Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ

Thursday, 12.10.2017, 3:02 AM       No Comments

| ಸ್ವಾಮಿ ಹರ್ಷಾನಂದಜೀ, ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು

ಪ್ರತಿಯೊಂದು ಧರ್ಮದಲ್ಲಿಯೂ ಕೂಡ ಮರಣೋತ್ತರ ಜೀವನದ ಬಗ್ಗೆ ಅವರವರದ್ದೇ ಕಲ್ಪನೆಗಳಿರುತ್ತವೆ. ನಮ್ಮ ಬುದ್ಧಿಶಕ್ತಿಯ ವ್ಯಾಪ್ತಿಯಿಂದಾಚೆಗೆ ಇರುವ ವಿಷಯಗಳಲ್ಲಿ ನಾವು ಶಾಸ್ತ್ರಗಳನ್ನು ಮತ್ತು ಋಷಿಮುನಿಗಳನ್ನು ಅವಲಂಬಿಸಬೇಕು. ಅತೀಂದ್ರಿಯ ವಿಷಯಗಳಿಗೆ ಶಾಸ್ತ್ರವೇ ಆಧಾರ ಮತ್ತು ಪ್ರಮಾಣವೆಂದು ಶಂಕರಾಚಾರ್ಯರು ಸ್ಪಷ್ಟವಾಗಿ ಹೇಳಿದ್ದಾರೆ. ಮನುಷ್ಯ ಮರಣಿಸಿದಾಗ, ಮರಣಿಸಿದ ನಂತರ ಅವನ ಗತಿ, ನಾವು ಅವನಿಗೆ ಮಾಡಬೇಕಾದ ಕರ್ಮ ಇತ್ಯಾದಿಗಳನ್ನು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.

ಪಿತೃಗಳಲ್ಲಿ ಎರಡು ರೀತಿ. ಒಂದು ರೀತಿಯ ಪಿತೃಗಳು ದೇವತೆಗಳಂತಿದ್ದು, ಅವರದ್ದೇ ಲೋಕದಲ್ಲಿ ಶಾಶ್ವತವಾಗಿ ವಾಸಿಸುವರು. ಎರಡನೇ ರೀತಿಯ ಪಿತೃಗಳು – ದೇಹ ಬಿಟ್ಟ ನಮ್ಮ ತಂದೆ, ತಾತ, ಮುತ್ತಾತ ಇತ್ಯಾದಿಗಳು ಅವರ ಪ್ರಾರಬ್ಧಕರ್ಮದಂತೆ ಮತ್ತೊಂದು ಜನ್ಮವಾಗುವವರೆಗೂ ಪಿತೃಲೋಕದಲ್ಲಿ ಕಾಯುತ್ತಿರುತ್ತಾರೆ. ಇದಕ್ಕಾಗಿ ವರ್ಷಕ್ಕೊಮ್ಮೆ ಶ್ರಾದ್ಧ ಮಾಡಬೇಕು. ಪಿತೃಗಳು ಪಿತೃಲೋಕದಲ್ಲಿರುವವರೆಗೂ ಶ್ರಾದ್ಧದ ಮೂಲಕ ನಾವು ಅವರಿಗೆ ಆಹಾರವನ್ನು ಕೊಡಬೇಕು. ಭೂಲೋಕದ ಒಂದು ವರ್ಷವು ಪಿತೃಲೋಕದ ಒಂದು ದಿನಕ್ಕೆ ಸಮನಾದ್ದರಿಂದ, ಸಂಪ್ರದಾಯದಂತೆ ಅನ್ನದ ಉಂಡೆಗಳನ್ನು ದರ್ಭೆಯ ಮೇಲಿಟ್ಟು ಮಂತ್ರಪೂರ್ವಕವಾಗಿ, ತಂದೆ, ತಾತ, ಮುತ್ತಾತ ಹೀಗೆ ಹಿಂದಿನ ಮೂರು ಪೀಳಿಗೆಗಳನ್ನು ಆಹ್ವಾನಿಸಬೇಕು. ಅವರು ಸೂಕ್ಷ್ಮರೂಪದಲ್ಲಿ ಬಂದು ಆಹಾರವನ್ನು ಸ್ವೀಕರಿಸುವವರು. ಮತ್ತೊಂದು ಸಂಪ್ರದಾಯದಂತೆ ಪಿತೃಗಳು ಕಾಗೆಯ ರೂಪದಲ್ಲಿ ಬಂದು ಆಹಾರವನ್ನು ಸ್ವೀಕರಿಸುವರೆಂಬ ನಂಬಿಕೆಯಿದೆ.

