Monday, 11th December 2017  

Vijayavani

1. ಮತ್ತಷ್ಟು ಹದಗೆಟ್ಟ ರವಿ ಬೆಳಗೆರೆ ಆರೋಗ್ಯ – ಕಾಲು ನೋವು, ನಿಶ್ಯಕ್ತಿಯಿಂದ ಪತ್ರಕರ್ತನ ನರಳಾಟ – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ 2. ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರ್ – ರವಿ ಬೆಳಗೆರೆ ವಿರುದ್ಧ ಮತ್ತೊಂದು ಕೇಸ್‌ – ಪತ್ರಕರ್ತನಿಗೆ ಜೈಲಾ..? ಬೇಲಾ..? 3. ಬಳ್ಳಾರಿಯಲ್ಲಿ ಗಣಿಗಾರಿಕೆ ವಿರುದ್ಧ ಕೂಗು – ಕುಮಾರಸ್ವಾಮಿ ಬೆಟ್ಟ ಉಳಿವಿಗೆ ಸಂಡೂರು ಬಂದ್ – ಅಂಗಡಿ, ಮುಂಗಟ್ಟುಗಳಿಗೆ ಬೀಗ, ಶಾಲಾ-ಕಾಲೇಜಿಗೆ ರಜೆ 4. ರಾಜ್ಯ ಸರ್ಕಾರದಿಂದ ಬಿಜೆಪಿ ಹತ್ತಿಕ್ಕುವ ಕೆಲಸ – ರ‍್ಯಾಲಿಯಲ್ಲಿ ಭಾಗಿಯಾದವ್ರ ವಿರುದ್ಧ ಟ್ರಾಫಿಕ್‌ ಪೊಲೀಸ್‌ ಕೇಸ್ – ಕಲಬುರಗಿಯಲ್ಲಿ ಖಾಕಿ, ಕೇಸರಿ ಕದನ 5. ಪ್ರಧಾನಿ ಮೋದಿ ರ‍್ಯಾಲಿಗೆ ಅವಕಾಶವಿಲ್ಲ – ಮೆಗಾ ರೋಡ್​ ಶೋಗೆ ಅನುಮತಿ ನಿರಾಕರಣೆ – ರಾಹುಲ್ ಸಮಾವೇಶಕ್ಕೂ ಗುಜರಾತ್ ಪೊಲೀಸರ ತಡೆ
Breaking News :

ಶೀಘ್ರವೇ ಬಿಸಿಪಿ ಟಿವಿ ವಾಹಿನಿ ಆರಂಭ!

Saturday, 20.05.2017, 3:08 AM       No Comments

ಬೆಂಗಳೂರು: ಬಹುನಿರೀಕ್ಷೆಯಲ್ಲಿದ್ದ ಬೆಂಗಳೂರು ಸಿಟಿ ಪೊಲೀಸರ ಟಿವಿ ಚಾನೆಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.

‘ನಾವು ಮೊದಲೇ ಹೇಳಿದಂತೆ, ನಾವು ನಿಮ್ಮನ್ನು ನೋಡುತ್ತಿದ್ದೇವೆ. ನೀವೂ ನಮ್ಮನ್ನು ನೋಡಬಹುದು. ಬಿಸಿಪಿ ಟಿವಿ ಶೀಘ್ರದಲ್ಲಿ ಬರಲಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ 4 ಸೆಕೆಂಡ್​ಗಳ ವಿಡಿಯೋ ಅಪ್​ಲೋಡ್ ಮಾಡಿದ್ದು, ಬೆಂಗಳೂರು ನಗರ ಪೊಲೀಸರ ಲಾಂಛನದ ಕೆಳಗೆ ಇಂಗ್ಲಿಷ್ ಅಕ್ಷರಗಳಲ್ಲಿ ಟಿವಿ ಎಂದು ಇದೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬೆಂಗಳೂರು ಪೊಲೀಸರು, ಇನ್​ಸ್ಟಾಗ್ರಾಂನಲ್ಲಿ ಖಾತೆ ತೆರೆದ ದೇಶದ ಪ್ರಥಮ ಪೊಲೀಸರು ಎಂದು ಹೆಗ್ಗಳಿಕೆ ಗಳಿಸಿದ್ದರು. ಅದೇ ರೀತಿ ಈಗ ಬೆಂಗಳೂರು ಪೊಲೀಸರಿಂದ ಮತ್ತೊಂದು ಪ್ರಥಮವನ್ನು ನಿರೀಕ್ಷೆ ಮಾಡಿ ಎಂದು ಟ್ವೀಟ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಲೈವ್: ಬೆಂಗಳೂರು ಪೊಲೀಸರು ಪ್ರಾರಂಭಿಸಲಿರುವ ಟಿವಿ ಕೇಬಲ್ ಅಥವಾ ಸೆಟಲೈಟ್ ಚಾನಲ್ ಆಗಿರುವುದಿಲ್ಲ. ಬದಲಿಗೆ ಇದು ಸಾಮಾಜಿಕ ಜಾಲ ತಾಣಗಳಲ್ಲಿ ಇರುತ್ತದೆ. ಪ್ರಮುಖವಾಗಿ ಫೇಸ್​ಬುಕ್​ನಲ್ಲಿ 24 ಗಂಟೆ ಲೈವ್ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತದೆ. ಕೇವಲ ಅಪರಾಧ ಸುದ್ದಿಗಳಿಗೆ ಬದಲಾಗಿ, ಚಾನಲ್ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಗಳಿರಲಿವೆ. ಅಪರಾಧ ನಿಯಂತ್ರಣದ ಬಗ್ಗೆ ಸಾರ್ವಜನಿಕರು ತೆಗೆದು ಕೊಳ್ಳಬೇಕಿರುವ ಕ್ರಮಗಳ ಬಗ್ಗೆ ವಿಡಿಯೋಗಳು ಪ್ರಸಾರ ಆಗಲಿವೆ.

ಇದಕ್ಕೆ ಹಲವಾರು ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ. ಜಾಹೀರಾತು ಇಲ್ಲದೇ ಖಚಿತ ಸುದ್ದಿ ಪ್ರಸಾರ ಮಾಡಿ ಎಂದು ಅರ್ಜುನ್ ಎಂಬುವರು ಹೇಳಿದ್ದರೆ, ಸಾರ್ವಜನಿಕರನ್ನು ಪೊಲೀಸರು ತಲುಪುತ್ತಿರುವ ವಿಧಾನ ಇಷ್ಟವಾಗುತ್ತದೆ ಎಂದು ಸಾಗರ್ ಎಂಬುವರು ಪ್ರತಿಕ್ರಿಯೆ ನೀಡಿದ್ದಾರೆ. ಅಭಿನಯ್ ಸಕ್ಸೇನಾ ಎಂಬುವರು ಇದೊಂದು ಉತ್ತಮ ಹೆಜ್ಜೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top