Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ಶೌಚಗೃಹಕ್ಕಾಗಿ ವಿದ್ಯಾರ್ಥಿನಿಯರ ಪಟ್ಟು

Thursday, 14.09.2017, 3:00 AM       No Comments

 

ಕೊಪ್ಪಳ: ಶೌಚಗೃಹ ನಿರ್ಮಾಣ ಸಂಬಂಧ ಜಿಲ್ಲೆಯ ಗಂಗಾವತಿ ತಾಲೂಕು ಢಣಾಪುರದ ವಿದ್ಯಾರ್ಥಿನಿ ಮಲ್ಲಮ್ಮ ಉಪವಾಸ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದಳು. ಪ್ರಧಾನಿ ನರೇಂದ್ರ ಮೋದಿ, ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಲ್ಲಮ್ಮಳ ಕಾರ್ಯವನ್ನು ಶ್ಲಾಘಿಸಿದ್ದರು. ಈಗ ಇದೇ ಹಾದಿಯನ್ನು ಕೊಪ್ಪಳ ತಾಲೂಕು ಕಾಮನೂರಿನ ಮೂವರು ವಿದ್ಯಾರ್ಥಿನಿಯರು ತುಳಿದಿದ್ದು, ಶೌಚಗೃಹ ನಿರ್ವಣಕ್ಕಾಗಿ ಉಪವಾಸ ಹಾಗೂ ದೇವರ ಮೇಲೆ ಶಪಥ ಮಾಡುವ ಮೂಲಕ ಪಾಲಕರ ಮನವೊಲಿಸಿದ್ದಾರೆ.

ಎಂಟನೇ ತರಗತಿ ವಿದ್ಯಾರ್ಥಿನಿ ಅಕ್ಷತಾ ಮತ್ತು ಆರನೇ ತರಗತಿಯ ವಿದ್ಯಾ, ಶೌಚಗೃಹ ಕಟ್ಟಿಸುವಂತೆ ಮೂರು ದಿನ ಉಪವಾಸ ಮಾಡಿದ್ದಾರೆ. ಇನ್ನೊಬ್ಬ ವಿದ್ಯಾರ್ಥಿನಿ, ಆರನೇ ತರಗತಿಯ ಸಂಗೀತಾ, ಗ್ರಾಮದ ದುರ್ಗಾದೇವಿ ಮೇಲೆ ಶೌಚಗೃಹ ನಿರ್ಮಾಣ ಮಾಡಿಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿದ್ದಾಳೆ. ಬಳಿಕ ಮನೆಯವರ ಬಳಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಈ ಮೂರೂ ಮಕ್ಕಳ ಆಸೆಯಂತೆ ಅವರ ಪಾಲಕರು ಶೌಚಗೃಹಕ್ಕೆ ಸಿದ್ಧತೆ ನಡೆಸಿದ್ದಾರೆ.

 

ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಶೌಚಗೃಹ ನಿರ್ವಣವಾಗಲಿವೆ. ಇದಕ್ಕೆ ವಿದ್ಯಾರ್ಥಿಗಳು ಸಹಕಾರ ನೀಡುತ್ತಿರುವುದು ಶ್ಲಾಘನೀಯ.

| ವೆಂಕಟರಾಜಾ, ಜಿಪಂ ಸಿಇಒ ಕೊಪ್ಪಳ

 

ನಮ್ಮ ಮಗಳು ಶೌಚಗೃಹ ನಿರ್ವಿುಸಿ ಕೊಳ್ಳುತ್ತೇವೆಂದು ದುರ್ಗಾದೇವಿಯ ಮೇಲೆ ಪ್ರಮಾಣ ಮಾಡಿರುವುದಾಗಿ ನನಗೆ ತಿಳಿಸಿದ್ದಾಳೆ. ಮಗಳ ಆಸೆಯಂತೆ ಈಗ ಶೌಚಗೃಹ ನಿರ್ಮಾಣ ಮಾಡುತ್ತಿದ್ದೇವೆ.

| ಸಿದ್ದಪ್ಪ ಸಂಗಟಿ, ವಿದ್ಯಾರ್ಥಿನಿ ಸಂಗೀತಾ ತಂದೆ

Leave a Reply

Your email address will not be published. Required fields are marked *

Back To Top