Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಶ್ರಮ ಏವ ಜಯತೇ

Tuesday, 14.11.2017, 3:00 AM       No Comments

ಮಂಜಯ್ಯ ಮತ್ತು ಬಹುಗುಣ ಎಂಬ ಶ್ರಮಜೀವಿ ಸ್ನೇಹಿತರಿದ್ದರು. ಒಂದು ದಿನ ಬಹುಗುಣ ಮೃತನಾದ. ಬಹಳ ದಿನಗಳವರೆಗೆ ಮಂಜಯ್ಯನಿಗೆ ಈ ವಿಷಯ ಗೊತ್ತಾಗಿರಲಿಲ್ಲ. ಸ್ನೇಹಿತನನ್ನು ಕಾಣಬೇಕು ಎಂದು ಒಂದು ದಿನ ಮಂಜಯ್ಯ ಆಗಮಿಸಿದ. ಬಹುಗುಣನ ಮಗ ಎಲ್ಲ ವಿಚಾರ ಹೇಳಿದ. ಸಹಜವಾಗಿ ಮಂಜಯ್ಯನಿಗೆ

ದುಃಖವಾಯಿತು. ಬಹುಗುಣನ ಮಗ, ‘ಮಂಜಯ್ಯನವರೇ; ನಮ್ಮ ಆತಿಥ್ಯ ಸ್ವೀಕರಿಸಿಯೇ ತೆರಳಬೇಕು’ ಎಂದ. ಮಂಜಯ್ಯ ಒಪ್ಪಿದ. ಅನೇಕ ಪಕ್ವಾನ್ನ, ಭಕ್ಷಾದಿಗಳನ್ನು ಮಾಡಿ ಊಟ ಬಡಿಸಿದರು. ಒಂದು ತುತ್ತು ಬಾಯಲ್ಲಿ ಇಟ್ಟ ಕೂಡಲೇ ಮಂಜಯ್ಯ, ‘ಛೀ! ಆಹಾರವೆಲ್ಲ ಹಳಸಿಹೋಗಿದೆ’ ಎಂದ. ಬಹುಗುಣನ ಮಗ, ‘ಸ್ವಾಮಿ ಎಲ್ಲವೂ ಬಿಸಿಬಿಸಿಯಾಗಿದೆ. ಉತ್ತಮ ಧಾನ್ಯ ಮತ್ತು ತುಪ್ಪ ಬಳಸಿ ಮನೆಯವರೇ ಊಟ ಸಿದ್ಧ ಪಡಿಸಿದ್ದಾರೆ. ಹಳಸುವುದು ಹೇಗೆ?’ ಎಂದ. ಆಗ ಮಂಜಯ್ಯ, ‘ಮಗಾ! ಇದರಲ್ಲಿ ಐವತ್ತು ವರ್ಷ ಹಿಂದಿನ ಗಂಧ ಬರುತ್ತಿದೆ. ನನ್ನ ಮಿತ್ರ ಬಹುಗುಣ ಸತ್ತು ಆರು ತಿಂಗಳಾಯಿತು. ನೀನು ಅಂದಿನಿಂದ ಕೇವಲ ಆತನ ಸಂಪತ್ತು, ಐಶ್ವರ್ಯವನ್ನು ದುಂದುವೆಚ್ಚ ಮಾಡಿರುವೆ. ನೀನು ಒಂದು ಪೈಸೆಯಷ್ಟೂ ಶ್ರಮ ವಹಿಸಿ ದುಡಿದಿಲ್ಲ. ಹಾಗಾಗಿ ಹಳಸಿದೆ. ನೀನೇ ದುಡಿದ ಹಣದಿಂದ ಸಿದ್ಧ ಪಡಿಸಿದ ಆಹಾರವಿದ್ದರೆ ಮಾತ್ರ ನನಗೆ ಬಡಿಸು’ ಎಂದ. ಬಹುಗುಣನ ಮಗ, ‘ಸ್ವಾಮಿ! ಅಪರಾಧವಾಯಿತು. ಇನ್ನು ಮುಂದೆ ಕಷ್ಟಪಟ್ಟು ದುಡಿದು ಸಂಪಾದಿಸುವೆ. ವರ್ಷದ ಬಳಿಕ ಪುನಃ ಬನ್ನಿ. ನಿಮ್ಮ ಪ್ರೀತಿಯ ಅಡುಗೆ ಖಂಡಿತ ಬಡಿಸುವೆ’ ಎಂದ. ಹಿರಿಯರು ಗಳಿಸಿದ್ದು ಎಷ್ಟೇ ಇರಬಹುದು, ಆದರೆ ನಾವು ದುಡಿದೇ ತಿನ್ನಬೇಕು.

Leave a Reply

Your email address will not be published. Required fields are marked *

Back To Top