ಅನೇಕ ಬಾರಿ ಮಹಾತ್ಮರ ಜೀವನದಲ್ಲಿ ಶ್ರಾದ್ಧದ ಬಗೆಗೆ ವಿಶೇಷ ಘಟನೆಗಳನ್ನು ಕಾಣುತ್ತೇವೆ. ಶ್ರಾದ್ಧದಲ್ಲಿ ಬ್ರಾಹ್ಮಣರು ಭೋಜನ ಮಾಡುವುದರ ಮೂಲಕ ಪಿತೃಗಳಿಗೆ ತೃಪ್ತಿ. ಕೆಲವು ವೇಳೆ ಈ ಮಹಾತ್ಮರ ಬಗ್ಗೆ ದ್ವೇಷವಿರುವ ಬ್ರಾಹ್ಮಣರು ಉದ್ದೇಶಪೂರ್ವಕವಾಗಿ ಭೋಜನಕ್ಕೆ ಬರುವುದಿಲ್ಲ. ಆಗ ಆ ಮಹಾತ್ಮರು ದುಃಖಪಡದೆ, ತಮ್ಮ ತಪಸ್ಸಿನ ಶಕ್ತಿಯಿಂದ ಪಿತೃಗಳನ್ನೇ ಕರೆಸುವರು. ಅವರು ತಾವು ಜೀವಂತವಾಗಿದ್ದ ರೂಪದಲ್ಲಿಯೇ ಬರುವರು. ಸಂತ ಏಕನಾಥರ ಜೀವನದಲ್ಲಿ ಇಂತಹ ಘಟನೆ ನಡೆಯುವುದು. ಪಿತೃಗಳೇ ಸಾಕ್ಷಾತ್ತಾಗಿ ಬಂದು ಆಹಾರವನ್ನು ಸ್ವೀಕರಿಸಿ ತೆರಳುವರು. ಘಟನೆಯನ್ನು ಕಂಡ ಇತರರು ಏಕನಾಥರ ಕಾಲಿಗೆ ಬಿದ್ದು ಕ್ಷಮೆ ಬೇಡಿದರು.

ಇಂದಿಗೂ ಕೂಡ ಬಹುತೇಕ ಜನರು (ಶೇ. 95) ಶ್ರಾದ್ಧವನ್ನು ನಂಬಿದ್ದಾರೆ. ಶಾಸ್ತ್ರಗಳಲ್ಲಿ ಹೇಳಿರುವ ಕರ್ಮವನ್ನು ಶ್ರದ್ಧೆಯಿಂದ ಮಾಡುತ್ತಿರುವರು. ‘ಶ್ರಾದ್ಧ’ ಎಂಬ ಚಿಕ್ಕ ಪುಸ್ತಕವನ್ನು ಓದಿದವರೊಬ್ಬರಿಂದ ಪತ್ರ. ಅದರಲ್ಲಿ, ‘ತನಗೆ ಶ್ರಾದ್ಧದಲ್ಲಿ ನಂಬಿಕೆಯಿರಲಿಲ್ಲ. ತಂದೆ ಸತ್ತ ನಂತರ ಶ್ರಾದ್ಧವನ್ನೇ ಮಾಡಿರಲಿಲ್ಲ. ಪುಸ್ತಕ ಓದಿದ ನಂತರ ಶ್ರಾದ್ಧದ ಮೇಲೆ ನಂಬಿಕೆ ಬಂದಿತು. ಈ ವರ್ಷದಿಂದ ಶ್ರಾದ್ಧ ಮಾಡಲು ಆರಂಭಿಸಿರುವೆ’ ಎಂದು ಬರೆದಿತ್ತು.

Leave a Reply

Your email address will not be published. Required fields are marked *

Back To Top