. ‘ಕಿರಿಕ್ ಪಾರ್ಟಿ’, ‘ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಚಿತ್ರಗಳಲ್ಲಿ ಬಣ್ಣ ಹಚ್ಚಿದ ಸುಮಾರು 25ಕ್ಕೂ ಅಧಿಕ ಕಲಾವಿದರು ಈ ಚಿತ್ರದ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಪುಷ್ಕರ್.

ಸಂಕಲನಕಾರ ಸಚಿನ್ ರವಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಬಡ್ತಿ ಪಡೆಯುತ್ತಿದ್ದಾರೆ. ಚರಣ್ ರಾಜ್ ಮತ್ತು ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಛಾಯಾಗ್ರಹಣದ ಹೊಣೆ ಕರಮ್ ಚಾವ್ಲಾ ಅವರದ್ದು.

ಉತ್ತರ ಕರ್ನಾಟಕದಲ್ಲಿ ಮಾರ್ಚ್ 20ರಿಂದ ಚಿತ್ರೀಕರಣ ಪ್ರಾರಂಭ. ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೆ ಅದ್ದೂರಿಯಾಗಿ ಸೆಟ್ ಹಾಕುತ್ತಿದ್ದು, ನೋಡುವುದಕ್ಕೆ ವಿಶಿಷ್ಟವಾಗಿರಲಿದೆ. ಚಿತ್ರದ ಬಜೆಟ್​ಗೆ ಯಾವುದೇ ಮಿತಿ ಹಾಕಿಕೊಂಡಿಲ್ಲ.

| ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ

Leave a Reply

Your email address will not be published. Required fields are marked *

Back To Top