Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ

Wednesday, 15.11.2017, 3:00 AM       No Comments

ಬೆಳ್ತಂಗಡಿ: ಧರ್ಮಸ್ಥಳ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಮಕ್ಷಮ ಲಕ್ಷದೀಪೋತ್ಸವ ಧಾರ್ವಿುಕ ಪೂಜಾ ಕಾರ್ಯಗಳಿಗೆ ಸೋಮವಾರ ರಾತ್ರಿ ಹೊಸಕಟ್ಟೆ ಉತ್ಸವದೊಂದಿಗೆ ವಿಧ್ಯುಕ್ತ ಚಾಲನೆ ನೀಡಲಾಗಿದೆ.

ಉತ್ಸವ ಪ್ರಯುಕ್ತ ಪಲ್ಲಕ್ಕಿ ಹೊತ್ತು ದೇವಳಕ್ಕೆ 16 ಸುತ್ತು ಬಂದ ಬಳಿಕ ಮಂಜುನಾಥ ಸ್ವಾಮಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆಯೊಂದಿಗೆ ವಸಂತ ಮಹಲ್​ನ ಹೊಸಕಟ್ಟೆ ಬಳಿ ಕರೆದೊಯ್ಯಲಾಯಿತು. ದೇವಳದ 2 ಆನೆಗಳು ಸ್ವಾಮಿಗೆ ಚಾಮರ ಬೀಸಿದವು. ವಿಶೇಷ ಪೂಜೆ, ನೈವೇದ್ಯ ಸೇರಿ ಅಷ್ಟ ವಿಧದ ಸೇವೆ ನೆರವೇರಿಸಲಾಯಿತು. ವಸಂತ ಮಹಲ್​ನಿಂದ ಜತೆಗಿದ್ದ ರಥದೊಂದಿಗೆ ದೇವಸ್ಥಾನಕ್ಕೆ ಮೆರವಣಿಗೆ ಮರಳಿತು. ಬೆಳ್ಳಿರಥದೊಂದಿಗೆ ಒಂದು ಸುತ್ತು ಹಾಕಿದ ನಂತರ ಹೊಸಕಟ್ಟೆ ಉತ್ಸವ ಸಂಪನ್ನಗೊಂಡಿತು. ಲಕ್ಷದೀಪೋತ್ಸವ ಅಂಗವಾಗಿ ಮಂಗಳವಾರ ರಾತ್ರಿ ಕೆರೆಕಟ್ಟೆ ಉತ್ಸವ ನೆರವೇರಿತು.

ಇಂದು ಲಲಿತೋದ್ಯಾನ ಉತ್ಸವ

ಲಕ್ಷದೀಪೋತ್ಸವ ಅಂಗವಾಗಿ ನ.15ರಂದು ಲಲಿತೋದ್ಯಾನ ಉತ್ಸವ ನಡೆಯಲಿದೆ. ಸಾಯಂಕಾಲ 5.30ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ನೃತ್ಯರೂಪಕ, ಬಾಲ ಕಲಾವಿದರಿಂದ ಯಕ್ಷಗಾನ. ಅಮೃತವರ್ಷಿಣಿ ಸಭಾಭವನದಲ್ಲಿ ಮಧ್ಯಾಹ್ನ 3ರಿಂದ ವಾದ್ಯ ಕಚೇರಿ, ಎಂ.ಡಿ ಪಲ್ಲವಿ ಅವರಿಂದ ಸುಗಮ ಸಂಗೀತ, ಹಿಂದುಸ್ತಾನಿ ಶಾಸ್ತ್ರೀಯ ಗಾನ ವೈಭವ ಕಾರ್ಯಕ್ರಮಗಳಿರುತ್ತವೆ.

ಬೆಳ್ಳಿರಥದ ಉತ್ಸವ

ಹೊಸಕಟ್ಟೆ ಉತ್ಸವದಂದು ಭಕ್ತರೊಬ್ಬರ ಹರಕೆಯಂತೆ ಬೆಳ್ಳಿರಥದೊಂದಿಗೆ ಪಲ್ಲಕ್ಕಿಯ ಮೆರವಣಿಗೆ ವಿಶೇಷವಾಗಿತ್ತು. ಹೊಸಕಟ್ಟೆಯಲ್ಲಿ ಪೂಜೆ ಬಳಿಕ ಮೆರವಣಿಗೆ ದೇವಳದತ್ತ ಸಾಗಿತು. ಧರ್ಮಸ್ಥಳ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸಿತು. ದೇವಸ್ಥಾನದ ಮುಂಭಾಗದಲ್ಲಿ ಹಣತೆಯ ದೀಪ ಹಚ್ಚಿದರೆ ಸಂಕಷ್ಟ ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇದೆ. ಹಲವು ಭಕ್ತರು ಹಣತೆಯ ದೀಪ ಬೆಳಗಿಸುತ್ತಿದ್ದುದು ಕಂಡುಬಂತು.

Leave a Reply

Your email address will not be published. Required fields are marked *

Back To Top